ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮುಸಲ್ಮಾನರ ದಿಕ್ಕು ತಪ್ಪಿಸುತ್ತಿದೆ !- ಶೇಖ ಜೀನಾ, ಅಧ್ಯಕ್ಷರು, ಗೋವಾ ಹಜ್ ಸಮಿತಿ

ಮಡಗಾವ, ಏಪ್ರಿಲ್ ೨೯ – ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ, ಹಾಗೂ ಭಾಜಪ ಸರಕಾರ ಇವರ ಮೇಲೆ ಮಾಡಿದ ಆರೋಪ ನಿರ್ಧಾರವಾಗಿದೆ. ಪಿ.ಎಫ್.ಐ ಮುಸಲ್ಮಾನರ ದಿಕ್ಕು ತಪ್ಪಿಸುತ್ತಿದೆ, ಎಂಬ ಆರೋಪ ಗೋವಾ ಹಜ್ ಸಮಿತಿಯ ಅಧ್ಯಕ್ಷ ಶೇಖ ಜೀನಾ ಇವರು ಭಾಜಪಾದ ದಕ್ಷಿಣ ಗೋವಾ ಕಾರ್ಯಾಲಯದಲ್ಲಿ ನಡೆದಿರುವ ಪತ್ರಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು.

ಶೇಖ ಜೀನಾ ಪತ್ರಕರ್ತರೆದುರು ಪಿ.ಆಫ್.ಐ. ಯ ಅಸ್ತಿತ್ವದ ಬಗ್ಗೆ ಪ್ರಶ್ನೆ ಕೇಳುತ್ತ, ರಾಷ್ಟ್ರೀಯ ಹಜ್ ಸಮಿತಿ ಅಧ್ಯಕ್ಷ ಆಗಿರುವಾಗ ನಾನು ದೇಶಾದ್ಯಂತ ಪ್ರವಾಸ ಮಾಡಿದ್ದೇನೆ, ಆದರೆ ನನಗೆ ಪಿ.ಆಫ್.ಐ ನ ಅಸ್ತಿತ್ವ ಎಲ್ಲೂ ಕಾಣಲಿಲ್ಲ. ಪಿ.ಆಫ್.ಐ. ಸ್ಥಾಪನೆ ಕೇರಳದಲ್ಲಿ ಆಯಿತೆಂದು ಅದರ ಸದಸ್ಯರು ಹೇಳುತ್ತಾರೆ. ಆದರೆ ಕೊಚ್ಚಿ ಮತ್ತು ಅನ್ಯ ನಗರಗಳಲ್ಲಿ ಅದರ ಸುಳಿವು ಕಾಣುವುದಿಲ್ಲ.

ಶೇಖ್ ಜೀನಾ ಇವರು ಕರ್ನಾಟಕ ಮತ್ತು ಕೇರಳ ಗಡಿಯ ಯಾವುದಾದರೊಂದು ಕೊಂಪೆಯಲ್ಲಿ ಪಿ.ಆಫ್.ಐ. ಸ್ಥಾಪನೆ ಆಗಿರಬಹುದು ಎಂದು ಹೇಳಿ ಹೀಯಾಳಿಸಿದರು. ಶೇಖ ಜೀನಾ ಮಾತು ಮುಂದುವರಿಸುತ್ತಾ ಪಿ ಆಫ್.ಐ ಗೋವಾದಲ್ಲಿ ಕೆಲವು ಉಪಕ್ರಮಗಳನ್ನು ನಡೆಸುತ್ತಿದೆ. ಆದರೆ ಪಿ.ಆಫ್.ಐ ಇದು ಕಾಂಗ್ರೆಸ್ಸಿನ ಇನ್ನೊಂದು ಮುಖವಾಗಿದೆ. ಕಾಂಗ್ರೆಸ್ ಪಕ್ಷ ಈಗ ಅಳಿವಿನ ಅಂಚಿಗೆ ಬಂದಿದೆ. ಪಿ.ಆಫ್.ಐ ಈಗ ಕಾಂಗ್ರೆಸನಲ್ಲಿ ವಿಲೀನವಾಗುವುದು ಒಳ್ಳೆಯದು. ಪಿ.ಆಫ್.ಐ ಚುನಾವಣೆಯಲ್ಲಿ ಹೋರಾಡುವುದಿಲ್ಲ. ಮೊದಲು ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಗೋವಾದಲ್ಲಿ ಎಲ್ಲಾ ಧರ್ಮೀಯರು ಒಗ್ಗಟ್ಟಿನಿಂದ ಇರುತ್ತಿದ್ದಾರೆ, ಇಲ್ಲಿ ಯಾರು ಅವರವರಲ್ಲಿ ಧಾರ್ಮಿಕ ಭೇದ ನಿರ್ಮಾಣ ಮಾಡುವ ಪ್ರಯತ್ನ ಮಾಡಬಾರದು. ಭಾಜಪ ದ ಸಮಯದಲ್ಲಿ ರಾಜ್ಯದ ಮುಸ್ಲಿಮರ ಪ್ರಗತಿಯಾಗಿದೆ. ಪಿ.ಆಫ್.ಐ. ಇದು ಮುಸಲ್ಮಾನ ಸಂಘಟನೆಯಾಗಿದ್ದು ಲೋಕತಂತ್ರದಲ್ಲಿ ಇಂತಹ ಸಂಘಟನೆಗಳ ಉಳಿವು ಇಲ್ಲ.

ಸಂಪಾದಕರ ನಿಲುವು

ಗೋವಾದಲ್ಲಿ ಧಾರ್ಮಿಕ ಹೊಂದಾಣಿಕೆ ಮತ್ತು ಶಾಂತಿಭಂಗವಾಗುವ ಮೊದಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಸರಕಾರ ನಿಷೇಧಿಸಬೇಕು.