‘ಅಗ್ನಿಪಥ’ ಯೋಜನೆಯ ವಿರುದ್ಧದ ಹಿಂಸಾಚಾರದಿಂದಾಗಿ ರೇಲ್ವೆಗೆ ೭೦೦ ಕೋಟಿ ರೂಪಾಯಿಗಳ ಹಾನಿ

ನವದೆಹಲಿ – ಕೇಂದ್ರ ಸರಕಾರದ ‘ಅಗ್ನಿಪಥ’ ಯೋಜನೆಯ ವಿರುದ್ಧ ಕಳೆದ ೫ ದಿನಗಳಿಂದ ಹಿಂಸಾಚಾರಿ ಆಂದೋಲನವನ್ನು ಮಾಡಲಾಗುತ್ತಿದೆ. ಇದರಲ್ಲಿ ಸಾರ್ವಜನಿಕ ಸಂಪತ್ತಿಗೆ ಬೆಂಕಿ ಹಚ್ಚುವುದು ಹಾಗೂ ಒಡೆದು ಹಾಕುವುದನ್ನು ಮಾಡಲಾಗುತ್ತಿದೆ. ಸಾರ್ವಜನಿಕ ಹಾಗೂ ಖಾಸಗಿ ಸಂಪತ್ತಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಇದರಲ್ಲಿ ಅತ್ಯಂತ ಹೆಚ್ಚಿನ ಹಾನಿಯು ರೈಲ್ವೆ ಆಡಳಿತಕ್ಕೆ ಆಗಿದೆ. ಸುಮಾರು ೭೦೦ ಕೋಟಿ ರೂಪಾಯಿಗಳ ಹಾನಿಯಾಗಿರುವುದಾಗಿ ಅಂದಾಜಿಸಲಾಗಿದೆ. ರೇಲ್ವೆಯ ೬೦ ಡಬ್ಬಿಗಳಿಗೆ ಹಾಗೂ ೧೧ ಇಂಜಿನಗಳಿಗೆ ಬೆಂಕಿ ಹಚ್ಚಲಾಯಿತು. ಈ ಹಿಂಸಾಚಾರದಿಂದಾಗಿ ರೈಲ್ವೆಯ ೩೫೦ಕ್ಕೂ ಹೆಚ್ಚಿನ ಗಾಡಿಗಳನ್ನು ರದ್ದುಗೊಳಿಸಲಾಯಿತು. ರೇಲ್ವೆ ನಿಲ್ದಾಣದಲ್ಲಿ ವಿಧ್ವಂಸ ನಡೆಸಲಾಯಿತು. ವಿಕ್ರಮಶಿಲಾ ಎಕ್ಸಪ್ರೆಸ್‌ನಲ್ಲಿ ದೋಚಲಾಯಿತು.

ಸಂಪಾದಕೀಯ ನಿಲುವು

* ಕೇವಲ ರೇಲ್ವೆ ಆಡಳಿತಕ್ಕೆ ಇಷ್ಟೊಂದು ಹಾನಿಯಾಗಿದ್ದರೆ ಎಷ್ಟೊಂದು ಪ್ರಮಾಣದಲ್ಲಿ ಇತರ ಸಾರ್ವಜನಿಕ ಸಂಪತ್ತಿನ ಹಾನಿಯಾಗಿರಬಹುದು, ಎಂಬುದರ ಕಲ್ಪನೆಯನ್ನೂ ಮಾಡಲು ಸಾಧ್ಯವಿಲ್ಲ. ಈ ಹಾನಿಗೆ ಜವಾಬ್ದಾರವಾಗಿರುವವರನ್ನು ಹಿಡಿದು ಅವರಿಂದ ಇದರ ವಸೂಲಿ ಮಾಡಲು ಅವರ ಎಲ್ಲ ಸಂಪತ್ತನ್ನು ಜಪ್ತು ಮಾಡಬೇಕು, ಆಗಲೇ ಅವರು ಸರಿಯಾದ ಪಾಠ ಕಲಿಯುವರು !