ಹುಬ್ಬಳ್ಳಿಯ ಪೊಲೀಸ ಠಾಣೆಯ ಮೇಲಿನ ಆಕ್ರಮಣದ ಪ್ರಕರಣದಲ್ಲಿ ಎಐಎಂಐಎಂ ನ ನಗರ ಸೇವಕನ ಬಂಧನ

ಹುಬ್ಬಳ್ಳಿ – ಹುಬ್ಬಳ್ಳಿಯಲ್ಲಿ ಹನುಮಾನ ಜಯಂತಿಯ ದಿನದಂದು ಸಾಮಾಜಿಕ ಜಾಲತಾಣಗಳಲ್ಲಿ ಕಪೋಲಕಲ್ಪಿತ ಆಕ್ಷೇಪಾರ್ಹ ಪೋಸ್ಟ್ ಪ್ರಸಾರವಾಗಿದೆ ಎಂಬ ಸುದ್ದಿ ಹಬ್ಬಿದ ನಂತರ ಮತಾಂಧರು ಪೊಲೀಸ್ ಠಾಣೆಯ ಮೇಲೆ ಆಕ್ರಮಣ ನಡೆಸಿದರು. ಈ ಪ್ರಕರಣದಲ್ಲಿ ಪೊಲೀಸರು ಎಐಎಂಐಎಂ (ಆಲ್ ಇಂಡಿಯಾ ಮಜಲಿಸ ಏ ಇತ್ತೆಹಾದುಲ ಮುಸ್ಲಿಂ ನ) ನಾಯಕ ಮತ್ತು ನಗರ ಸೇವಕ ನಜೀರ್ ಅಹ್ಮದ್ ಹೋನವಾಲ ಎಂಬವರನ್ನು ಬಂಧಿಸಿದರು, ಇದರ ಮೊದಲು ಇದೇ ಪ್ರಕರಣದಲ್ಲಿ ಈ ಪಕ್ಷದ ನಗರ ಸೇವಕಿ ಹುಸೇನಬಿ ನಲವತವಾಡ ಇವರ ಪತಿ ಇರ್ಫಾನ್ ನಲವತವಾಡ ಇವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ೧೩೪ ಜನರನ್ನು ಬಂಧಿಸಲಾಗಿದೆ.

(ಸೌಜನ್ಯ : Asianet Suvarna News)

ಸಂಪಾದಕರ ನಿಲುವು

ಇಂತಹ ರಾಷ್ಟ್ರ ಘಾತಕ ಕೃತಿಗಳಲ್ಲಿ ಕೈವಾಡವಿರುವ ಪಕ್ಷವನ್ನು ನಿಷೇಧಿಸಲು ಜಾತ್ಯತೀತರು ಮತ್ತು ಪ್ರಗತಿಪರರು ಏಕೆ ಒತ್ತಾಯಿಸುತ್ತಿಲ್ಲ ?