ಅಲ್ ಕಾಯದಾ ಬಂದಿದ್ದ ಹೇಳಿಕೆಯಿಂದ ಹಿಜಾಬದ ವಿವಾದದ ಹಿಂದೆ ‘ಆದೃಶ್ಯ ಕೈ’ ಇರುವುದು ಸ್ಪಷ್ಟವಾಗುತ್ತದೆ ! – ಕರ್ನಾಟಕದ ಗೃಹ ಸಚಿವ ಅರಗ ಜ್ಞಾನೇಂದ್ರ

ಬೆಂಗಳೂರು – ಹಿಜಾಬ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿದ್ಯಾರ್ಥಿ ಮುಸ್ಕಾನ ಖಾನ ಅವರನ್ನು ಅಲ ಕಾಯದಾ ಮುಖ್ಯಸ್ಥ ಅಲ ಜವಾಹರಿ ಹೊಗಳಿರುವುದರ ವಿವಾದದ ಹಿಂದೆ ‘ಆದೃಶ್ಯ ಕೈ’ ಇದೆ ಎಂದು ಸ್ಪಷ್ಟಪಡಿಸಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಇವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ವಿದ್ಯಾರ್ಥಿನಿ ಮುಸ್ಕಾನ ಖಾನ ಫೆಬ್ರವರಿಯಲ್ಲಿ ಹಿಜಾಬ ಚರ್ಚೆಯಲ್ಲಿ ಜೈ ಶ್ರೀರಾಮ ಎಂದು ಘೋಷಿಸುವ ವಿದ್ಯಾರ್ಥಿಗಳ ಮುಂದೆ ಆಲ್ಲಾಹು ಅಕ್ಬರ ಎಂದು ಘೋಷಿಸುತ್ತಿದ್ದಳು. ಆ ಸಮಯದಲ್ಲಿ ಆಕೆಯನ್ನು ಮುಸ್ಲಿಮರು ಹೊಗಳಿದ್ದರು. ಗೃಹ ಸಚಿವ ಜ್ಞಾನೇಂದ್ರ ಅವರು, ಈ ವಿವಾದವನ್ನು ಹೇಗೆ ನಡೆಸಲಾಗುತ್ತಿದೆ ?, ಅಲ್ಲದೆ ಇದರಲ್ಲಿ ಯಾರ ಹಿತಾಸಕ್ತಿಗಳಿವೆ ?, ಎಂಬುದರ ತನಿಖೆ ಪೋಲಿಸ ಮಾಡುತ್ತಿದೆ ಎಂದು ಹೇಳಿದರು.