ತೆಲಂಗಾಣದ ಪ್ರತಿ ಮಸೀದಿಯಲ್ಲಿ ಅಗೆದು ಸತ್ಯವನ್ನು ಬೆಳಕಿಗೆ ತರುವೆವು ! – ಭಾಜಪ

ಕರೀಂನಗರ (ತೆಲಂಗಾಣ) – ಮಸೀದಿಯ ಸ್ಥಳದಲ್ಲಿ ಎಲ್ಲಿ ಉತ್ಖನನ ಮಾಡಿದರೂ ಶಿವಲಿಂಗ ಕಂಡುಬರುತ್ತದೆ. ರಾಜ್ಯದ ಎಲ್ಲಾ ಮಸೀದಿಗಳಲ್ಲಿ ಅಗೆಯುತ್ತೇವೆ. ಅಲ್ಲಿ ಶವಗಳು ಕಂಡುಬಂದರೆ, ನೀವು (ಮುಸ್ಲಿಮರು) ಅದನ್ನು ನಿಮ್ಮದು ಎಂದು ದಾವೆ ಮಾಡಿರಿ ಮತ್ತು ಶಿವಲಿಂಗ ಕಂಡುಬಂದರೆ, ಮಸೀದಿಯನ್ನು ನಮಗೆ ಒಪ್ಪಿಸಿ. ನೀವು ಈ ಸವಾಲನ್ನು ಸ್ವೀಕರಿಸುತ್ತೀರಾ ?, ಎಂದು ತೆಲಂಗಾಣದ ಭಾಜಪ ರಾಜ್ಯಾಧ್ಯಕ್ಷ ಬಂಡಿ ಸಂಜಯ ಕುಮಾರ ಅವರು ಎಂ.ಐ.ಎಂ.ನ ಅಧ್ಯಕ್ಷ ಮತ್ತು ಸಂಸದ ಅಸಾದುದ್ದೀನ್ ಓವೈಸಿಗೆ ಸವಾಲು ಹಾಕಿದ್ದಾರೆ. ‘ದೇಶದಲ್ಲಿ ರಾಮರಾಜ್ಯ ಆಡಳಿತದ ನಂತರ ಉರ್ದುವನ್ನು ನಿಷೇಧಿಸಲಾಗುವುದು’, ಎಂದು ಅವರು ಹೇಳಿದರು. ಇಲ್ಲಿ ನಡೆದ ಹಿಂದೂ ಏಕತಾ ಯಾತ್ರೆಯಲ್ಲಿ ಅವರು ಮಾತನಾಡಿದರು.

ಬಂಡಿ ಸಂಜಯ ಕುಮಾರ ತಮ್ಮ ಮಾತನ್ನು ಮುಂದುವರೆಸುತ್ತಾ,

೧. ದೇಶದಲ್ಲಿ ಬಾಂಬ್‌ಸ್ಪೋಟವಾಗುತ್ತದೆ; ಏಕೆಂದರೆ ಮದರಸಾಗಳು ಭಯೋತ್ಪಾದಕರ ತರಬೇತಿ ಕೇಂದ್ರಗಳಾಗಿ ಮಾರ್ಪಟ್ಟಿವೆ.

೨. ತೆಲಂಗಾಣದಲ್ಲಿ ಭಾಜಪ ಸರಕಾರ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರಿಗೆ ನೀಡಿರುವ ಮೀಸಲಾತಿಯನ್ನು ಕೊನೆಗೊಳಿಸುವೆವು.

೩. ಲವ್ ಜಿಹಾದ್ ಹೆಸರಿನಲ್ಲಿ ನಮ್ಮ ಸಹೋದರಿಯರನ್ನು ಮೋಸ ಮಾಡುತ್ತಿರುವಾಗ ನಾವು ಹೇಗೆ ಸುಮ್ಮನಿರಲು ಸಾಧ್ಯ ? ಬಡ ಹಿಂದೂಗಳ ಮತಾಂತರವನ್ನು ಸಹಿಸುವುದಿಲ್ಲ.

೪. ಹೈದರಾಬಾದ್‌ನಲ್ಲಿ ನಿಜಾಮರ ಆಳ್ವಿಕೆಯಲ್ಲಿ ಹಿಂದೂಗಳ ಮೇಲೆ ರಜಾಕಾರರು ನಡೆಸುತ್ತಿದ್ದ ದೌರ್ಜನ್ಯದ ಬಗ್ಗೆ ಕಪಟ ಜಾತ್ಯತೀತವಾದಿಗಳ ಕಣ್ಣು ತೆರೆಸಲು ‘ರಜಾಕಾರ ಫೈಲ್ಸ್’ ಎಂಬ ಸಿನಿಮಾ ಶೀಘ್ರದಲ್ಲೇ ನಿರ್ಮಾಣವಾಗಲಿದೆ ಎಂದು ಹೇಳಿದರು.