ಕೋಲಾರದಲ್ಲಿ ಶ್ರೀರಾಮನವಮಿಯ ನಿಮಿತ್ತ ನಡೆಸಲಾದ ಮೆರವಣಿಗೆಯ ಮೇಲೆ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಮತಾಂಧರಿಂದ ಕಲ್ಲುತೂರಾಟ !

ದೇಶದಲ್ಲಿ ಹಿಂದೂಗಳ ಹಬ್ಬಗಳ ಮೆರವಣಿಗೆಯ ಮೇಲೆ ಇಂತಹ ಆಕ್ರಮಣದ ಘಟನೆಗಳು ನಡೆಯುತ್ತಲೇ ಇರುತ್ತವೆ, ಆದರೂ ಜಾತ್ಯತೀತರು ‘ದೇಶದಲ್ಲಿ ಅಲ್ಪಸಂಖ್ಯಾತರು ಅಸುರಕ್ಷಿತರಾಗಿದ್ದಾರೆ’ ಎಂದು ಬೊಬ್ಬೆಯಿಡುತ್ತಿರುತ್ತಾರೆ, ಎಂಬುದನ್ನು ಗಮನದಲ್ಲಿಡಿ !

ಮೊಹರಂನ ಮೆರವಣಿಗೆಯು ಹಿಂದೂಬಹುಸಂಖ್ಯಾತ ಪ್ರದೇಶಗಳಿಂದ ಹೊಗುತ್ತಿರುವಾಗ ಇಂತಹ ಆಕ್ರಮಣಗಳಾಗುತ್ತವೆಯೇ ?

ಬೆಂಗಳೂರು – ಕರ್ನಾಟಕದ ಕೋಲಾರದಲ್ಲಿ ಶ್ರೀರಾಮನವಮಿಯ ಹಿನ್ನೆಲೆಯಲ್ಲಿ ನಡೆಸಲಾದ ಮೆರವಣಿಗೆಯ ಮೇಲೆ ಮುಸಲ್ಮಾನಬಹುಸಂಖ್ಯಾತ ಪ್ರದೇಶದಲ್ಲಿ ಮತಾಂಧರು ಮಾಡಿದ ಕಲ್ಲುತೂರಾಟದಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಮೆರವಣಿಗೆಯು ಜಹಾಂಗೀರ ಮೊಹಲ್ಲಾದಿಂದ ಹೋಗುತ್ತಿರುವಾಗ ಕಲ್ಲುತೂರಾಟ ನಡೆದಿದೆ. ಈ ಸಮಯದಲ್ಲಿ ಉಪಸ್ಥಿತರಿದ್ದ ಪೊಲೀಸರು ಲಾಠಿಬೀಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸದ್ಯ ಪರಿಸರದಲ್ಲಿ ಬಿಗಿಯಾದ ಪೊಲೀಸ ಬಂದೋಬಸ್ತನ್ನು ಇಡಲಾಗಿದೆ. ಪರಿಸ್ಥಿತಿಯು ನಿಯಂತ್ರಣದಲ್ಲಿದೆ. ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಈ ಪ್ರಕರಣದಲ್ಲಿ ಪೊಲೀಸರು ೫ ಜನರನ್ನು ಬಂಧಿಸಿದ್ದಾರೆ.

(ಸೌಜನ್ಯ : Public TV)

(ಸೌಜನ್ಯ : TV9 Kannada)