ಚಾರಧಾಮ ಯಾತ್ರೆಯ ದಾರಿಯಲ್ಲಿರುವ ಕಸದಿಂದ ಪರಿಸರಕ್ಕೆ ಅಪಾಯ ! – ತಜ್ಞರ ಚಿಂತೆ


ಡೆಹರಾಡೂನ (ಉತ್ತರಾಖಂಡ) – ಮೇ ೩ ರಿಂದ ಚಾರಧಾಮ ಯಾತ್ರೆಯು ಆರಂಭವಾದ ನಂತರ ಇಲ್ಲಿಯ ವರೆಗೆ ೮ ಲಕ್ಷ ಜನರು ಈ ಯಾತ್ರೆಯನ್ನು ಪೂರ್ಣಗೊಳಿಸಿದ್ದಾರೆ. ಕೊರೊನಾದಿಂದಾಗಿ ೨ ವರ್ಷಗಳ ಕಾಲ ಈ ಯಾತ್ರೆಯು ನಿಂತಿತ್ತು. ಅನಂತರ ಆರಂಭವಾದ ಈ ಯಾತ್ರೆಯ ದಾರಿಯಲ್ಲಿ ಸದ್ಯ ಎಲ್ಲೆಡೆ ಪ್ಲಾಸ್ಟೀಕಿನ ಚೀಲಗಳು, ಬಾಟಲಿಗಳೊಂದಿಗೆ ಕಸದ ರಾಶಿ ಕಂಡುಬರುತ್ತಿದೆ, ಇದು ಪರಿಸರಕ್ಕೆ ಅತ್ಯಂತ ಅಪಾಯಕಾರಿಯಾಗಿದೆ. ಈ ಬಗ್ಗೆ ಪರಿಸರ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಇದರ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾಗುತ್ತಿವೆ.

೧. `ಗಢವಾಲ ಸೆಂಟ್ರಲ್ ಯುನಿವರ್ಸಿಟಿ’ಯ ಭೂಗೋಳ ವಿಭಾಗದ ಪ್ರಮುಖ ಪ್ರಾ. ಎಮ್. ಎಸ್. ನೇಗೀಯವರು ಮಾತನಾಡುತ್ತ, ಕೇದಾರನಾಥದಂತಹ ಸಂವೇದನಾಶೀಲ ಪ್ರದೇಶಗಳಲ್ಲಿ ಸಂಗ್ರಹವಾಗುತ್ತಿರುವ ಕಸವು ಅಪಾಯಕಾರಿಯಾಗಿದೆ. ಇದರೊಂದ ಟೊಳ್ಳು ನಿರ್ಮಾಣವಾಗಿ ಭೂಕುಸಿತವಾಗಬಹುದು. ೨೦೧೩ರ ದುಃಖದಾಯಕ ಘಟನೆಗಳನ್ನು ನಾವೆಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು. (೨೦೧೩ರಲ್ಲಿ ಕೇದಾರನಾಥದಲ್ಲಿ ಪ್ರವಾಹ ಬಂದಿತ್ತು.)

೨. ಉತ್ತರಾಖಂಡದಲ್ಲಿನ `ಹಾಯ್ ಆಲ್ಟಿಟ್ಯೂಡ್ ಪ್ಲಾಂಟ ಫಿಜಿಯಾಲಾಜಿ ರಿಸರ್ಚ ಸೆಂಟರ್’ನ ಸಂಚಾಲಕರಾದ ಪ್ರಾ. ಎಮ್. ಸಿ ನೌಟಿಯಾಲರವರು ಮಾತನಾಡುತ್ತ ಪ್ರವಾಸಿಗರ ಸಂಖ್ಯೆಯು ಅನೇಕ ಪಟ್ಟು ಹೆಚ್ಚಾಗಿದೆ, ಇದರಿಂದಾಗಿ ಪ್ಲಾಸ್ಟೀಕಿನ ಕಸವೂ ಹೆಚ್ಚಿದೆ. ಇದರ ಪರಿಣಾಮವು ನೈಸರ್ಗಿಕ ವನಸ್ಪತಿಗಳ ಮೇಲೂ ಆಗಿದೆ, ಎಂದು ಹೇಳಿದ್ದಾರೆ.