ಅಮರನಾಥ ಯಾತ್ರಿಕರಿಗೆ ೫ ಲಕ್ಷ ರೂಪಾಯಿಯ ‘ವಿಮಾ ಕವಚ’ !

ನವದೆಹಲಿ – ಕೇಂದ್ರ ಸರಕಾರ ಜಾರಿ ಮಾಡಿರುವ ನಿರ್ಣಯದ ಪ್ರಕಾರ ಅಮರನಾಥ ಯಾತ್ರೆಗಾಗಿ ಹೋಗುವ ಎಲ್ಲಾ ಯಾತ್ರೆಗಳಿಗೆ ಪ್ರತಿಯೊಬ್ಬರಿಗೆ ೫ ಲಕ್ಷ ರೂಪಾಯಿಯ ‘ವಿಮಾ ಕವಚ’ ನೀಡುವ ನಿರ್ಣಯ ತೆಗೆದುಕೊಳ್ಳಲಾಗಿದೆ. ಹಾಗೂ ಪ್ರತಿ ಯಾತ್ರಿಕನಿಗೆ ‘ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್’ ಎಂದರೆ ‘ಆರ್.ಎಫ್.ಐ.ಡಿ.’ ಟ್ಯಾಗ್ ನೀಡಲಾಗುವುದು. ಜಮ್ಮು-ಕಾಶ್ಮೀರದ ಮುಖ್ಯ ಸಚಿವರು ನೀಡಿರುವ ಮಾಹಿತಿಯ ಪ್ರಕಾರ ಈ ಸಾರಿ ಮೊಟ್ಟಮೊದಲು ಯಾತ್ರಿಕರಿಗೆ ಈ ಟ್ಯಾಗ್ ನೀಡಲಾಗುವುದು. ಇದರ ಜೊತೆಗೆ ಟೆಂಟ್, ‘ವೈಫೈ ಹಾಟ್ಸ್ಪಾಟ್’, ಸಾಕಷ್ಟು ಬೆಳಕಿನ ವ್ಯವಸ್ಥೆ ಈ ರೀತಿಯ ಅವಶ್ಯಕ ಸೌಲಭ್ಯಗಳು ಯಾತ್ರಿಕರಿಗೆ ಸಂಪೂರ್ಣ ಮಾರ್ಗದಲ್ಲಿ ಮಾಡಿಕೊಡಲಾಗುವುದು.

೧. ಅಮರನಾಥ ಯಾತ್ರೆಯಲ್ಲಿ ಜಿಹಾದಿ ಭಯೋತ್ಪಾದಕರ ಕಾರ್ಯಾಚರಣೆ ಆಗಬಾರದೆಂದು, ಕೇಂದ್ರ ಸರಕಾರ ಸುರಕ್ಷೆಯ ದೃಷ್ಟಿಯಿಂದ ಅವಶ್ಯಕವಾದ ಎಲ್ಲಾ ರೀತಿಯ ಕಾಳಜಿ ವಹಿಸುತ್ತಿರುವುದು ಸ್ಪಷ್ಟಪಡಿಸಿದೆ.

೨. ಕೊರೋನಾದ ಮಹಾಮಾರಿಯ ೨ ವರ್ಷಗಳ ನಂತರ ಅಮರನಾಥ ಯಾತ್ರೆಗೆ ಅನುಮತಿ ಸಿಕ್ಕಿರುವುದರಿಂದ ಈ ಸಮಯದಲ್ಲಿ ಸುರಕ್ಷೆಯ ಜೊತೆಗೆ ಇದರ ಎಲ್ಲಾ ವ್ಯವಸ್ಥೆಯ ಮೇಲೆ ನಿಗಾವಹಿಸಲಾಗಿದೆ.

೩. ಈ ಮೊದಲು ಆಗಸ್ಟ್ ೫, ೨೦೧೯ ರಂದು ಅಮರನಾಥ ಯಾತ್ರೆ ನಡೆದಿತ್ತು. ಅದರ ನಂತರ ಈಗ ಎರಡು ವರ್ಷಗಳ ನಂತರ ಅಂದರೆ ಜೂನ್ ೩೦, ೨೦೨೨ ರಿಂದ ಯಾತ್ರೆಗೆ ಆರಂಭವಾಗುವುದು.

‘ಆರ್.ಎಫ್.ಐ.ಡಿ.’ ಟ್ಯಾಗ್ ಅಂದರೆ ಏನು ?

‘ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್’ ಎಂದರೆ ‘ಆರ್.ಎಫ್.ಐ.ಡಿ.’ ಟ್ಯಾಗ್ ಈ ತಂತ್ರಜ್ಞಾನ ‘ರೇಡಿಯೋ ಫ್ರೀಕ್ವೆನ್ಸಿ’ಯ ಮೇಲೆ ಆಧಾರಿತವಾಗಿದ್ದು ಇದು ಯಾವುದಾದರೂ ವಸ್ತು ಅಥವಾ ವ್ಯಕ್ತಿಯನ್ನು ಹುಡುಕಲು, ಗುರುತಿಸಲು ಅಥವಾ ಸಂಪರ್ಕಿಸಲು ಉಪಯೋಗಿಸಲಾಗುತ್ತದೆ.