ಉತ್ತರ ಪ್ರದೇಶದಲ್ಲಿ ಇತ್ತು ೩೦೦ ಕೋಟಿ ರೂಪಾಯಿಗಳ ಆಸ್ತಿ !
ಗೌಹಾಟಿ (ಆಸ್ಸಾಂ) – ಆಸ್ಸಾಂ ಪೊಲೀಸರು ಇಬ್ಬರು ಗೋಕಳ್ಳ ಸಾಗಾಟ ಸಹೋದರರನ್ನು ಚಕಮಕಿಯಲ್ಲಿ ಕೊಂದಿದ್ದಾರೆ. ಈ ವೇಳೆ ೪ ಪೊಲೀಸರು ಗಾಯಗೊಂಡಿದ್ದಾರೆ. ಈ ಗೋಕಳ್ಳ ಸಾಗಾಟ ಹೆಸರುಗಳು ಅಕ್ಬರ ಬಂಜಾರಾ ಮತ್ತು ಸಲ್ಮಾನ ಎಂದಾಗಿದೆ. ಇಬ್ಬರೂ ಉತ್ತರ ಪ್ರದೇಶದ ಮೆರಠ ನಿವಾಸಿಗಳಾಗಿದ್ದರು. ಏಪ್ರಿಲ್ ೧೩ ರಂದು ಅವರಿಬ್ಬರನ್ನು ಉತ್ತರಪ್ರದೇಶದಲ್ಲಿ ಬಂಧಿಸಲಾಯಿತು. ನಂತರ ಆಸ್ಸಾಂ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಎಪ್ರಿಲ್ ೧೪ ರಂದು ಅವರನ್ನು ಅಸ್ಸಾಂನ ಕೊಕರಾಝಾರಗೆ ಕರೆತರಲಾಯಿತು. ಇಬ್ಬರೂ ಗೋಕಳ್ಳ ಸಾಗಾಟಗಾರರನ್ನು ೭ ದಿನಗಳ ಕಾಲ ಕಸ್ಟಡಿಗೆ ನೀಡಲಾಗಿದೆ. ಏಪ್ರಿಲ ೧೯ ರಂದು ಇಬ್ಬರೂ ಆರೋಪಿಗಳನ್ನು ಪೊಲೀಸ ಕಸ್ಟಡಿಯಿಂದ ಪರಾರಿಯಾದರು. ನಂತರ ಪೊಲೀಸರು ಶೋಧ ಕಾರ್ಯ ಆರಂಭಿಸಿದರು. ಆ ಸಮಯದಲ್ಲಿ ಕೊಕರಾಝಾರನಲ್ಲಿ ನಡೆದ ಘರ್ಷಣೆಯಲ್ಲಿ ಅವರ ಹತ್ಯೆ ಮಾಡಲಾಯಿತು. ಈ ಪೈಕಿ ಅಕ್ಬರ ಬಂಜಾರಾನ ಮೇಲೆ ೨ ಲಕ್ಷ ರೂಪಾಯಿಗಳ ಬಹುಮಾನವಿತ್ತು.
Two cattle smugglers linked with ‘terror money’ killed in ambush in Assam, 4 policemen injured
Read @ANI Story | https://t.co/sEGtEo5R9f#CattleSmuggling #Assam pic.twitter.com/5nB8qEDgKl
— ANI Digital (@ani_digital) April 19, 2022
ಅಕ್ಬರನು ಕಳ್ಳಸಾಗಣೆಯನ್ನು ಆಸ್ಸಾಂ, ಮೇಘಾಲಯ, ಬಂಗಾಳ ಮತ್ತು ಮಿಜೋರಮವರೆಗೆ ವಿಸ್ತರಿಸಿದ್ದ. (ಪೊಲೀಸರು ಇಷ್ಟು ಆಗುವ ತನಕ ಮಲಗಿದ್ದರೇ ?- ಸಂಪಾದಕರು) ಟ್ರಕ್‌ನಿಂದ ಬಾಂಗ್ಲಾದೇಶದ ಗಡಿಯ ವರೆಗೆ ಗೋವಂಶವನ್ನು ಸಾಗಿಸುತ್ತಿದ್ದರು. ಅಕ್ಬರ ಮತ್ತು ಸಲ್ಮಾನ ಇವರು ಗೋಮಾಂಸವನ್ನು ಮೆರಠ, ಬಿಜನೋರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ೩೦೦ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಖರೀದಿಸಿದ್ದರು. ಉತ್ತರ ಪ್ರದೇಶದ ಫಲವಾಡ ಪ್ರದೇಶದಲ್ಲಿ ಅಕ್ಬರ ಬಂಜಾರಾನ ಭಯವಿತ್ತು. ಆತನ ಗೂಂಡಾಗಿರಿಯಿಂದ ಅನೇಕರು ಸಂಕಷ್ಟದಲ್ಲಿದ್ದರು. ಯೋಗಿ ಆದಿತ್ಯನಾಥ ಸರಕಾರ ಬಂದ ನಂತರವೂ ಅಕ್ಬರ ಗೋಮಾಂಸ ಕಳ್ಳ ಸಾಗಣೆ ದಂಧೆ ಮುಂದುವರಿದಿತ್ತು. ಅಕ್ಬರನನ್ನು ನಿಖರವಾಗಿ ಯಾರ ಭದ್ರತೆ ಇತ್ತು ?, ಎಂಬ ಬಗ್ಗೆ ವಿಚಾರಣೆ ನಡೆಯುತ್ತಿದೆ. ಅಕ್ಬರನ ಆಸ್ತಿ ಬಗ್ಗೆ ಮಾಹಿತಿ ಪಡೆಯುವದಕ್ಕಾಗಿ ಪೊಲೀಸರು ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದಿದ್ದರು.