ಹಿಂದೂ ಸಂಘಟನೆಗಳು ಒಟ್ಟಾದರೆ ಹಿಂದೂ ರಾಷ್ಟ್ರ ಸ್ಥಾಪನೆ ಸಾಧ್ಯ !- ಶ್ರೀ. ತಾರಾನಾಥ್ ಕೊಟ್ಟಾರಿ, ಸಂಸ್ಕಾರ ಭಾರತಿ, ದಕ್ಷಿಣ ಕನ್ನಡ ಅಧ್ಯಕ್ಷ

ಹಿಂದೂ ಜನಜಾಗೃತಿ ಸಮಿತಿಯಿಂದ ಕೋಡಿಕೆರೆ ಗ್ರಾಮದಲ್ಲಿ (ಮಂಗಳೂರು ತಾ.) ಹಿಂದೂ ರಾಷ್ಟ್ರಜಾಗೃತಿ ಸಭೆ

ಮಂಗಳೂರು – ಹಿಂದೂಗಳು ಇಂದು ಸಂಘಟಿತರಾಗಬೇಕಾಗಿದೆ. ದೇಶದ ಎಲ್ಲ ಸಂಘಟನೆಗಳು ಒಟ್ಟಾದರೆ ಮಾತ್ರ ದೇಶದಲ್ಲಿ ಹಿಂದೂ ರಾಷ್ಟ್ರ ಬರಲು ಸಾಧ್ಯ. ಹಿಂದೂಗಳಿಗೆ ಧರ್ಮಶಿಕ್ಷಣದ ಆವಶ್ಯಕತೆ ತುಂಬ ಇದೆ. ಸನಾತನ ಸಂಸ್ಥೆಯು ಧರ್ಮಶಿಕ್ಷಣವನ್ನು ನೀಡುತ್ತಿರುವುದು ಒಳ್ಳೆಯ ಭಾಗವಾಗಿದೆ, ಎಂದು ಸಂಸ್ಕಾರ ಭಾರತಿ, ದಕ್ಷಿಣ ಕನ್ನಡ ಅಧ್ಯಕ್ಷರಾದ ಶ್ರೀ. ತಾರಾನಾಥ್ ಕೊಟ್ಟಾರಿ ಇವರು ತಿಳಿಸಿದರು. ಅವರು ಮಂಗಳೂರು ತಾಲುಕಿನ ಕೋಡಿಕೆರೆ ಗ್ರಾಮದ `ಪೆರ್ಮುದೆ ಹಿಂದೂ ಅನುಧಾನಿತ ಹಿರಿಯ ಪ್ರಾಥಮಿಕ ಶಾಲೆ’ಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೊಜಿಸಲಾದ ಹಿಂದೂ ರಾಷ್ಟ್ರ ಜಾಗೃತಿ ಸಭೆಯಲ್ಲಿ ಮಾತನಾಡುತ್ತಿದ್ದರು.

ಶಂಖನಾದದಿಂದ ಆರಂಭವಾದ ಸಭೆಯನ್ನು ಶ್ರೀ. ತಾರಾನಾಥ್ ಕೊಟ್ಟಾರಿ ಇವರು ದೀಪಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಚಂದ್ರ ಮೊಗೇರ ಇವರೂ ಉಪಸ್ಥಿತರಿಗೆ ಮಾರ್ಗದರ್ಶನ ಮಾಡಿದರು. ಕು ರಂಜಿತಾ ಇವರು ಸೂತ್ರಸಂಚಾಲನೆ ಮಾಡಿದರು.