ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆಗೆ ವಿರೋಧ

ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ಹಿಂಸಾತ್ಮಕ ಪ್ರತಿಭಟನೆ: ದ್ವಿಚಕ್ರ ವಾಹನಗಳು, ಬಸ್‌ಗಳು ಮತ್ತು ಜೀಪ್‌ಗಳಿಗೆ ಬೆಂಕಿ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ವಿರುದ್ಧ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ಸತತ ಎರಡನೇ ದಿನವೂ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ. ಜೂನ್ ೧೮ರಂದು ಬೆಳಗ್ಗೆ ನೂರಾರು ಯುವಕರು ಬೀದಿಗಿಳಿದಿದ್ದರು. ಬದಲಾಪುರ ಮತ್ತು ಲಾಲಾ ಬಜಾರ್‌ನಲ್ಲಿ ಪ್ರತಿಭಟನಾಕಾರರು ಹಲವಾರು ದ್ವಿಚಕ್ರ ವಾಹನಗಳು, ಎರಡು ಬಸ್‌ಗಳು ಮತ್ತು ಜೀಪ್‌ಗೆ ಬೆಂಕಿ ಹಚ್ಚಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಗುಂಡು ಹಾರಿಸಿ ನಂತರ ಗಾಳಿಯಲ್ಲಿ ಗುಂಡು ಹಾರಿಸಿದರು.
ಬದಲಾಪುರ ಬಳಿ ರಾಜ್ಯ ಮಾಹಿತಿ ಆಯುಕ್ತ ಪ್ರಮೋದ್ ತಿವಾರಿಯವರು ತೆರಳುತ್ತಿದ್ದ ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಯಿತು. ಈ ಘಟನೆಯಲ್ಲಿ ಪೊಲೀಸ್ ಉಪ ನಿರೀಕ್ಷಕ ರಾಜೇಂದ್ರ ಯಾದವ್ ಮತ್ತು ಪೊಲೀಸ್ ಸಿಬ್ಬಂಧಿ ರಾಮ್ ಯಾದವ್ ಗಾಯಗೊಂಡಿದ್ದಾರೆ. ಜೌನಪುರ-ಪ್ರಯಾಗ್‌ರಾಜ್ ಹೆದ್ದಾರಿಯಲ್ಲಿ ಬಹಳ ಹೊತ್ತು ಸಂಚಾರ ದಟ್ಟಣೆ ಉಂಟಾಗಿತ್ತು. ಬದಲಾಪುರದ ಹಲವೆಡೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು.