ಆಂಧ್ರಪ್ರದೇಶ ಸರಕಾರದ ಡ್ರೋನ ವೈಮಾನಿಕ ತರಬೇತಿಯ ಯೋಜನೆಗಾಗಿ ಕೇವಲ ಮುಸಲ್ಮಾನ ಹಾಗೂ ಕ್ರೈಸ್ತ ತರುಣರ ಆಯ್ಕೆ !

ಭಾಜಪದ ಟೀಕೆ

ಅಮರಾವತಿ (ಆಂಧ್ರಪ್ರದೇಶ) – ಆಂಧ್ರಪ್ರದೇಶದಲ್ಲಿನ ಜಗನ ಮೋಹನ ರೆಡ್ಡಿ ಸರಕಾರವು ಆರಂಭಿಸಿದ ಡ್ರೋನ್ ವೈಮಾನಿಕ ತರಬೇತಿಯ ಯೋಜನೆಯಲ್ಲಿ ಕೇವಲ ಮುಸಲ್ಮಾನ ಹಾಗೂ ಕ್ರೈಸ್ತ ಪಂಥದ ಜನರಿಗೆ ಮಾತ್ರ ತರಬೇತಿ ನೀಡಲಾಗುತ್ತಿದೆ. ಈ ಬಗ್ಗೆ ರಾಜ್ಯದ ಭಾಜಪದ ಅಧ್ಯಕ್ಷರಾದ ವಿಷ್ಣುವರ್ಧನ ರೆಡ್ಡಿಯವರು ಟೀಕಿಸಿದ್ದಾರೆ.

೧. ವಿಷ್ಣುವರ್ಧನ ರೆಡ್ಡಿಯವರು ಟ್ವೀಟ್‌ ಮಾಡಿ ಒಂದು ಪೋಸ್ಟನ್ನು ಪ್ರಸಾರ ಮಾಡಿದ್ದಾರೆ. ಇದರಲ್ಲಿ ರಾಜ್ಯದಲ್ಲಿ ‘ಡ್ರೋನ್ ಇನಸ್ಟಿಟ್ಯೂಟ್‌ ಆಫ್‌ ಟೆಕನಾಲಾಜಿ’ಯಿಂದ ಒಂದು ಪಠ್ಯಕ್ರಮದ ಮಾಹಿತಿಯನ್ನು ನೀಡಲಾಗಿದೆ. ಇದರಲ್ಲಿ ಕೇವಲ ಮುಸಲ್ಮಾನ ಹಾಗೂ ಕ್ರೈಸ್ತ ಅಭ್ಯರ್ಥಿಗಳಿಗೆ ತರಬೇತಿ ಹಾಗೂ ಉದ್ಯೋಗ ನೀಡುವುದಾಗಿ ಆಶ್ವಾಸನೆ ನೀಡಲಾಗಿದೆ. ಈ ಪೋಸ್ಟನಲ್ಲಿ ಮುಖ್ಯಮಂತ್ರಿ ಜಗನ ಮೋಹನ ರೆಡ್ಡಿಯವರ ಛಾಯಾಚಿತ್ರವಿದೆ.

೨. ವಿಷ್ಣುವರ್ಧನ ರೆಡ್ಡಿಯವರು ಮಾತನಾಡುತ್ತ, ಸಾಧನಗಳ ಮೇಲೆ ಎಲ್ಲರಿಗೂ ಸಮಾನ ಅಧಿಕಾರವಿದೆ, ಆದರೂ ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ಕೇವಲ ೨ ಧರ್ಮದ ವಿದ್ಯಾರ್ಥಿಗಳಿಗಾಗಿಯೇ ತರಬೇತಿಯನ್ನು ಏಕೆ ಆಯೋಜಿಸಿದ್ದಾರೆ ? ಇದರಿಂದ ಧಾರ್ಮಿಕ ಒತ್ತಡ ನಿರ್ಮಾಣವಾಗಬಹುದು. ಆಂಧ್ರಪ್ರದೇಶ ಸರಕಾರವು ನಮ್ಮ ವಿದ್ಯಾರ್ಥಿಗಳ ಸಂದರ್ಭದಲ್ಲಿ ಕೊಳಕು ರಾಜಕಾರಣ ಮಾಡುತ್ತಿದೆ. ಅವರು ಈ ನಿರ್ಣಯವನ್ನು ಹಿಂದೆ ಪಡೆಯಬೇಕು’ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

  • ಯಾವುದಾದರೂ ರಾಜ್ಯ ಇಂತಹ ತರಬೇತಿಯನ್ನು ಕೇವಲ ಹಿಂದೂಗಳಿಗಾಗಿ ಮಾಡಿದ್ದರೆ ಇಲ್ಲಿಯ ವರೆಗೆ ಪ್ರಸಾರಮಾಧ್ಯಮಗಳು, ಪುರೋಗಾಮಿಗಳು ಮುಂತಾದವರು ಆಕಾಶ-ಪಾತಾಳ ಒಂದು ಮಾಡಿರುತ್ತಿದ್ದರು ! ಈಗ ಇವರೆಲ್ಲರೂ ಏಕೆ ಸುಮ್ಮನಿದ್ದಾರೆ ?
  • ಆಂಧ್ರಪ್ರದೇಶದಲ್ಲಿ ಜಗನಮೋಹನ ರೆಡ್ಡಿಯವರ ಸರಕಾರ ಬಂದಾಗಿನಿಂದ ಕ್ರೈಸ್ತರ ಓಲೈಕೆ ಹಾಗೂ ಅವರಿಗೆ ಮಹತ್ವ ನೀಡುವ ಘಟನೆಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ. ಈ ಸ್ಥಿತಿಯನ್ನು ತಡೆಯಲು ಹಿಂದೂ ರಾಷ್ಟ್ರದ ಹೊರತು ಪರ್ಯಾಯವಿಲ್ಲ !