‘ತಿಥಿಗನುಸಾರ ೨೨.೫.೨೦೨೨ ಈ ದಿನ ಪರಾತ್ಪರ ಗುರು ಡಾ. ಆಠವಲೆಯವರ ೮೦ ನೇ ಹುಟ್ಟುಹಬ್ಬವಿತ್ತು. ಅದರ ನಿಮಿತ್ತ ಅವರ ರಥೋತ್ಸವವನ್ನು ಮಾಡಲು ಸಪ್ತರ್ಷಿಗಳು ‘ಸಪ್ತರ್ಷಿ ಜೀವನಾಡಿ ಪಟ್ಟಿ’ಯಲ್ಲಿ ಹೇಳಿದಂತೆ, ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ ಹೇಳಿದ್ದರು. ಈ ರಥೋತ್ಸವದ ಮಾರ್ಗವನ್ನು ಗೋವಾದ ಸನಾತನದ ರಾಮನಾಥಿ ಆಶ್ರಮದಿಂದ ನಾಗೇಶಿಯ ಸಾಧಕರ ನಿವಾಸದ ವರೆಗೆ, ಅಂದರೆ ೧ ಕಿ.ಮೀ. ರಸ್ತೆ ಮತ್ತು ಪುನಃ ನಾಗೇಶಿಯಿಂದ ರಾಮನಾಥಿ ಆಶ್ರಮಕ್ಕೆ ೧ ಕಿ.ಮೀ. ರಸ್ತೆ ಎಂದು ನಿಶ್ಚಯಿಸಲಾಗಿತ್ತು. ರಥೋತ್ಸವದ ಸಮಯ ಮಧ್ಯಾಹ್ನ ೩ ರಿಂದ ೫ ಇತ್ತು. ಈ ರಥೋತ್ಸವದ ೩ ದಿನ ಮೊದಲಿನಿಂದಲೇ ಧಾರಾಕಾರ ಮಳೆ ಬರುತ್ತಿತ್ತು. ಈ ರಥೋತ್ಸವದ ಸಮಯದಲ್ಲಿ ಮಳೆ, ಗಾಳಿಗಳ ಮಾಧ್ಯಮದಿಂದ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಯಾವುದೇ ಅಡಚಣೆಗಳು ಬರಬಾರದೆಂದು, ಹಾಗೆಯೇ ಈ ರಥೋತ್ಸವವು ಸಪ್ತರ್ಷಿಗಳು ಮತ್ತು ಪರಾತ್ಪರ ಗುರು ಡಾ. ಆಠವಲೆಯವರಿಗೆ ಅಪೇಕ್ಷಿತ ಇರುವಂತೆ ನೆರವೇರಬೇಕು ಮತ್ತು ಸಪ್ತರ್ಷಿಗಳಿಗೆ ಅಪೇಕ್ಷಿತವಿರುವ ಈ ರಥೋತ್ಸವದ ಕಾರ್ಯವು ಸಂಪೂರ್ಣ ಫಲದಾಯಕವಾಗಬೇಕೆಂದು, ನನಗೆ ನಾಮಜಪ ಮುಂತಾದ ಉಪಾಯಗಳನ್ನು ಮಾಡುವ ಜವಾಬ್ದಾರಿಯನ್ನು ನೀಡಲಾಗಿತ್ತು. ಈ ಸಂದರ್ಭದಲ್ಲಿ ಗುರುದೇವರು ನನ್ನಿಂದ ಮುಂದಿನ ಸೇವೆಗಳನ್ನು ಮಾಡಿಸಿಕೊಂಡರು.
