ಬಿಜೆಪಿಯ ಅಮಾನತುಗೊಂಡಿರುವ ನಾಯಕ ನವೀನ ಜಿಂದಾಲ ಅವರಿಗೆ ಜಿಹಾದಿಗಳಿಂದ ಜೀವ ಬೆದರಿಕೆಗಳು

ಪ್ರವಾದಿ ಮೊಹಮ್ಮದ ಅವರನ್ನು ಅವಮಾನಿಸಿದ ಕಥಿತ ಆರೋಪದ ಪ್ರಕರಣ

ನವೀನ ಜಿಂದಾಲ (ಎಡಗಡೆ )

ನವದೆಹಲಿ- ಪ್ರವಾದಿಯನ್ನು ಅವಮಾನಿಸಿದರೆಂಬ ಕಥಿತ ಆರೋಪದ ಮೆಲೆ ನೂಪುರ ಶರ್ಮಾ ಮತ್ತು ಅವರ ದೆಹಲಿ ಶಾಖೆಯ ಮಾಧ್ಯಮ ಮುಖ್ಯಸ್ಥ ನವೀನ ಜಿಂದಾಲ ಅವರನ್ನು ಬಿಜೆಪಿ ಅಮಾನತುಗೊಳಿಸಿದೆ. ಜಿಂದಾಲ ಮತ್ತು ಅವರ ಕುಟುಂಬಕ್ಕೆ ಈಗ ಜಿಹಾದಿಗಳಿಂದ ಕೊಲೆ ಬೆದರಿಕೆಗಳು ಬಂದಿವೆ. ಈ ಕುರಿತು ಟ್ವೀಟ ಮಾಡಿ ಮಾಹಿತಿ ನೀಡಿರುವ ಅವರು ದೆಹಲಿ ಪೊಲೀಸರಿಂದ ಸಂಬಂಧಿತರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ನವೀನ ಜಿಂದಾಲವರು ಟ್ವೀಟ ಮಾಡುತ್ತ ಹೇಳಿದ್ದೆನೆಂದರೆ ನಾನು ಎಲ್ಲರಲ್ಲಿ ಮತ್ತೊಮ್ಮೆ ವಿನಂತಿಸುವುದೆನೆಂದರೇ `ನನ್ನ ಅಥವಾ ನನ್ನ ಕುಟುಂಬದ ಬಗ್ಗೆ ಯಾವುದೇ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಬೇಡಿ’. ನನ್ನ ವಿನಂತಿಯ ನಂತರವೂ ಅನೇಕ ಜನರು ನನ್ನ ಮನೆಯ ವಿಳಾಸವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸರಿಸುತ್ತಿದ್ದಾರೆ.

ಸಂಪಾದಕೀಯ ನಿಲುವು

* ಬೆದರಿಕೆ ಹಾಕುವವರು ಕಾನೂನನ್ನು ಪಾಲಿಸುವುದಿಲ್ಲವೋ ಅಥವಾ ಅದನ್ನು ನಂಬುವದಿಲ್ಲವೋ? ಅವರು ಯಾವಾಗಲೂ ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡು ತಮಗೆ ಬೇಕಾದುದನ್ನು ಮಾಡುತ್ತಾರೆ. ಅವರ ವಿರುದ್ಧದಲ್ಲಿ ತಥಾಕಥಿತ ಸೆಕ್ಯುಲರಿಸ್ಟಗಳು ಕೂಡಾ ಬಾಯಿ ತೆರೆಯುವದಿಲ್ಲ. ಇದನ್ನೆ ಈ ದೇಶದಲ್ಲಿ `ಸೆಕ್ಯುಲರಿಸಂ’ ಎನ್ನುತ್ತಾರೆ!