ಹಿಂದೂ ಜನಜಾಗೃತಿ ಸಮಿತಿಯಿಂದ ಹಾಸನದಲ್ಲಿ ಹಿಂದೂ ರಾಷ್ಟ್ರ ಅಧಿವೇಶನ ಸಂಪನ್ನ
ಹಾಸನ : ದೇವಸ್ಥಾನಗಳನ್ನು ಉಳಿಸಿಕೊಳ್ಳುವುದು ಎಲ್ಲಾ ಹಿಂದೂಗಳ ಕರ್ತವ್ಯವಾಗಿದೆ. ಇಂದು ಧರ್ಮದ ವಿಚಾರವನ್ನು ಎಲ್ಲರಿಗೂ ತಿಳಿಸುವ ಆವಶ್ಯಕತೆ ಇದೆ. ಹಿಂದೂಗಳು ದೇವಸ್ಥಾನಕ್ಕೆ ಬಂದು ಧರ್ಮದ ಆಚರಣೆ ಯನ್ನು ಪಾಲಿಸಬೇಕು, ಎಂದು ಶ್ರೀ ಶಿರಡಿ ಸಾಯಿಮಂದಿರದ ಮುಖ್ಯ ಕಾರ್ಯದರ್ಶಿ ಶ್ರೀ. ಸಾಯಿ ಪ್ರಸಾದ್ ಇವರು ಹೇಳಿದರು. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಾರ್ಚ್ 27 ರಂದು ಇಲ್ಲಿನ ಶ್ರೀ ಕನ್ನಿಕಾಪರಮೇಶ್ವರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ `ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಮಾತನಾಡುತ್ತಿದ್ದರು.
ಈ ವೇಳೆ ಹಾಸನದ ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷರಾದ ಡಾ. ರಮೇಶ ಇವರು ಮಾತನಾಡುತ್ತಾ, ಇಂದು ದೇಶದ ಇತಿಹಾಸವನ್ನು ಅನೇಕ ಕಡೆಗಳಲ್ಲಿ ತಿರುಚಲಾಗಿದೆ, ನಮ್ಮ ಪುರಾತನ ಶಾಸನಗಳ ಬಗ್ಗೆ ಇಂದು ಜನರಿಗೆ ಮಾಹಿತಿ ತಲುಪುತ್ತಿಲ್ಲ’, ಎಂದು ವಿಷಾದ ವ್ಯಕ್ತಪಡಿಸಿದರು.
ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡರವರು ಮಾತನಾಡುತ್ತಾ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ವಿವಿಧ ಜಿಹಾದ್‍ಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.