೧. ರಥೋತ್ಸವಕ್ಕೆ ದೇವತೆಗಳ ಆಶೀರ್ವಾದ ಸಿಗಬೇಕೆಂದು ಆಶ್ರಮದ ಪರಿಸರದಲ್ಲಿನ ಮೂರು ದೇವತೆಗಳ ಎದುರು ಶ್ರೀಫಲವನ್ನು ಇಡುವಾಗ ಬಹಳ ಪ್ರಸನ್ನವೆನಿಸುವುದು ಮತ್ತು ಆನಂದದ ಅರಿವಾಗುವುದು
ರಾಮನಾಥಿ ಆಶ್ರಮದ ಪರಿಸರದಲ್ಲಿ ಶ್ರೀ ಸಿದ್ಧಿವಿನಾಯಕ, ಶ್ರೀ ಭವಾನಿದೇವಿ ಮತ್ತು ಸೇತುರಕ್ಷಕ ಹನುಮಾನ ಈ ದೇವತೆಗಳಿದ್ದಾರೆ. ರಥೋತ್ಸವಕ್ಕೆ ಈ ದೇವತೆಗಳ ಆರ್ಶೀವಾದ ಸಿಗಬೇಕೆಂದು, ರಥೋತ್ಸವದ ಹಿಂದಿನ ದಿನ ಈ ದೇವತೆ ಗಳ ಎದುರು ಪ್ರತಿಯೊಬ್ಬರಿಗೂ ಒಂದು ಶ್ರೀಫಲ (ತೆಂಗಿನಕಾಯಿ)ವನ್ನು ಇಡಬೇಕಿತ್ತು ಅದಕ್ಕಾಗಿ ನಾನು ಶುಭಸಮಯವನ್ನು ನೋಡಲು ಸನಾತನದ ಸಾಧಕ-ಪುರೋಹಿತರಿಗೆ ಹೇಳಿದೆನು. ಅವರು ಮಧ್ಯಾಹ್ನ ೧೨ ರಿಂದ ೨ ಗಂಟೆಯ ವರೆಗಿನ ಸಮಯವು ಚೆನ್ನಾಗಿದೆ ಎಂದು ಹೇಳಿದರು. ನಾನು ಆಯಾ ದೇವತೆಗೆ ಆಯಾ ಶ್ಲೋಕವನ್ನು ಹೇಳಲು ಒಬ್ಬ ಸಾಧಕ-ಪುರೋಹಿತರನ್ನು ಜೊತೆಗೆ ಕರೆದುಕೊಂಡೆನು. ನಾನು ಆಯಾ ದೇವತೆಯ ಎದುರು ಶ್ರೀಫಲವನ್ನಿಡುವ ಮೊದಲು ಮುಂದಿನಂತೆ ಪ್ರಾರ್ಥನೆಯನ್ನು ಮಾಡಿದೆನು.
‘ಹೇ ದೇವಾ, ನಿನಗೆ ನಾಳೆ ಸಚ್ಚಿದಾನಂದ ಪರಬ್ರಹ್ಮಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರ ರಥೋತ್ಸವವಿರುವುದು ತಿಳಿದಿದೆ. ಆದುದರಿಂದ ನೀನು ಎಲ್ಲ ದಿಕ್ಕುಗಳನ್ನು ಚೈತನ್ಯಮಯವನ್ನಾಗಿಸು ಮತ್ತು ರಥೋತ್ಸವಕ್ಕಾಗಿ ನಿಸರ್ಗವನ್ನು ಅನುಕೂಲಗೊಳಿಸು.
ರಥೋತ್ಸವದಲ್ಲಿ ಆಧ್ಯಾತ್ಮಿಕ ಸ್ವರೂಪದ ಯಾವುದೇ ಅಡಚಣೆಗಳು ಬರಬಾರದು. ನಮ್ಮೆಲ್ಲ ಸಾಧಕರಿಂದ ನೀನು ಭಾವಪೂರ್ಣ ಸೇವೆಯನ್ನು ಮಾಡಿಸಿಕೋ. ಇದರಲ್ಲಿ ನಮ್ಮೆಲ್ಲ ಸಾಧಕರ ಸಾಧನೆಯು ಪರಿಪೂರ್ಣವಾಗಲಿ. ನಮ್ಮ ಸಾಧನೆಯಿಂದ ಗುರುದೇವರು ಮತ್ತು ಮಹರ್ಷಿಗಳು ಪ್ರಸನ್ನರಾಗಲಿ. ಈ ರಥೋತ್ಸವದಿಂದ ಯಾವ ಕಾರ್ಯವಾಗುವುದು ಅಪೇಕ್ಷಿತವಿದೆಯೋ, ಅದು ಪೂರ್ಣವಾಗಲಿ, ಇದೇ ನಿನ್ನ ಚರಣಗಳಲ್ಲಿ ಭಾವಪೂರ್ಣ ಮತ್ತು ಶರಣಾಗತಭಾವದಿಂದ ಪ್ರಾರ್ಥನೆ.’ ಪ್ರಾರ್ಥನೆಯಾದ ನಂತರ ನಾನು ದೇವರೆದುರು ಶ್ರೀಫಲವನ್ನಿಟ್ಟೆನು. ಆಗ ಸಾಧಕ-ಪುರೋಹಿತರು ಶ್ಲೋಕವನ್ನು ಹೇಳಿದರು. ಪ್ರತಿಯೊಂದು ದೇವರೆದುರು ಶ್ರೀಫಲವನ್ನಿಡುವಾಗ ನನಗೆ ಬಹಳ ಪ್ರಸನ್ನ ಅನಿಸುತ್ತಿತ್ತು ಮತ್ತು ಆನಂದದ ಅರಿವಾಗುತ್ತಿತ್ತು. ‘ಎಲ್ಲ ದೇವತೆಗಳು ನನ್ನ ಪ್ರಾರ್ಥನೆಯನ್ನು ಸ್ವೀಕರಿಸಿದ್ದಾರೆ’, ಎಂದು ನನಗೆ ಅನಿಸಿತು.
