* ಪಗಡಿ ಬಳಸುವುದು ಸಿಖ್ಖರ ಧರ್ಮದ ಹಾಗೂ ತಿಲಕವು ಹಿಂದೂಗಳ ಧರ್ಮದ ಅನಿವಾರ್ಯ ಭಾಗವಾಗಿದೆ; ಆದರೆ ಹಿಜಾಬನ್ನು ಧರಿಸುವುದು ಮುಸಲ್ಮಾನರ ಧರ್ಮದ ಅನಿವಾರ್ಯ ಭಾಗವಲ್ಲ, ಆದುದರಿಂದಲೇ ಅದಕ್ಕೆ ಅನುಮತಿ ಇಲ್ಲ, ಎಂಬ ರೀತಿಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ, ಇದನ್ನು ಕುರೇಶೀಯವರು ಏಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ? – ಸಂಪಾದಕರು
* ಮುಸಲ್ಮಾನ ವ್ಯಕ್ತಿಯು ಎಷ್ಟೇ ದೊಡ್ಡ ಪದವಿಯಲ್ಲಿದ್ದರೂ ಅವರು ತಮ್ಮ ಧರ್ಮದ ಪಕ್ಷವನ್ನೇ ಮಂಡಿಸುತ್ತಿರುತ್ತಾರೆ, ಆದರೆ ಹಿಂದೂಗಳು ದೊಡ್ಡ ಪದವಿಯಲ್ಲಿದ್ದರೂ ಇಲ್ಲದಿದ್ದರೂ ಮಾರಣಾಂತಿಕವಾದ ಜಾತ್ಯಾತೀತತೆಯನ್ನೇ ಆಯುಷ್ಯದುದ್ದಕ್ಕೂ ಕಾದುಕೊಂಡಿರುತ್ತಾರೆ, ಇದು ಇದರ ಉದಾಹರಣೆಯಾಗಿದೆ ! – ಸಂಪಾದಕರು
ನವದೆಹಲಿ – ಹಿಜಾಬ ಕುರಾನಿನ ಭಾಗವಲ್ಲ; ಆದರೆ ಪ್ರಕಾಶಮಾನವಾದ ಬಟ್ಟೆಗಳನ್ನು ಧರಿಸಬೇಕು, ಎಂದು ಅದರಲ್ಲಿ ಹೇಳಲಾಗಿದೆ. ಶಾಲೆಯ ಸಮವಸ್ತ್ರದಲ್ಲಿ ಸಿಖ್ಖರಿಗೆ ಪಗಡಿ ಮತ್ತು ಇತರರಿಗೆ ತಿಲಕವನ್ನು ಹಚ್ಚಲು ಅನುಮತಿ ನೀಡಲಾಗುತ್ತದೆ, ಆದರೆ ಹಿಜಾಬಿಗೆ ಅನುಮತಿಯನ್ನು ನೀಡಲು ಅಡಚಣೆ ಏನಿದೆ ? ಹಿಜಾಬ ಆವಶ್ಯಕವಾಗಿದೆಯೇ ಅಥವಾ ಇಲ್ಲ ಎಂಬುದನ್ನು ಮೌಲಾನಾರವರು ಹೇಳಬಹುದು. ಈ ಅಂಶವು ಅವರ ಅಧೀನದಲ್ಲಿದೆ. ಇದರ ಬದಲು ಮೌಲಾನಾ (ಇಸ್ಲಾಮೀ ವಿದ್ವಾಂಸರು) ಭಾರತೀಯ ದಂಡ ಸಂಹಿತೆಯ ವಿಷಯದಲ್ಲಿ ತೀರ್ಪು ನೀಡಲು ಆರಂಭಿಸಿದರೆ ಅದು ಯೋಗ್ಯವೇ ? ಎಂದು ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ ವಾಯ್. ಎಸ್. ಕುರೇಶೀಯವರು ಒಂದು ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ.
