ಕಳೆದ 3 ವರ್ಷಗಳಲ್ಲಿ ಹಿಂದೂಗಳ ಮೇಲೆ ನಡೆದ ಅತ್ಯಾಚಾರದ ಅಂಕಿಅಂಶಗಳನ್ನು ಕೇಂದ್ರ ಸರಕಾರ ದೇಶದ ಜನತೆಗೆ ಹೇಳಬೇಕು !

ಕಳೆದ 3 ವರ್ಷದಲ್ಲಿ ದೇಶದಲ್ಲಿನ ದಲಿತರ ಮೇಲಿನ ಅತ್ಯಾಚಾರದ 1 ಲಕ್ಷ 38 ಸಾವಿರಗಿಂತಲೂ ಅಧಿಕ ಪ್ರಕರಣಗಳು ದಾಖಲು ! – ಕೇಂದ್ರ ಸಚಿವ ರಾಮದಾಸ ಆಠವಲೆ ಇವರಿಂದ ಮಾಹಿತಿ

ಕೇಂದ್ರ ಸಚಿವ ರಾಮದಾಸ ಆಠವಲೆ

ನವ ದೆಹಲಿ – ಭಾರತದಲ್ಲಿ 2018 ರಿಂದ 2020 ಈ ಕಾಲಾವಧಿಯಲ್ಲಿ ದಲಿತರ ಮೇಲೆ ನಡೆದ ಅತ್ಯಾಚಾರಕ್ಕೆ ಸಂಬಂಧಿಸಿದ 1 ಲಕ್ಷ 38 ಸಾವಿರ 825 ಆರೋಪಗಳು ದಾಖಲಾಗಿವೆ ಎಂದು ಕೇಂದ್ರ ಸಚಿವ ರಾಮದಾಸ ಆಠವಲೆ ಇವರು ಸಂಸತ್ತಿನಲ್ಲಿ ಮಾಹಿತಿ ನೀಡಿದರು. ಬಹುಜನ ಸಮಾಜ ಪಕ್ಷದ ಸದಸ್ಯ ಹಾಜಿ ಫಜಲುರ ರಹಮಾನ ಇವರು ಈ ವಿಷಯವಾಗಿ ಪ್ರಶ್ನೆ ಕೇಳಿದ್ದರು. `ನ್ಯಾಷನಲ್ ಕ್ರೈಂ ರೆಕಾಡ್ರ್ಸ್ ಬ್ಯೂರೋ’ದ 2021 ರ ವರದಿಯಲ್ಲಿ ದಲಿತರ ಮೇಲಿನ ಅತ್ಯಾಚಾರದ ಸಂಖ್ಯೆ 8 ಸಾವಿರ 272 ಇಷ್ಟು ಆಗಿದೆ, ಅಂದರೆ ಅದರಲ್ಲಿ ಶೇ. 9.3 ರಷ್ಟು ಹೆಚ್ಚಳವಾಗಿದೆ.

ಆಠವಲೆ ಮಾತು ಮುಂದುವರೆಸುತ್ತಾ,

1. 2018 ರಲ್ಲಿ `ಅಟ್ರಾಸಿಟಿ’ಯ 42 ಸಾವಿರ 793 ಪ್ರಕರಣಗಳು ದಾಖಲಾಗಿದ್ದವು. 2019 ರಲ್ಲಿ ಇದರಲ್ಲಿ ಏರಿಕೆಯಾಗಿ ಅದು 45 ಸಾವಿರ 961 ಹಾಗೂ 2020 ರಲ್ಲಿ ಅದು 50 ಸಾವಿರ 291 ರಷ್ಟು ಆಯಿತು.

2. ಉತ್ತರಪ್ರದೇಶದಲ್ಲಿ 2020 ರಲ್ಲಿ 12 ಸಾವಿರ 714 ಪ್ರಕರಣಗಳು ದಾಖಲಾಗಿದ್ದವು. ಕಳೆದ 3 ವರ್ಷಗಳಲ್ಲಿ ಅತಿಹೆಚ್ಚು ಅಂದರೆ 36 ಸಾವಿರ 467 ಪ್ರಕರಣಗಳು ದಾಖಲಾಗಿವೆ. ನಂತರ ಬಿಹಾರದಲ್ಲಿ 20 ಸಾವಿರ 973, ರಾಜಸ್ಥಾನದಲ್ಲಿ 18 ಸಾವಿರ 418 ಮತ್ತು ಮಧ್ಯಪ್ರದೇಶದಲ್ಲಿ 16 ಸಾವಿರ 952 ಪ್ರಕರಣಗಳು ದಾಖಲಿಸಲಾಗಿದೆ.

3. ಕಳೆದ 3 ವರ್ಷಗಳಲ್ಲಿ ದಲಿತರ ವಿರುದ್ಧ ಎಲ್ಲಕ್ಕಿಂತ ಕಡಿಮೆ ಅಪರಾಧವು ಬಂಗಾಳದಲ್ಲಿ ದಾಖಲಾಗಿದೆ. ಇಲ್ಲಿ ಕೇವಲ 373, ಪಂಜಾಬದಲ್ಲಿ 499, ಛತ್ತೀಸಗಡದಲ್ಲಿ 921 ಹಾಗೂ ಜಾರಖಂಡನಲ್ಲಿ 1 ಸಾವಿರ 854 ಪ್ರಕರಣಗಳು ದಾಖಲಿಸಲಾಗಿದೆ.

4. ದಕ್ಷಿಣ ಭಾಗದ ರಾಜ್ಯಗಳಲ್ಲಿ ಆಂಧ್ರಪ್ರದೇಶದಲ್ಲಿ ಕಳೆದ 3 ವರ್ಷಗಳಲ್ಲಿ 5 ಸಾವಿರ 857, ತೆಲಂಗಾಣದಲ್ಲಿ 5 ಸಾವಿರ 156, ಕರ್ನಾಟಕದಲ್ಲಿ 4 ಸಾವಿರ 277, ತಮಿಳುನಾಡುವಿನಲ್ಲಿ 3 ಸಾವಿರ 831 ಮತ್ತು ಕೇರಳದಲ್ಲಿ 2 ಸಾವಿರ 591 ಪ್ರಕರಣಗಳು ದಾಖಲಾಗಿವೆ.