೨. ಹಿಂದಿನ ದಿನ ರಥವನ್ನು ಸಿಂಗರಿಸುವಾಗ ರಥದಲ್ಲಿ ತೊಂದರೆದಾಯಕ ಸ್ಪಂದನಗಳ ಅರಿವಾದುದರಿಂದ ತೆಂಗಿನಕಾಯಿಯಿಂದ ಅದರ ದೃಷ್ಟಿಯನ್ನು ತೆಗೆಯುವುದು
ಮೇ ೨೧ ರಂದು ಬೆಳಗ್ಗೆ ರಥೋತ್ಸವಕ್ಕಾಗಿ ತಂದ ರಥವನ್ನು ಸಿಂಗರಿಸುವ ಸೇವೆಯು ನಡೆದಿತ್ತು. ನಾನು ರಥವನ್ನು ನೋಡಿದಾಗ ನನಗೆ ಅದರ ಮುಂದಿನ ಮತ್ತು ಹಿಂದಿನ ಭಾಗದಲ್ಲಿ ಸ್ವಲ್ಪ ತೊಂದರೆದಾಯಕ ಸ್ಪಂದನಗಳು ಅರಿವಾದವು. ಆದುದರಿಂದ ನಾನು ತೆಂಗಿನಕಾಯಿಯಿಂದ ಅದರ ದೃಷ್ಟಿಯನ್ನು ತೆಗೆದೆನು. ಅನಂತರ ಆ ತೆಂಗಿನಕಾಯಿಯನ್ನು ರಥದೆದುರು ಒಡೆದಾಗ ಅದು ಉದ್ದಕ್ಕೆ ಒಡೆಯಿತು. ಇದರ ಅರ್ಥ ‘ರಥದಲ್ಲಿ ತೊಂದರೆದಾಯಕ ಸ್ಪಂದನಗಳು ಬಹಳಷ್ಟಿವೆ’, ಎಂಬುದು ಗಮನಕ್ಕೆ ಬರುತ್ತದೆ. ಆದುದರಿಂದ ನಾನು ಇನ್ನೊಂದು ತೆಂಗಿನಕಾಯಿಯಿಂದ ರಥದ ದೃಷ್ಟಿಯನ್ನು ತೆಗೆದೆನು. ಆ ತೆಂಗಿನಕಾಯಿಯನ್ನು ರಥದ ಎದುರು ಒಡೆದಾಗ ಅದು ಸರಿಯಾಗಿ ಮಧ್ಯದಲ್ಲಿ ಮತ್ತು ಅಡ್ಡ ಒಡೆಯಿತು. ಇದರ ಅರ್ಥ ‘ಈಗ ರಥದಲ್ಲಿ ತೊಂದರೆದಾಯಕ ಸ್ಪಂದನಗಳಿಲ್ಲ’, ಎಂದು ತಿಳಿದುಕೊಳ್ಳಬಹುದು. ಆದುದರಿಂದ ನಾನು ಕೃತಜ್ಞತೆಯನ್ನು ವ್ಯಕ್ತಪಡಿಸಿದೆನು. ಈಗ ರಥದಲ್ಲಿ ತೊಂದರೆದಾಯಕ ಸ್ಪಂದನಗಳಿಲ್ಲದ ಕಾರಣ ರಥವನ್ನು ಸಿಂಗರಿಸುವ ಸೇವೆಯು ಸಹಜವಾಗಿ, ಬೇಗನೆ ಮತ್ತು ಅಪೇಕ್ಷಿತ ರೀತಿಯಲ್ಲಾಯಿತು.
