ದ್ವೇಷದಿಂದ ತುಂಬಿದ ಭಾಷಣದ ಪರಿಣಾಮವಾಗಿ ಕಾಶ್ಮೀರದಲ್ಲಿ ಹಿಂದೂಗಳು ಪಲಾಯನಗೊಂಡರು ! – ದೆಹಲಿ ಉಚ್ಚನ್ಯಾಯಾಲಯ

ಹೊಸ ದೆಹಲಿ – ದ್ವೇಷದಿಂದ ತುಂಬಿದ ಭಾಷಣಗಳು ಯಾವಾಗಲೂ ಒಂದು ಸಮುದಾಯವನ್ನು ಗುರಿಯಾಗಿರಿಸಿಕೊಳ್ಳುತ್ತವೆ. ಇದರಿಂದ ಈ ಸಮಾಜದ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಇದು ಅವರಲ್ಲಿ ಭಯ ಹುಟ್ಟಿಸುತ್ತದೆ. ಇಂತಹ ಭಾಷಣಗಳು ಸಂಬಂಧಪಟ್ಟ ಸಮಾಜದ ಮೇಲಿನ ದಾಳಿಯ ಮೊದಲ ಹಂತವಾಗಿದೆ. ಅದರ ನಂತರ ಬಹಿಷ್ಕಾರ ಹಾಕುವುದು, ಅವರನ್ನು ಓಡಿಹೋಗುವಂತೆ ಒತ್ತಾಯಿಸುವುದು ಮತ್ತು ನಂತರ ನರಮೇಧ. ಜನಸಂಖ್ಯೆಯ ಆಧಾರದ ಮೇಲೆ ಸಮಾಜವನ್ನು ಗುರಿಪಡಿಸಲಾಗುತ್ತದೆ. ಇಂತಹ ಘಟನೆಗಳು ದೇಶದ ಹಲವು ಕಡೆ ನಡೆದಿವೆ ಮತ್ತು ನಡೆಯುತ್ತಿವೆ. ಇದು ಭೌಗೋಲಿಕ ಜನಸಂಖ್ಯೆಯನ್ನೂ ಬದಲಾಯಿಸಿದೆ. ಇದಕ್ಕೆ ಮುಖ್ಯ ಉದಾಹರಣೆಯೆಂದರೆ ಕಾಶ್ಮೀರ ಕಣಿವೆಯಿಂದ ಕಾಶ್ಮೀರಿ ಹಿಂದೂಗಳ ಪಲಾಯನ ಎಂದು ದೆಹಲಿ ಉಚ್ಚನ್ಯಾಯಾಲಯ ಅರ್ಜಿಯೊಂದರ ವಿಚಾರಣೆ ವೇಳೆ ಹೇಳಿದೆ. ೨೦೨೦ ರ ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಭಾಜಪದ ಸಂಸದ ಪ್ರವೇಶ್ ಸಾಹಿಬ್ ಸಿಂಗ್ ವರ್ಮಾ ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸಿಪಿಐ (ಎಂ) ನಾಯಕಿ ವೃಂದಾ ಕರಾತ ಇವರು ಸಲ್ಲಿಸಿದ ಅರ್ಜಿಯ ಮೇಲೆ ನ್ಯಾಯಾಲಯವು ಮೇಲಿನ ಹೇಳಿಕೆಯನ್ನು ನೀಡಿದೆ. ಈ ಅರ್ಜಿಯನ್ನು ಉಚ್ಚನ್ಯಾಯಾಲಯ ನಿರಾಕರಿಸಿದೆ.