ಮುಜಾಫ್ಫರನಗರ (ಉತ್ತರ ಪ್ರದೇಶ) ಇಲ್ಲಿಯ ನಗರ ಪಾಲಿಕೆಯ ಸಭೆಯಲ್ಲಿ ‘ವಂದೇ ಮಾತರಂ’ ಗೀತೆ ನಡೆಯುತ್ತಿರುವಾಗ ೪ ಬೂರ್ಖಾಧಾರಿ ನಗರಸೇವಕಿಯರು ಕುಳಿತಿದ್ದರು !

ಮುಝಫ್ಫರನಗರ (ಉತ್ತರಪ್ರದೇಶ) – ಇಲ್ಲಿಯ ನಗರಪಾಲಿಕೆಯ ಸಭೆಯಲ್ಲಿ ಮುಸಲ್ಮಾನ ನಗರಸೇವಕರು ರಾಷ್ಟ್ರೀಯ ಗೀತೆ ಅವಮಾನಗೊಳಿಸಿದ್ದಾರೆ. ಈ ಘಟನೆಯ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದರಲ್ಲಿ ‘ವಂದೆ ಮಾತರಂ’ ಗೀತೆ ನಡೆಯುತ್ತಿರುವಾಗ ಎಲ್ಲ ನಗರ ಸೇವಕರು ಎದ್ದು ನಿಂತಿದ್ದರು, ಆದರೆ ೪ ಬುರ್ಖಾಧಾರಿ ಮಹಿಳಾ ನಗರಸೇವಕರು ಕುಳಿತಿದ್ದರು. ಈ ಸಭೆಯಲ್ಲಿ ಕೇಂದ್ರ ಪಶುಸಂಗೋಪನ ಮತ್ತು ವೀನುಗಾರಿಕೆ ಸಚಿವರ ಸಂಜೀವ ಬಲಿಯಾನ ಅವರೂ ಕೂಡ ಉಪಸ್ಥಿತರಿದ್ದರು. ಬಲಿಯಾನ ಇವರು ಈ ಘಟನೆಯ ವಿಷಯವಾಗಿ ಪ್ರತಿಕ್ರಿಯಿಸುತ್ತಾ, ಮಹಿಳೆಯರೇ ರಾಷ್ಟೀಯ ಗೀತೆಯ ಅವಮಾನ ಮಾಡಿದರೆ, ಸಮಾಜ ಹೇಗೆ ಸದೃಢಗೊಳ್ಳುವುದು ? ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಂಥವರ ನಗರಸೇವಕರ ಸ್ಥಾನ ರದ್ದು ಮಾಡುವ ಬಗ್ಗೆ ಇತರ ಜನಪ್ರತಿನಿಧಿ ಮತ್ತು ದೇಶಪ್ರೇಮಿ ಜನರು ಸರಕಾರಕ್ಕೆ ಒತ್ತಾಯಿಸಬೇಕು !