ಜಮ್ಮೂ-ಕಾಶ್ಮೀರದಲ್ಲಿ ಶಾರದಾ ದೇವಸ್ಥಾನದ ನಿರ್ಮಾಣಕ್ಕೆ ಆರಂಭ !

* ನೂರಾರು ವರ್ಷಗಳಿಂದ ನಡೆಯುತ್ತ ಬಂದಿರುವ ತೀರ್ಥಯಾತ್ರೆಯನ್ನು ಪುನರುಜ್ಜೀವಿತಗೊಳಿಸಲು ನಡೆಯುತ್ತಿದೆ ಈ ಪ್ರಯತ್ನ!- ಸಂಪಾದಕರು 

* ದೇವಸ್ಥಾನದ ನಿರ್ಮಾಣದೊಂದಿಗೆ ಅದರ ಶಾಶ್ವತ ರಕ್ಷಣೆಗಾಗಿ ಜಿಹಾದಿ ಭಯೋತ್ಪಾದಕರ ವಿರುದ್ಧ ಪ್ರಭಾವಿ ಉಪಾಯಯೋಜನೆಗಳನ್ನು ರಚಿಸುವುದು ಆವಶ್ಯಕವಾಗಿದೆ. ಇದಕ್ಕಾಗಿ ಕೇಂದ್ರ ಸರಕಾರವು ಪ್ರಯತ್ನಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು 

ಜಮ್ಮೂ-ಕಾಶ್ಮೀರದಲ್ಲಿನ ಶಾರದಾ ದೇವಸ್ಥಾನ

ಶ್ರೀನಗರ (ಜಮ್ಮೂ-ಕಾಶ್ಮೀರ) – ಶಾರದಾ ಪೀಠ ಕಾಶ್ಮೀರಿ ಹಿಂದೂಗಳ ಶ್ರದ್ಧೆಯ ಪ್ರತೀಕವಾಗಿದೆ. ಪಾಕಿಸ್ತಾನವು ವ್ಯಾಪಿಸುರುವ ಕಾಶ್ಮೀರದಲ್ಲಿ ಪೂರ್ವ ಶಾರದಾದೇವಿಯ ಪ್ರಾಚೀನ ದೇವಸ್ಥಾನವು ಭಗ್ನಾವಸ್ಥೆಯಲ್ಲಿದೆ. ಇದರ ಎದುರಿಗೆ ಉತ್ತರ ಕಾಶ್ಮೀರದ ಭಾರತ-ಪಾಕಿಸ್ತಾನ ನಿಯಂತ್ರಣ ರೇಖೆಗೆ ತಾಗಿರುವ ಟೀಟವಾಲ (ಕುಪವಾಡಾ) ಸೆಕ್ಟರನಲ್ಲಿರುವ ಕಿಶನಗಂಗಾ ಕಣಿವೆಯ ದಡದಲ್ಲಿ ಶಾರದಾದೇವಿಯ ಭವ್ಯ ದೇವಸ್ಥಾನವನ್ನು ನಿರ್ಮಿಸುವ ಕಾರ್ಯವು ಆರಂಭವಾಗಿದೆ. ‘ಶಾರದಾ ಬಚಾವ ಸಮಿತಿ’ಯಿಂದ ಈ ದೇವಸ್ಥಾನದ ನಿರ್ಮಾಣ ಕಾರ್ಯವು ನಡೆಯುತ್ತಿದೆ. ಈ ಸಮಿತಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು. ಈ ದೇವಸ್ಥಾನದ ನಿರ್ಮಾಣವು ನೂರಾರು ವರ್ಷಗಳಿಂದ ನಡೆಯುತ್ತ ಬಂದಿರುವ ತೀರ್ಥಯಾತ್ರೆಯನ್ನು ಪುನರುಜ್ಜೀವಿತಗೊಳಿಸಲು ನಡೆಯುತ್ತಿದೆ. ಹಿಂದೆ ಈ ಯಾತ್ರೆಯು ಪಾಕಿಸ್ತಾನವು ಆಕ್ರಮಿಸಿರುವ ಕಾಶ್ಮೀರದಲ್ಲಿದ್ದ ಶಾರದಾಪೀಠದಲ್ಲಿ ನಡೆಯುತ್ತಿತ್ತು. ದೇವಸ್ಥಾನವನ್ನು ನಿರ್ಮಿಸಲಾಗುತ್ತಿರುವ ಈಗಿನ ಜಾಗದಲ್ಲಿ ಹಿಂದೆ ಶಾರದಾಪೀಠದ ಕಡೆಗೆ ಹೋಗಲು ಭಾವಿಕರು ವಿಶ್ರಾಂತಿ ಪಡೆಯುತ್ತಿದ್ದರು.

ಸಮಿತಿಯ ಪ್ರಮುಖರಾದ ರವೀಂದ್ರ ಪಂಡಿತರು ಮಾತನಾಡುತ್ತ ‘ಶಾರದಾ ದೇವಸ್ಥಾನವನ್ನು ನಿರ್ಮಿಸಲಾಗುತ್ತಿರುವ ಜಾಗದಲ್ಲಿ ಪೂಜೆ ಮಾಡಲಾಗಿದೆ. ಇದರಲ್ಲಿ ದೇಶದಲ್ಲಿನ ವಿವಿಧ ಭಾಗಗಳಲ್ಲಿನ ಕಾಶ್ಮೀರಿ ಹಿಂದೂಗಳೂ ಸಹಭಾಗಿಯಾಗಿದ್ದರು. ಡಿಸೆಂಬರ್‌ ೨೦೨೧ರಲ್ಲಿ ಈ ದೇವಸ್ಥಾನದ ಯೋಜನೆಯ ಆಧಾರಶಿಲೆಯನ್ನು ಇಡಲಾಯಿತು. ದೇವಸ್ಥಾನದ ಸಂಕಲ್ಪನೆ ಮತ್ತು ವಿನ್ಯಾಸಕ್ಕೆ ದಕ್ಷಿಣ ಶೃಂಗೇರಿ ಮಠದಿಂದ ಅನುಮತಿ ದೊರೆತಿದ್ದು ದೇವಸ್ಥಾನಕ್ಕೆ ಬೇಕಾಗುವ ಗ್ರಾನಾಯಿಟ್‌ ಕಲ್ಲಿನ ಮೇಲಿನ ಶಿಲ್ಪಕಲೆಯು ಕರ್ನಾಟಕದ ಬಿದಾದಿಯಲ್ಲಿ ಆರಂಭವಾಗಿದೆ. ನಾವು ಅನೇಕ ಬಾರಿ ಕೇಂದ್ರ ಸರಕಾರದ ಬಳಿ ಪಾಕಿಸ್ತಾನ ಸರಕಾರದೊಂದಿಗೆ ಸಂಪರ್ಕಿಸಿ ಶಾರದಾಪೀಠ ಮಹಾಮಾರ್ಗ (ಕಾರಿಡಾರ) ನಿರ್ಮಿಸಬೇಕು ಎಂದು ಒತ್ತಾಯಿಸಿದ್ದೇವೆ. ಈ ಮಹಾಮಾರ್ಗವನ್ನು ನಿರ್ಮಿಸಿದರೆ ಕೇವಲ ಜುಮ್ಮೂ-ಕಾಶ್ಮೀರಕ್ಕೆ ಮಾತ್ರವಲ್ಲ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನತೆಗೂ ಆಗಲಿದೆ. ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾವಿಕರು ತೀರ್ಥಯಾತ್ರೆ ಮಾಡಲು ಬರುತ್ತಾರೆ’ ಎಂದು ಹೇಳಿದರು.