ನೇಪಾಳದಲ್ಲಿ ನೂಪುರ ಶರ್ಮ ಇವರ ಸಮರ್ಥನಾರ್ಥ ಸಾವಿರಾರು ಹಿಂದೂಗಳಿಂದ ಅನೇಕ ಸ್ಥಳಗಳಲ್ಲಿ ಮೆರವಣಿಗೆಗಳು!

ಕಾಟ್ಮಂಡು (ನೇಪಾಳ) – ನೇಪಾಳದ ರಾಜಧಾನಿ ಕಾಟ್ಮಂಡು ಹಾಗೂ ಬೀರಗಂಜ, ಪೀರಗಂಜ ಮತ್ತು ಇತರ ಅನೇಕ ನಗರಗಳಲ್ಲಿ ಹಿಂದೂಗಳಿಂದ ಭಾಜಪದ ಅಮಾನತುಗೊಂಡಿರುವ ವಕ್ತಾರೆ ನೂಪುರ ಶರ್ಮಾ ಇವರ ಸಮರ್ಥನೆಯಲ್ಲಿ ಮೆರವಣಿಗೆಗಳನ್ನು ನಡೆಸಲಾಯಿತು. ಇದರಲ್ಲಿ ಸಾವಿರಾರು ಹಿಂದೂಗಳು ಭಾಗವಹಿಸಿದರು. ಈ ಸಮಯದಲ್ಲಿ ಹಿಂದೂಗಳು ಜೈ ಹಿಂದೂ, ಜಯ ಹಿಂದುತ್ವ, ಜೈ ಶ್ರೀ ರಾಮ ಮತ್ತು ಪಾಕಿಸ್ತಾನ್ ಮುರ್ದಾಬಾದ ಈ ಪೋಷಣೆಗಳನ್ನು ನೀಡಿದರು. ಯಾರು ಹಿಂದೂ ಶಿವ ಮತ್ತು ರಾಮನವರಲ್ಲವೋ ಅವನು ಯಾವುದಕ್ಕೂ ಪ್ರಯೋಜನವಿಲ್ಲ ಎಂದು ಬರೆದಿರುವ ಫಲಕಗಳನ್ನು ಕೈಯಲ್ಲಿ ಹಿಡಿದಿದ್ದರು.

ಈ ವಿಷಯವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ ಬಿರಗಂಜ ಇಲ್ಲಿಯ ಮೆರವಣಿಗೆಯಲ್ಲಿ ಸಹಭಾಗಿಯಾಗಿದ್ದ ಒಬ್ಬ ಸಂತರು ಹೀಗೆಂದರು, ಶ್ರದ್ಧಾ ಸ್ಥಳಗಳ ಅವಮಾನ ಆಗುತ್ತಿರುವಾಗ ನಾವು ಸುಮ್ಮನಿರಲು ಸಾಧ್ಯವಿಲ್ಲ, ಈ ಮೊದಲು ಹಿಂದೂಗಳನ್ನು ಬಯ್ಯುವುದು ಈಗ ಪಾಕಿಸ್ತಾನದಲ್ಲಿ ಹಿಂದೂಗಳ ಮಂದಿರಗಳನ್ನು ನಾಶಮಾಡಲಾಗಿದೆ. ಭಾರತದ ಮುಸಲ್ಮಾನರು ಹಿಂಸಾಚಾರ ನಡೆಸಿದ್ದಾರೆ. ಇದರ ವಿರುದ್ಧ ನಾವು ಶಾಂತಿಯಲ್ಲಿ ಮೆರವಣಿಗೆ ತೆಗೆದು ನಮ್ಮ ಧರ್ಮದ ರಕ್ಷಣೆ ಮಾಡುತ್ತಿದ್ದೇವೆ. ಇದರಲ್ಲಿ ಕೆಲವು ಜಿಹಾದಿಗಳು ತೊಂದರೆ ತರುವ ಪ್ರಯತ್ನಿಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಭಾರತದ ಹಿಂದೂಗಳಿಗೆ ಮತ್ತು ಅದರ ಸಂಘಟನೆಗಳಿಗೆ ಕಪಾಳಮೋಕ್ಷ ! ನೇಪಾಳದ ಜಾಜ್ವಲ್ಯಮಾನ ಧರ್ಮಾಭಿಮಾನಿ ಹಿಂದೂಗಳಿಂದ ಭಾರತದಲ್ಲಿನ ಜನ್ಮ ಹಿಂದೂಗಳು ಮತ್ತು ಅದರ ಸಂಘಟನೆಗಳು ಏನಾದರೂ ಕಲಿಯುವರೇನು ?