ಪ್ರಸಿದ್ದ ಗಾಯಕ ಕೆ.ಕೆ. ಹೃದಯಾಘಾತದಿಂದ ನಿಧನ

ಗಾಯಕ ಕೃಷ್ಣಕುಮಾರ ಕುನ್ನಥ (ಕೆ.ಕೆ.)

ಕೊಲಕತ್ತಾ– ಹಿಂದಿ ಚಿತ್ರರಂಗ ಜಗತ್ತಿನ ಪ್ರಸಿದ್ಧ ಗಾಯಕ ಕೃಷ್ಣಕುಮಾರ ಕುನ್ನಥ (ಕೆ.ಕೆ.) ಇವರು ಇಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ೫೩ ವರ್ಷದವರಾಗಿದ್ದರು. ಇಲ್ಲಿ ಮೇ ೩೧ ರಂದು ಸಂಜೆ ಸಾರ್ವಜನಿಕ ಕಾರ್ಯಕ್ರಮ ಮುಗಿಸಿ ಹೊಟೇಲ ಕೊಠಡಿಗೆ ತೆರಳಿದ್ದ ಅವರಿಗೆ ಹೃದಯಾಘಾತವಾಯಿತು. ಅವರನ್ನು ಕೂಡಲೇ ಆಸ್ಪತ್ರೆಗೆ ಒಯ್ಯಲಾಯಿತು. ಆದರೆ ಅವರು ಮೊದಲೇ ಸಾವನ್ನಪ್ಪಿದ್ದರು. ಅವರ ತಲೆ ಮತ್ತು ಮುಖಕ್ಕೆ ಹಲವು ಸ್ಥಳಗಳಲ್ಲಿ ಗಾಯಗಳಾಗಿದ್ದು, ಪೊಲೀಸರು `ಅಸ್ವಾಭಾವಿಕ ಸಾವು’ ಎಂದು ದಾಖಲಿಸಿ ಶವ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ. ಸ್ಥಳಿಯ ಹೊಸ ಮಾರುಕಟ್ಟೆ ಪೋಲಿಸ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ. ಸಾರ್ವಜನಿಕ ಕಾರ್ಯಕ್ರಮದ ಆಯೋಜಕರು ಮತ್ತು ಆಸ್ಪತ್ರೆಯ ಸಿಬ್ಬಂದಿಯನ್ನು ಪೊಲೀಸರು ಪ್ರಶ್ನಿಸುವ ನಿರೀಕ್ಷೆಯಿದೆ. ಕೆ.ಕೆ. ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ ಮತ್ತು ಪ್ರಧಾನಿ ಮೋದಿಯವರು ಸಂತಾಪ ಸೂಚಿಸಿದ್ದಾರೆ.