ವಿವಾಹಿತ ಹಿಂದೂ ಮಹಿಳೆಗೆ ಆಮಿಷವೊಡ್ಡಿ ಓಡಿಹೋಗಿರುವ ಮತಾಂಧ ಯುವಕನ ಬಂಧನ !

ಮಹಿಳೆಯನ್ನು ಮತಾಂತರಿಸಿ ನಿಕಾಹ !

ಉತ್ತರಪ್ರದೇಶದಲ್ಲಿ ಲವ್ ಜಿಹಾದಿನ ವಿರುದ್ಧ ಕಾನೂನು ಮಾಡಿದ ನಂತರವೂ ಮತಾಂಧರಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ. ಆದ್ದರಿಂದ ಇಂತಹವರಿಗೆ ಇನ್ನು ಮುಂದೆ ಜೀವ ಅವಧಿ ಶಿಕ್ಷೆ ನೀಡುವ ಕಾನೂನು ಜಾರಿ ಮಾಡಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !

ಪತೆಹಪೂರ (ಉತ್ತರಪ್ರದೇಶ) – ಇಲ್ಲಿ ಹಸನ ಮಹಮ್ಮದ್ ಅಲಿಯಾಸ್ ಮೋನು ಈ ೨೨ ವಯಸ್ಸಿನ ಯುವಕನ ನೆರೆ ಮನೆಯ ವಿವಾಹಿತ ಹಿಂದೂ ಮಹಿಳೆಯನ್ನು ಆಮಿಷವೊಡ್ಡಿ ದೆಹಲಿಗೆ ಕರೆದುಕೊಂಡು ಹೋಗಿ ಆಕೆಯನ್ನು ಮತಾಂತರಿಸಿ ನಿಕಾಹ ಮಾಡಿಕೊಂಡಿದ್ದಾನೆ. ಈ ಮಹಿಳೆಯ ಪತಿಯ ದೂರಿನ ಮೇಲೆ ಪೊಲೀಸರು ಮಹಿಳೆಯ ಶೋಧ ನಡೆಸಿ ಆಕೆ ಮತ್ತು ಮುಸಲ್ಮಾನ ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಯುವಕನನ್ನು ಬಂಧಿಸಿದನಂತರ ಆ ಮಹಿಳೆಯನ್ನು ಪತಿಗೆ ಒಪ್ಪಿಸಿದ್ದಾರೆ.