ಮಹಮ್ಮದ ಪೈಗಂಬರರನ್ನು ಅವಮಾನಿಸಿದವರ ಶಿರಚ್ಛೇಧ ಮಾಡುವ ಘೋಷಣೆ !

ಹುಬ್ಬಳ್ಳಿಯಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ವಿಡಿಯೋ ಪ್ರಸಾರ

ಹುಬ್ಬಳ್ಳಿ – ಸಧ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಪ್ರಸಾರವಾಗುತ್ತಿದೆ. ಈ ವಿಡಿಯೋ ಹುಬ್ಬಳ್ಳಿಯಲ್ಲಿನದ್ದಾಗಿದೆ ಎನ್ನಲಾಗಿದೆ. ಅದರಲ್ಲಿ ಕಾಂಗ್ರೆಸನ ಹುಬ್ಬಳ್ಳಿ ಜಿಲ್ಲಾಧ್ಯಕ್ಷ ಅಲ್ತಾಫ ಹಲ್ಲುರ್ ಕಾಣಿಸುತ್ತಿದ್ದಾರೆ. ಈ ವಿಡಿಯೋದಲ್ಲಿ ಸಮೂಹದಿಂದ ಪೊಲೀಸ ಠಾಣೆಯ ಹೊರಗೆ ‘ಗುಸ್ತಕ-ಎ-ರಸೂಲ ಕಿ ಏಕ ಹಿ ಸಾಜಾ, ಸರ ತನ ಸೆ ಜುದಾ’ (ಮೊಹಮ್ಮದ ಪೈಗಂಬರನನ್ನು ಅವಮಾನಿಸಿದವರಿಗೆ ಒಂದೇ ಶಿಕ್ಷೆ ಅದೆಂದರೆ ಶಿರಚ್ಛೇದ) ಎಂದು ಘೋಷಣೆ ಕೂಗುತ್ತಿದ್ದಾರೆ. ಈ ಸಮೂಹದ ನೇತೃತ್ವ ಒಬ್ಬ ಮೌಲಾನಾ(ಇಸ್ಲಾಮಿಕ ವಿದ್ವಾಂಸ) ಮಾಡುತ್ತಿರುವುದು ಕಂಡು ಬರುತ್ತದೆ. ಅವರನ್ನು ತಡೆಯುತ್ತಿರುವ ಪೊಲೀಸರಿಗೆ ಜೀವ ಬೆದರಿಕೆಯನ್ನು ಹಾಕಲಾಗುತ್ತಿದೆ.

ಶ್ರೀ ರಾಮನವಮಿಯ ದಿನದಂದು ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟನಿಂದಾಗಿ ಮತಾಂಧರು ಗಲಭೆ ನಡೆಸಿದರು ಮತ್ತು ಪೊಲೀಸ ಠಾಣೆಯ ಮೇಲೂ ದಾಳಿ ಮಾಡಿದರು. ಇದರಲ್ಲಿ ೧೨ ಜನರು
ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ೨೦೦ ಜನರನ್ನು ಬಂಧಿಸಿದ್ದಾರೆ. ಆ ಸಮಯದ ಈ ವಿಡಿಯೋ ಆಗಿದೆ ಎಂದು ಹೇಳಲಾಗುತ್ತಿದೆ.

ಸಂಪಾದಕೀಯ ನಿಲುವು

ಈ ರೀತಿಯಾಗಿ ಕಾನೂನನ್ನು ಕೈಗೆ ತೆಗೆದುಕೊಳ್ಳುವುದಾಗಿ ಘೋಷಿಸುವದರ ವಿರುದ್ಧ ಭಾಜಪ ಸರಕಾರ ಕಠಿಣ ಕ್ರಮ ಕ್ಯಗೊಳ್ಳಬೇಕು ! ಇಂತಹ ಘೋಷಣೆಗಳ ಕುರಿತು ಜಾತ್ಯತೀತರು ಮತ್ತು ಪ್ರಗತಿ(ಅಧೊ)ಪರರು ಮಾತನಾಡಬೇಕು !