೩. ಅಗ್ನಿನಾರಾಯಣನಿಗೆ ರಥೋತ್ಸವದ ಮಾರ್ಗದ ಶುದ್ಧಿಯನ್ನು ಮಾಡಲು ಪ್ರಾರ್ಥನೆಯನ್ನು ಮಾಡುವುದು
ರಥೋತ್ಸವದ ಹಿಂದಿನ ದಿನ ಬೆಳಗ್ಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಅಗ್ನಿಹೋತ್ರವನ್ನು ಮಾಡುವಾಗ ಅಗ್ನಿ ನಾರಾಯಣನಿಗೆ ರಥೋತ್ಸವದ ಮಾರ್ಗದ ಶುದ್ಧಿಗಾಗಿ ಪ್ರಾರ್ಥನೆಯನ್ನು ಮಾಡಿದ್ದರು. ಹಾಗೆಯೇ ಮಾರ್ಗದಲ್ಲಿನ ಗಿಡಗಳ ಮೇಲೆ ಕೆಟ್ಟ ಶಕ್ತಿಗಳಿದ್ದರೆ, ಅವುಗಳನ್ನು ದೂರಗೊಳಿಸಲು ಸಹ ಪ್ರಾರ್ಥನೆಯನ್ನು ಮಾಡಿದ್ದರು. ಆಶ್ಚರ್ಯವೆಂದರೆ ಆ ಸಮಯದಲ್ಲಿ ನನ್ನಿಂದಲೂ ಅದೇ ರೀತಿಯ ಪ್ರಾರ್ಥನೆಯಾಯಿತು
೪. ಈಶ್ವರನು ರಥೋತ್ಸವಕ್ಕಾಗಿ ೫ ವಿಷಯಗಳಿಗಾಗಿ ಜಪವನ್ನು ಮಾಡುವುದು ಆವಶ್ಯಕವಾಗಿದೆ, ಹಾಗೆಯೇ ‘ಯಾವ ಜಪವನ್ನು ಮಾಡಬೇಕು ?’, ಎಂದು ಸೂಚಿಸುವುದು
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಅಗ್ನಿಹೋತ್ರವನ್ನು ಮಾಡುತ್ತಿರುವಾಗ ಮರುದಿನದ ರಥೋತ್ಸವಕ್ಕಾಗಿ ಪ್ರಾರ್ಥನೆಯನ್ನು ಮಾಡುತ್ತಿದ್ದರು. ಆಗ ಈಶ್ವರನು ಅವರಿಗೆ, ‘ನಾಳೆ ರಥೋತ್ಸವದಲ್ಲಿ ಧ್ವನಿವ್ಯವಸ್ಥೆಯಲ್ಲಿ ಬಹಳ ಅಡಚಣೆಗಳು ಬರಲಿವೆ’, ಎಂಬ ವಿಚಾರವನ್ನು ನೀಡಿದನು. ಅದನ್ನು ಅವರು ನನಗೆ ಹೇಳಿದರು. (ರಥೋತ್ಸವದಲ್ಲಿ ಧ್ವನಿವರ್ಧಕದಿಂದ ನಿರೂಪಣೆಯನ್ನು ಮಾಡಲಿಕ್ಕಿತ್ತು, ಹಾಗೆಯೇ ನೃತ್ಯವನ್ನು ಮಾಡಲು ಭಕ್ತಿಗೀತೆ ಮತ್ತು ನಾಮಜಪವನ್ನು ಹಾಕಲಿಕ್ಕಿತ್ತು.) ಆಗ ನಾನು ((ಸದ್ಗುರು) ಡಾ. ಮುಕುಲ ಗಾಡಗೀಳ) ‘ರಥೋತ್ಸವಕ್ಕಾಗಿ ಯಾವ ಯಾವ ವಿಷಯಗಳಿಗಾಗಿ ಉಪಾಯವನ್ನು ಮಾಡುವುದು ಆವಶ್ಯಕವಾಗಿದೆ ?’, ಎಂದು ಈಶ್ವರನಿಗೆ ಕೇಳಿದೆನು. ಆಗ ಈಶ್ವರನು ನನಗೆ ಮುಂದಿನ ೫ ವಿಷಯಗಳಿಗಾಗಿ ಜಪವನ್ನು ಮಾಡುವುದು ಆವಶ್ಯಕವಾಗಿದೆ, ಹಾಗೆಯೇ ‘ಯಾವ ಜಪವನ್ನು ಮಾಡಬೇಕು ?’, ಎಂಬುದನ್ನೂ ಸೂಚಿಸಿದನು.
