ನವದೆಹಲಿ – ಇಸ್ಲಾಮಿಕ್ ಸಹಕಾರ ಸಂಘಟನೆ (ಆರ್ಗನೈಜೇಷನ್ ಆಫ್ ಇಸ್ಲಾಮಿಕ್ ಕೋಅಪರೇಶನ್) ಯಾವುದೋ ಒಂದು ದೇಶದ (ಪಾಕಿಸ್ತಾನದ) ಆದೇಶದ ಮೇರೆಗೆ ಸ್ವಂತ ಧಾರ್ಮಿಕ ಧೋರಣೆ ಹರಡುವುದನ್ನು ನಿಲ್ಲಿಸಬೇಕು. ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ಈ ರೀತಿ ನೇರವಾದ ಶಬ್ದದಲ್ಲಿ ಭಾರತವು ಈ ಸಂಘಟನೆಗೆ ಚಾಟಿಯೇಟು ನೀಡಿದೆ. ಈ ಸಂಘಟನೆಯು ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳ ಪುನಾರಚನೆಯ ವಿಷಯದಲ್ಲಿ ಟ್ವೀಟ್ ಮುಖಾಂತರ ಪುನಾರಚನೆ ಪ್ರಕ್ರಿಯೆ ಸಂಯುಕ್ತ ರಾಷ್ಟ್ರ ಸುರಕ್ಷಾ ಪರಿಷತ್ತು ಠರಾವುಗಳ, ೪ ನೇ ಜಿನಿವಾ ಒಪ್ಪಂದದ ಹಾಗೂ ಅಂತರಾಷ್ಟ್ರೀಯ ಕಾನೂನಿನ ನೇರ ಉಲ್ಲಂಘನೆಯಾಗಿದೆ, ಎಂದು ಟೀಕಿಸಿತ್ತು. ಇದರ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಅರಿಂದಮ್ ಬಗಚಿ ಇವರು ಆಕ್ಷೇಪ ವ್ಯಕ್ತಪಡಿಸಿ ಇಲ್ಲಿ ನೀಡಿರುವಂತೆ ಸಂಘಟನೆಗೆ ಬುದ್ಧಿ ಹೇಳಿದ್ದಾರೆ. ಕೇಂದ್ರೀಯ ಆಯೋಗವು ಮೇ ತಿಂಗಳ ಆರಂಭದಲ್ಲಿಯೇ ಪುನಾರಚನೆಯ ವಿಷಯದಲ್ಲಿ ಅಂತಿಮ ವರದಿ ಪ್ರಸ್ತುತಪಡಿಸಿದೆ.
India slams OIC for ‘unwarranted’ comments on delimitation exercise in J&K https://t.co/jHsiniyXCy
— TOI India (@TOIIndiaNews) May 16, 2022
ಈ ಸಂಘಟನೆಯು ಏಪ್ರಿಲ್ ತಿಂಗಳಿನಲ್ಲಿ ಇಸ್ಲಾಮಾಬಾದ್ ನಲ್ಲಿ ಇಸ್ಲಾಮಿ ದೇಶಗಳ ವಿದೇಶಾಂಗ ಸಚಿವರ ಸ್ತರದಲ್ಲಿ ನಡೆದಿರುವ ಸಭೆಯಲ್ಲಿ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷನನ್ನು ಆಹ್ವಾನಿಸಿತ್ತು. ಭಾರತವು ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಅದೇ ರೀತಿ ಈ ಮೊದಲು ಈ ಸಂಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಅಧಿಕಾರದ ಉಲ್ಲಂಘನೆ ನಡೆಯುತ್ತಿದೆಯೆಂದು ಆರೋಪಿಸಿತ್ತು. ಈ ಸಂದರ್ಭದಲ್ಲಿ ಸಂಘಟನೆಯ ಸಭೆಯಲ್ಲಿ ಠರಾವು ಸಮ್ಮತಿಸಲಾಯಿತು. ಕಾಶ್ಮೀರದ ಪ್ರಶ್ನೆ ಬಿಡಿಸದೆ ಶಾಶ್ವತ ಶಾಂತಿ ಸ್ಥಾಪಿಸಲು ಸಾಧ್ಯವಿಲ್ಲ ಎಂದು ಸಂಘಟನೆ ಹೇಳಿದ್ದು ಈ ಠರಾವು ನೀರಾಧಾರವಾಗಿದೆ ಎಂದು ಹೇಳುತ್ತಾ ಭಾರತದ ವಿದೇಶಾಂಗ ಸಚಿವಾಲಯ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದೆ.