ಸರಗುಜಾ (ಛತ್ತೀಸಗಡ) ಶಿವಾಲಯದಲ್ಲಿ ಧ್ವಂಸ

ಹಿಂದೂ ಸಂಘಟನೆಗಳಿಂದ ರಾಷ್ಟ್ರೀಯ ಹೆದ್ದಾರಿ ಬಂದ್!

ಸರಗುಜಾ (ಛತ್ತೀಸಗಢ) – ಇಲ್ಲಿನ ಶಾಂತಿಪಾರಾ ಪ್ರದೇಶದ ಶಿವ ದೇವಾಲಯದಲ್ಲಿನ ಶಿವ ಮತ್ತು ನಂದಿಯ ವಿಗ್ರಹಗಳನ್ನು ಅಪರಿಚಿತ ವ್ಯಕ್ತಿಗಳು ಧ್ವಂಸಗೊಳಿಸಿದ್ದಾರೆ. ಇದರಿಂದ ಕುಪಿತಗೊಂಡ ಹಿಂದೂಗಳು ಮತ್ತು ಅವರ ಸಂಘಟನೆಗಳು ಇಲ್ಲಿನ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ ಮಾಡಿದ್ದವು. ವಿಧ್ವಂಸಕ ಪ್ರಕರಣವನ್ನು ಪೊಲೀಸರಲ್ಲಿ ದಾಖಲಿಸಲಾಗಿದೆ. ಇಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಬ್ರಿಜ್‌ಭೂಷಣ ಎಂಬಾತನನ್ನು ಬಂಧಿಸಿದ್ದಾರೆ. ಸರಾಯಿ ಕುಡಿದ ಗುಂಗಿನಲ್ಲಿ ತಾನೇ ಮಾಡಿರುವುದಾಗಿ ಆತನೇ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಛತ್ತೀಸಗಡದಲ್ಲಿ ಕಾಂಗ್ರೆಸ್ ಸರಕಾರವಿದೆ. ಇದರಿಂದಲೇ ಶಂಕಿತನೇ ಆರೋಪಿಯಾಗಿದ್ದಾನೇನು? ಅಥವಾ ಯಾರನ್ನೋ ರಕ್ಷಿಸಬೇಕೆಂದು ಒತ್ತಡ ಹೇರಿ ಶಂಕಿತನನ್ನೇ ಆರೋಪಿಯನ್ನಾಗಿಸಲಾಗಿದೆ ಎಂಬ ಸಂದೇಹ ಬರುತ್ತದೆ !