೫. ಸಂತರು ರಥೋತ್ಸವಕ್ಕಾಗಿ ನಾಮಜಪವನ್ನು ಮಾಡಲು ಮಾಡಿದ ಆಯೋಜನೆ
ಅ. ರಥೋತ್ಸವದಲ್ಲಿನ ಎಲ್ಲ ರೀತಿಯ ಅಡಚಣೆಗಳು ದೂರವಾಗಲು ಇಲ್ಲಿ ನೀಡಿದ ಕೋಷ್ಟಕದಲ್ಲಿನ ೧ ರಿಂದ ೩ ಕ್ರಮಾಂಕದ ಉಪಾಯಗಳನ್ನು ಪ್ರತಿಯೊಂದು ೧ ಗಂಟೆ ಮತ್ತು ರಥೋತ್ಸವವು ಗುರುದೇವರು ಮತ್ತು ಸಪ್ತರ್ಷಿಗಳಿಗೆ ಅಪೇಕ್ಷಿತವಿರುವ ರೀತಿಯಲ್ಲಾಗಲು ೪ ಕ್ರಮಾಂಕದ ಉಪಾಯವನ್ನು ೧ ಗಂಟೆ, ಹೀಗೆ ಒಟ್ಟು ೪ ಗಂಟೆಗಳ ಉಪಾಯವನ್ನು ರಥೋತ್ಸವದ ಹಿಂದಿನ ರಾತ್ರಿ ಸಂತರು ಮಾಡಿದರು.
೬. ಕೃತಜ್ಞತೆ
ಈ ರೀತಿ ರಥೋತ್ಸವಕ್ಕಾಗಿ ಸಂತರು ಒಟ್ಟು ೧೬ ಗಂಟೆಗಳ ಕಾಲ ನಾಮಜಪವನ್ನು ಮಾಡಿದರು. ಹಾಗೆಯೇ ನಾನು ((ಸದ್ಗುರು) ಡಾ. ಮುಕುಲ ಗಾಡಗೀಳ) ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಇತರ ಉಪಾಯಗಳನ್ನು ಮಾಡಿದೆವು. ಈ ಉಪಾಯಗಳಿಂದ, ಹಾಗೆಯೇ ದೇವತೆಗಳು, ಸಪ್ತರ್ಷಿಗಳು ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ರಥೋತ್ಸವದಲ್ಲಿ ಮಳೆಯ ಅಥವಾ ಇತರ ಯಾವುದೇ ವಿಶೇಷ ಅಡಚಣೆಗಳು ಬರಲಿಲ್ಲ. ಸಮಾಜದಲ್ಲಿನ ಜನರ ಮತ್ತು ಸರಕಾರದ ಸಹಾಯ ಲಭಿಸಿತು. ಮುಖ್ಯವೆಂದರೆ ಸಾಧಕರಿಗೆ ರಥೋತ್ಸವದ ಆಧ್ಯಾತ್ಮಿಕ ಸ್ತರದಲ್ಲಿ ಲಾಭ ಪಡೆಯಲು ಸಾಧ್ಯವಾಯಿತು. ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು ಈ ಸನಾತನದ ಮೂವರೂ ಗುರುಗಳ ದರ್ಶನದ ಲಾಭ ಸಾಧಕರಿಗೆ ಲಭಿಸಿ ಅವರು ಕೃತಾರ್ಥರಾದರು. ಈ ರೀತಿ ದೇವತೆಗಳು, ಸಪ್ತರ್ಷಿಗಳು, ಗುರುದೇವರು, ಸದ್ಗುರುಗಳು ಮತ್ತು ಸಂತರ ಕೃಪೆಯಿಂದ ಗುರುದೇವರ ಜನ್ಮದಿನದಂದು ಮಾಡಿದ ರಥೋತ್ಸವವು ಸಪ್ತರ್ಷಿಗಳು ಹೇಳಿದಂತೆ ‘ನ ಭೂತೋ ನ ಭವಿಷ್ಯತಿ’, ಎಂಬಂತಾಯಿತು. ಇದಕ್ಕಾಗಿ ನಾವೆಲ್ಲ ಸಾಧಕರು ಕೋಟಿ ಕೋಟಿ ಕೃತಜ್ಞರಾಗಿದ್ದೇವೆ !
– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.