ಸೋನಿಯಾ ಗಾಂಧಿ ಅವರ ಆಪ್ತ ಸಹಾಯಕರ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲು

ಹೊಸ ದೆಹಲಿ – ಓರ್ವ ದಲಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇರೆಗೆ ಸೋನಿಯಾ ಗಾಂಧಿ ಅವರ ೭೧ ವರ್ಷದ ಆಪ್ತ ಸಹಾಯಕ ಪಿ.ಪಿ. ಮಾಧವನ್ ವಿರುದ್ಧ ಪ್ರಕರಣ ದಾಖಲಾಗಿದೆ. ಮದುವೆ ಮತ್ತು ಕೆಲಸ ಕೊಡಿಸುವ ನೆಪದಲ್ಲಿ ಮಾಧವನ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಮಾಧವನ್ ತನಗೆ ಕೊಲೆ ಬೆದರಿಕೆ ಹಾಕುತ್ತಿರುವುದರಿಂದ ರಕ್ಷಣೆಯನ್ನೂ ಕೋರಿದ್ದಾಳೆ. ೨೦೨೦ ರಲ್ಲಿ ಅವರ ಪತಿ ನಿಧನರಾದರು. ಅವರು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಆರೋಪಗಳನ್ನು ತಳ್ಳಿಹಾಕಿದ ಮಾಧವನ್, ಈ ಆರೋಪಗಳು ನಿರಾಧಾರ ಮತ್ತು ಒಂದು ಪಿತೂರಿಯಾಗಿವೆ ಎಂದು ಹೇಳಿದ್ದಾರೆ.