ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗದೆ ನಮ್ಮ ಸಂಸ್ಕೃತಿ ಅರಿತು ಜೀವನ ಮಾಡೆಬೇಕಿದೆ ! – ಶ್ರೀ. ನಾಗೇಂದ್ರ ಭಟ್, ಯೋಗ ಶಿಕ್ಷಕರು, ಗೋಕರ್ಣ

ಹಿಂದೂ ಜನಜಾಗೃತಿ ಸಮಿತಿಯಿಂದ ಬಳಲೆ ಗ್ರಾಮದಲ್ಲಿ (ಅಂಕೋಲಾ ತಾ.) ಹಿಂದೂ ರಾಷ್ಟ್ರಜಾಗೃತಿ ಸಭೆ

ಕಾರವಾರ : ಇಂದು ಶಾಲಾ ಕಾಲೇಜುಗಳಲ್ಲಿ ಯೋಗ್ಯ ಸಂಸ್ಕಾರಗಳ ಅಭಾವದಿಂದ ಹೆಚ್ಚಿನ ಮಕ್ಕಳು ಪಾಶ್ಚಾತ್ಯ ಸಂಸ್ಕೃತಿಯನ್ನು ಯಥೇಚ್ಛವಾಗಿ ಪಾಲನೆ ಮಾಡುತ್ತಿದ್ದಾರೆ. ಹಾಗಾಗಿ ಇಂದು ನಾವು ನಮ್ಮ ಮನೆಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ ನಮ್ಮ ಗುರು ಶಿಷ್ಯ ಪರಂಪರೆಯನ್ನು ಮತ್ತು ಅಧ್ಯಾತ್ಮದ ಮಹತ್ವವನ್ನು ತಿಳಿಸುವುದು ತುಂಬಾ ಅನಿವಾರ್ಯವಾಗಿದೆ. ಮಕ್ಕಳು ನಮ್ಮ ಸನಾತನ ಸಂಸ್ಕೃತಿಯನ್ನು ಅರಿತು ಉತ್ತಮ ಶಿಕ್ಷಣ ಪಡೆಯುವುದು ಅವಶ್ಯಕವಾಗಿದೆ, ಎಂದು ಆಚವೆಯ ಯೋಗ ಶಿಕ್ಷಕರಾದ ಶ್ರೀ ನಾಗೇಂದ್ರ ಭಟ್ ಇವರು ತಿಳಿಸಿದರು. ಅವರು ಅಂಕೋಲಾ ತಾಲುಕಿನ ಮಾದನಗೆರೆ, ಬಳಲೆ ಗ್ರಾಮದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೊಜಿಸಲಾದ ಹಿಂದೂರಾಷ್ಟ್ರ ಜಾಗೃತಿ ಸಭೆಯಲ್ಲಿ ಮಾತನಾಡುತ್ತಿದ್ದರು. ಶಂಖನಾದದಿಂದ ಆರಂಭವಾದ ಸಭೆಯನ್ನು ಶ್ರೀ. ನಾಗೇಂದ್ರ ಭಟ್ ಇವರು ದೀಪಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶರತ ಕುಮಾರ ಇವರೂ ಉಪಸ್ಥಿತರಿಗೆ ಮಾರ್ಗದರ್ಶನ ಮಾಡಿದರು. 80ಕ್ಕೂ ಅಧಿಕ ಧರ್ಮಪ್ರೇಮಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಶ್ರೀ. ಚಂದ್ರಶೇಖರ ಮೆಸ್ತಾ ಇವರು ಸೂತ್ರಸಂಚಾಲನೆ ಮಾಡಿದರು.

(ಎಡದಿಂದ) ದೀಪಪ್ರಜ್ವಲನೆ ಮಾಡುತ್ತಿರುವ ಶ್ರೀ ನಾಗೇಂದ್ರ ಭಟ್ ಮತ್ತು ಶ್ರೀ. ಶರತ ಕುಮಾರ

ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಯಲು ಹಿಂದೂ ರಾಷ್ಟ್ರವೇ ಪರಿಹಾರ ಎಂದು, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶರತ ಕುಮಾರ ಇವರು ಹೇಳಿದರು