ಪೈಗಂಬರನ ಮೇಲಿನ ಹೇಳಿಕೆಯಿಂದ ಭಾರತದ ಘನತೆಗೆ ಧಕ್ಕೆಯಾಗಿದೆ ! – ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ಡೋವಾಲ

ನವದೆಹಲಿ – ಅಮಾನತುಗೊಂಡಿರುವ ಭಾಜಪದ ವಕ್ತಾರರಾದ ನೂಪುರ ಶರ್ಮಾ ಮತ್ತು ನವೀನ ಜಿಂದಾಲ ಅವರು ಪ್ರವಾದಿ ಮೊಹಮ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರಿಂದ ಅವರ ಹೇಳಿಕೆಯ ಕುರಿತು ಹಲವಾರು ರಾಜ್ಯಗಳಲ್ಲಿ ಹಿಂಸಾಚಾರವನ್ನು ಹುಟ್ಟು ಹಾಕಿದರೆ ಭಾರತವನ್ನು ಇಸ್ಲಾಮಿಕ ದೇಶಗಳು ಖಂಡಿಸಿದವು. ಈ ಹಿನ್ನೆಲೆಯಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ಡೋವಾಲ ಅವರು ‘ಈ ಹೇಳಿಕೆಯಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಎಂದೂ ಇಲ್ಲದಿರುವಂತಹ ಒಂದು ಪ್ರತಿಮೆ ಸಿದ್ಧವಾಗಿದೆ. ಇಗ ಒಂದು ಪರ್ಯಾಯ ಉಳಿದಿದೆ ಅಷ್ಟೆ, ನಾವು ನಮ್ಮ ಪರವನ್ನು ಮಂಡಿಸುವುದು. ನಾವು ದೇಶದ ಒಳಗೆ ಮತ್ತು ಹೊರಗೆ ಯಾರನ್ನೆಲ್ಲಾ ಭೇಟಿಯಾಗುತ್ತೆವೆಯೋ ಅವರನ್ನು ನಮ್ಮ ಪರದ ಬಗ್ಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದೇವೆ’, ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದರು.

ಸಂಪಾದಕೀಯ ನಿಲುವು

ಪಾಕಿಸ್ತಾನ, ಬಾಂಗ್ಲಾದೇಶ ಹಾಗೆಯೇ ಕೊಲ್ಲಿರಾಷ್ಟ್ರಗಳಲ್ಲಿನ ಇಸ್ಲಾಮಿಕ ದೇಶಗಳು ಅಲ್ಪಸಂಖ್ಯಾತರನ್ನು ಹಿಂಸಿಸುತ್ತಿವೆ, ಅದೇ ರೀತಿ ಹಿಂದೂಗಳ ನರಮೇಧ ಮಾಡುತ್ತಿವೆ, ಆದರೆ ಅವರು ಎಂದೂ ತಮ್ಮ ಪ್ರತಿಮೆ ಬಗ್ಗೆ ಯೋಚಿಸುವದಿಲ್ಲ ಮತ್ತು ಭಾರತವು ಉತ್ತರವನ್ನು ಕೇಳುವದಿಲ್ಲ, ಅದರ ಬಗ್ಗೆ ಯಾರು ಮಾತನಾಡುತ್ತಾರೆ ?