‘Maulana will decide about hijab and not Judge’: What ex-Chief Election Commissioner Dr SY Quraishi said on love jihad, hijab, and Kashmiri Panditshttps://t.co/R2COHhl5Wk
— OpIndia.com (@OpIndia_com) March 26, 2022
* ಕುರೇಶೀಯವರು ಸಂದರ್ಶನದಲ್ಲಿ ನೀಡಿದ ಹೇಳಿಕೆಗಳು
೧. ‘ಸುಶಿಕ್ಷಿತ ಹಿಂದೂ ಹುಡುಗಿಯರು ಸುಶಿಕ್ಷಿತ ಮುಸಲ್ಮಾನ ಹುಡುಗರನ್ನು ಪ್ರೀತಿಯ ಜಾಲದಲ್ಲಿ ಸಿಲುಕಿಸಿ ಅವರೊಂದಿಗೆ ವಿವಾಹ ಮಾಡುತ್ತಾರೆ !’ (ಅಂತೆ)
‘ಲವ್ ಜಿಹಾದ’ ಇದು ಕೇವಲ ಅಪಪ್ರಚಾರವಾಗಿದೆ. ಇದರಲ್ಲಿ ಮುಸಲ್ಮಾನ ಹುಡುಗಿಯರಿಗೂ ಹಾನಿಯಾಗುತ್ತಿದೆ. ಏಕೆಂದರೆ ಸುಶಿಕ್ಷಿತ ಹಿಂದೂ ಹುಡುಗಿಯರು ಸುಶಿಕ್ಷಿತ ಮುಸಲ್ಮಾನ ಹುಡುಗರನ್ನು ಪ್ರೀತಿಯ ಜಾಲದಲ್ಲಿ ಸಿಲುಕಿಸಿ ಅವರೊಂದಿಗೆ ವಿವಾಹ ಮಾಡುತ್ತಾರೆ. ಇದರಿಂದಾಗಿ ಮುಸಲ್ಮಾನ ಹುಡುಗಿಯರಿಗೆ ಇಂತಹ ಹುಡುಗರು ಸಿಗುವುದಿಲ್ಲ. (ಇಂತಹ ತರ್ಕವು ಕುರೇಶೀಯವರ ಮೂರ್ಖತನವೇ ಆಗಿದೆ ! ಲವ್ ಜಿಹಾದಿನ ಸಾವಿರಾರು ಪ್ರಕರಣಗಳಲ್ಲಿ ಮುಸಲ್ಮಾನ ಯುವಕರು ಹಿಂದೂ ಹುಡುಗಿಯರಿಗೆ ತಾನು ‘ಹಿಂದೂ’ ಇದ್ದೇನೆ ಎಂದು ಸುಳ್ಳು ಹೇಳಿ ಬಲೆಗೆ ಸಿಲುಕಿಸುತ್ತಾರೆ ಮತ್ತು ಅವರ ಮತಾಂತರ ಮಾಡಿ ಅವರೊಂದಿಗೆ ವಿವಾಹ ಮಾಡಿ ಲೈಂಗಿಕ ಶೋಷಣೆ ಮಾಡುತ್ತಾರೆ, ಇದನ್ನು ಕುರೇಶೀಯವರು ಉದ್ದೇಶಪೂರ್ವಕವಾಗಿ ಹೇಳುತ್ತಿಲ್ಲ, ಎಂಬುದನ್ನು ಗಮನದಲ್ಲಿಡಿ ! – ಸಂಪಾದಕರು)
೨. ‘ಮುಂದಿನ ೧ ಸಾವಿರ ವರ್ಷಗಳಲ್ಲಿ ಮುಸಲ್ಮಾನರ ಜನಸಂಖ್ಯೆಯು ಹೆಚ್ಚಾಗಿ ಮುಸಲ್ಮಾನರು ಪ್ರಧಾನಮಂತ್ರಿ ಆಗಲಾರರು ! (ಅಂತೆ)
