ಪುರಾತತ್ತ್ವ ಇಲಾಖೆಗೆ ತಾಜಮಹಲಿನಲ್ಲಿ ನಮಾಜು ಪಠಣ ಯಾವಾಗಿನಿಂದ ನಡೆಯುತ್ತಿದೆ ? ಎಂಬುದೇ ತಿಳಿದಿಲ್ಲ !

ಮಾಹಿತಿ ಅಧಿಕಾರದಿಂದ ಬಹಿರಂಗ !

ನವದೆಹಲಿ – ಆಗ್ರಾದಲ್ಲಿನ ತಾಜಮಹಲನಲ್ಲಿ ಪ್ರತಿ ಶುಕ್ರವಾರದಂದು ಮುಸಲ್ಮಾನರಿಗೆ ನಮಾಜು ಮಾಡಲು ಅನುಮತಿ ನೀಡಲಾಗಿದೆ; ಆದರೆ ಇಲ್ಲಿ ಯಾವಾಗಿನಿಂದ ನಮಾಜು ಪಠಣ ಮಾಡಲಾಗುತ್ತಿದೆ, ಎಂಬುದರ ಮಾಹಿತಿಯು ಪುರಾತತ್ತ್ವ ಇಲಾಖೆಯ ಬಳಿ ಇಲ್ಲದಿರುವುದು ಮಾಹಿತಿ ಅಧಿಕಾರದಿಂದ ಬಹಿರಂಗವಾಗಿದೆ. ಇತಿಹಾಸಕಾರರಾದ ರಾಜಕಿಶೋರ ರಾಜೆಯವರು ಮಾಹಿತಿಯ ಅಧಿಕಾರದ ಅನ್ವಯ ಈ ಬಗ್ಗೆ ಪ್ರಶ್ನಿಸಿದ್ದರು.

(ಸೌಜನ್ಯ : Capital TV Uttar Pradesh)

ರಾಜಕಿಶೋರ ರಾಜೆಯವರು ಮಾತನಾಡುತ್ತ, ತಾಜಮಹಲಿನಲ್ಲಿ ನಮಾಜುಪಠಣದ ಸಂದರ್ಭದಲ್ಲಿನ ಪ್ರಶ್ನೆಗಳಿಗೆ ಪುರಾತತ್ವ ಇಲಾಖೆಯು ಯಾವುದೇ ವಿವರವು ಉಪಲಬ್ದವಿಲ್ಲ ಎಂದು ಉತ್ತರಿಸಿದೆ. ಶಾಹಜಹಾನನ ಕಾಲದಲ್ಲಿನ ಯಾವುದೇ ಪುಸ್ತಕದಲ್ಲಿ ತಾಜಮಹಲಿನಲ್ಲಿ ನಮಾಜು ಪಠಣ ನಡೆಯುತ್ತಿರುವ ಉಲ್ಲೇಖ ಕಂಡುಬರುವುದಿಲ್ಲ. ಶಾಹಜಹಾನನ ಕಾಲಾವಧಿಯಲ್ಲಿ ಸಾಮಾನ್ಯ ಜನರಿಗೂ ತಾಜಮಹಲನ್ನು ಪ್ರವೇಶಿಸುವ ಅನುಮತಿಯಿರಲಿಲ್ಲ. ಆದುದರಿಂದ ನಮಾಜು ಪಠಣದ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಎಂದು ಹೇಳಿದರು.

ಸಂಪಾದಕೀಯ ನಿಲುವು

* ಯಾವುದೇ ಮಾಹಿತಿಯಿಲ್ಲದ ಪುರಾತತ್ತ್ವ ಇಲಾಖೆಯ ಕಾರ್ಯವು ಹೇಗೆ ನಡೆಯುತ್ತಿದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ ! ಇನ್ನೊಂದು ಕಡೆಯಲ್ಲಿ ಪ್ರಾಚೀನ ದೇವಸ್ಥಾನದ ಜಾಗದಲ್ಲಿ ಪೂಜೆ ಮಾಡಲು ಮನವಿ ಮಾಡಲಾಗಿದ್ದರೆ ಇದೇ ಪುರಾತತ್ತ್ವ ಇಲಾಖೆಯು ಅದನ್ನು ವಿರೋಧಿಸುತ್ತದೆ, ಎಂಬುದನ್ನು ಗಮನದಲ್ಲಿಡಿ !