ಭಾಜಪ ನೇತೃತ್ವ ಎನ್‌ಡಿಎಯಿಂದ ದ್ರೌಪದಿ ಮುರ್ಮು ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿ ಎಂದು ಘೋಷಣೆ

ವಿರೋಧ ಪಕ್ಷದಿಂದ ಮಾಜಿ ಕೇಂದ್ರ ಹಣಕಾಸು ಸಚಿವ ಯಶವಂತ ಸಿನ್ಹಾ ಇವರು ಅಭ್ಯರ್ಥಿ

ನವ ದೆಹಲಿ – ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಹುದ್ದೆಯ ಚುನಾವಣೆಗಾಗಿ ಭಾಜಪ ನೇತೃತ್ವದ ಎನ್‌ಡಿಎಯಿಂದ ಒಡಿಶಾ ಮೂಲದ ಮತ್ತು ಪ್ರಸ್ತುತ ಜಾರ್ಖಂಡಿನ ರಾಜ್ಯಪಾಲ ದ್ರೌಪದಿ ಮುರ್ಮು ಇವರನ್ನು ಅಭ್ಯರ್ಥಿ ಎಂದು ಘೋಷಿಸಲಾಗಿದೆ. ‘ರಾಲೋವೋ’ದಿಂದ ಈ ಸ್ಥಾನಕಾಗಿ ಉತ್ತರಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ ಮತ್ತು ಛತ್ತಿಸಗಢದ ರಾಜ್ಯಪಾಲ ಅನುಸಿಯಿಯಾ ಉಯಿಕೆ ಇವರ ಹೆಸರುಗಳು ಚರ್ಚೆಗೆ ಬಂದಿತ್ತು.

ಇನ್ನೊಂದು ಕಡೆ ಕಾಂಗ್ರೆಸ್ ಜೊತೆ ಎಲ್ಲ ಪ್ರಮುಖ ವಿರೋಧಿ ಪಕ್ಷದವರು ಮಾಜಿ ಕೇಂದ್ರ ಹಣಕಾಸು ಸಚಿವ ಯಶವಂತ ಸಿನ್ಹಾ ಇವರನ್ನು ರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಿಸಿದೆ. ರಾಷ್ಟ್ರವಾದಿ ಕಾಂಗ್ರೆಸ್‌ನ ಅಧ್ಯಕ್ಷ ಶರದ ಪವಾರ, ನೇಷನಲ್ ಕಾನ್ಫರೆನ್ಸ್‌ನ ಪ್ರಮುಖ ಫಾರುಕ ಅಬ್ದುಲ್ಲಾ ಮತ್ತು ಮಹಾತ್ಮ ಗಾಂಧಿ ಇವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರ ಹೆಸರು ರಾಷ್ಟ್ರಪತಿ ಅಭ್ಯರ್ಥಿಯ ಸ್ಥಾನಕ್ಕಾಗಿ ಚರ್ಚೆಯಲ್ಲಿ ಇತ್ತು; ಆದರೆ ಮೂರು ಜನರು ನಿರಾಕರಿಸಿದರು. ಕೊನೆಗೆ ಯಶವಂತ ಸಿನ್ಹಾ ಇವರ ಹೆಸರು ಒಮ್ಮತದಿಂದ ಎಲ್ಲ ವಿರೋಧಿ ಪಕ್ಷದಿಂದ ಸಮ್ಮತಿಸಿದರು.
ಜೂನ್ ೨೯ ರಂದು ಅಭ್ಯರ್ಥಿಯ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಜುಲೈ ೧೮ ರಂದು ರಾಷ್ಟ್ರಪತಿ ಸ್ಥಾನಕ್ಕೆ ಮತದಾನ ನಡೆಯುವುದು. ಮತ್ತು ಜುಲೈ ೨೧ ರಂದು ತೀರ್ಪು ಘೋಷಿಸಲಾಗುವುದು.

ಯಾರು ದ್ರೌಪದಿ ಮುರ್ಮು ?

ದ್ರೌಪದಿ ಮುರ್ಮು ಇವರು ಒಡಿಶಾದ ಬುಡಕಟ್ಟು ಜನಾಂಗದ ನಾಯಕಿಯಾಗಿದ್ದಾರೆ. ಝಾರ್ಖಂಡದ ೯ ನೇ ರಾಜ್ಯಪಾಲ ಮುರ್ಮೂ ಇವರು ಒಡಿಶಾದ ರಾಯರಂಗಪೂರದಿಂದ ಸಂಸದರಾಗಿದ್ದರು. ರಾಜ್ಯಪಾಲ ಆಗಿರುವ ಅವರು ಒಡಿಶಾದ ಮೊದಲು ಮಹಿಳಾ ನಾಯಕಿ ಆಗಿದ್ದರೆ. ಈ ಮೊದಲು ೨೦೦೨ ರಿಂದ ೨೦೦೪ ನೇ ಕಾಲದಲ್ಲಿ ಒಡಿಶಾ ರಾಜ್ಯದ ಭಾಜಪ-ಬಿಜು ಜನತಾದಳ ಪಕ್ಷಗಳ ಸಂಯುಕ್ತ ಸರಕಾರದಲ್ಲಿ ಸಚಿವರಾಗಿದ್ದರು.