ಮುಸಲ್ಮಾನರಲ್ಲಿ ಕುಟುಂಬ ನಿಯೋಜನೆ ಮಾಡುವ ಪ್ರಮಾಣವು ಕಡಿಮೆ ಇದೆ; ಆದರೆ ಇದರ ಸಂಬಂಧವು ಧರ್ಮದೊಂದಿಗೆ ಇಲ್ಲ. ಮುಸಲ್ಮಾನರು ಜನಸಂಖ್ಯೆಯನ್ನು ಹೆಚ್ಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದರೆ ಅದು ತಪ್ಪಾಗಿದೆ. ಮುಂದಿನ ೧ ಸಾವಿರ ವರ್ಷಗಳಲ್ಲಿ ಮುಸಲ್ಮಾನರ ಜನಸಂಖ್ಯೆಯು ಹೆಚ್ಚಾಗಿ ಮುಸಲ್ಮಾನರು ಪ್ರಧಾನಮಂತ್ರಿಯಾಗುವ ಸಾಧ್ಯತೆಯೇ ಇಲ್ಲ. (ಮುಸಲ್ಮಾನರ ಜನಸಂಖ್ಯೆಯು ಶೇ. ೪೦ ರಷ್ಟು ಹೆಚ್ಚಾದರೆ ಕಾಶ್ಮೀರದಲ್ಲಿ ಹಿಂದೂಗಳಿಗಾದ ಸ್ಥಿತಿಯು ಸಂಪೂರ್ಣ ದೇಶದಲ್ಲಿನ ಹಿಂದೂಗಳಿಗೆ ಆಗುವುದು, ಎಂಬುದು ಹಿಂದೂಗಳಿಗೆ ತಿಳಿದಿದೆ. ಕುರೇಶೀಯವರು ಇದೇ ಸಂಗತಿಯನ್ನು ಹೇಳುತ್ತಿಲ್ಲ ! – ಸಂಪಾದಕರು)
೩. ‘ಜಾತ್ಯಾತೀತ ಹಿಂದೂಗಳನ್ನು ಕಟ್ಟರತಾವಾದಿಗಳನ್ನಾಗಿಸಲಾಗುತ್ತಿದೆ !’ (ಅಂತೆ)
ಕುರೇಶೀಯವರು ‘ಉತ್ತರಪ್ರದೇಶದಲ್ಲಿ ಆದಂತಹ ಯೋಗಿ ಆದಿತ್ಯನಾಥರ ವಿಜಯವು ಕಟ್ಟರತಾವಾದದ ವಿಜಯವಾಗಿದೆ; ಏಕೆಂದರೆ ದೇಶದಲ್ಲಿ ಧ್ರುವೀಕರಣದ ಯುಗ ನಡೆಯುತ್ತಿದೆ. ಮೊದಲನೇ ಧ್ರುವೀಕರಣವು ವಿಭಜನೆಯ ಸಮಯದಲ್ಲಿ, ಎರಡನೇಯ ಧ್ರುವೀಕರಣವು ಬಾಬರಿಯ ಸಮಯದಲ್ಲಿ ಹಾಗೂ ಮೂರನೇಯ ಧ್ರುವೀಕರಣವು ಈಗ ನಡೆಯುತ್ತಿದೆ. ಹಿಂದೂಗಳ ಸ್ವಭಾವವು ಜಾತ್ಯಾತೀತವೇ ಆಗಿದೆ; ಆದರೆ ಇಂದು ಅವರನ್ನು ಕಟ್ಟರತಾವಾದಿಗಳನ್ನಾಗಿ ಮಾಡಲಾಗುತ್ತಿದೆ’ ಎಂದು ಹೇಳಿದರು. (ಹಿಂದೂಗಳಿಗೆ ಈಗ ಢೋಂಗಿ ಜಾತ್ಯಾತೀತತೆಯಿಂದ ಎಚ್ಚರಗೊಳಿಸಲಾಗುತ್ತಿದೆ, ಇದರಿಂದ ಅವರಿಗೆ ವಸ್ತುಸ್ಥಿತಿ ತಿಳಿಯಲು ಆರಂಭವಾಗಿದೆ. ಮತಾಂಧರಿಗೆ ಹಾಗೂ ಜಾತ್ಯಾತೀತವಾದಿಗಳಿಗೆ ಇದರಿಂದಲೇ ತೊಂದರೆಯಾಗುತ್ತಿದೆ. ಆದುದರಿಂದಲೇ ಅವರು ಇಂತಹ ಹೇಳಿಕೆ ನೀಡಲು ಆರಂಭಿಸಿದ್ದಾರೆ ! – ಸಂಪಾದಕರು)
೪. ಈವಿಎಮ್ ಯಂತ್ರದಲ್ಲಿ ಹಗರಣವಾಗಲು ಸಾಧ್ಯವಿಲ್ಲ !
ಇಲೆಕ್ಟ್ರಾನಿಕ ಮತದಾನಯಂತ್ರವು ವಿಶ್ವಾಸಾರ್ಹವಾಗಿದೆ. ಇದರಲ್ಲಿ ತೊಡಕು ಮಾಡಲು ಸಾಧ್ಯವಿದ್ದರೆ ಬಂಗಾಳದಲ್ಲಿ ಭಾಜಪವು ಸೋಲುತ್ತಿರಲಿಲ್ಲ.