ಜಮ್ಮು-ಕಾಶ್ಮೀರದ ರಾಜಮನೆತನದ ವಂಶಸ್ಥ ವಿಕ್ರಮಾದಿತ್ಯ ಸಿಂಗ್ ಕಾಂಗ್ರೆಸ್ ವಿದಾಯ !

ಜಮ್ಮು-ಕಾಶ್ಮೀರದ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ ಎಂಬ ಆರೋಪ !

ಕಾಂಗ್ರೆಸನ ಅಧೋಗತಿ ಆರಂಭವಾಗಿದ್ದು ಮುಂದೆ ಇಂತಹ ಅನೇಕ ನಾಯಕರು ಮತ್ತು ಕಾರ್ಯಕರ್ತರು ಪಕ್ಷ ತೊರೆದರೂ ಅಚ್ಚರಿಯಿಲ್ಲ ! – ಸಂಪಾದಕರು

ಶ್ರೀನಗರ : ಕಾಂಗ್ರೆಸನ ಹಿರಿಯ ನಾಯಕ ಕರಣ ಸಿಂಗ್ ಅವರ ಪುತ್ರ ಮತ್ತು ಜಮ್ಮು ಮತ್ತು ಕಾಶ್ಮೀರದ ರಾಜಮನೆತನದ ವಂಶಸ್ಥರಾದ ವಿಕ್ರಮಾದಿತ್ಯ ಸಿಂಗ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಕಾಂಗ್ರೆಸ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು, ‘ನಾನು ಅಖಿಲ ಭಾರತೀಯ ಕಾಂಗ್ರೆಸನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’, ಎಂದು ಹೇಳಿದ್ದಾರೆ.

ರಾಜೀನಾಮೆಗೆ ಕಾರಣಗಳನ್ನು ನೀಡುತ್ತಾ, “ಜಮ್ಮು ಮತ್ತು ಕಾಶ್ಮೀರದ ಜನರ ಭಾವನೆಗಳು ಮತ್ತು ಆಕಾಂಕ್ಷೆಗಳನ್ನು ಗಣನೆಗೆ ತೆಗೆದುಕೊಂಡು ಅದರಂತೆ ನಡೆದುಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ, ಎಂದು ನನಗೆ ಮನವರಿಕೆಯಾಗಿದೆ.” ಅವರು ಪತ್ರದಲ್ಲಿ, “ಜಮ್ಮು ಮತ್ತು ಕಾಶ್ಮೀರದ ಕುರಿತು ಗಂಭೀರ ಅಂಶಗಳ ನನ್ನ ನಿಲುವು ಕಾಂಗ್ರೆಸ್ ಪಕ್ಷದೊಂದಿಗೆ ಹೊಂದಿಕೆಯಾಗುತ್ತಿಲ್ಲ. ಕಾಂಗ್ರೆಸ್ ಜಮ್ಮು ಮತ್ತು ಕಾಶ್ಮೀರದಲ್ಲಿನ ವಾಸ್ತವವನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿದೆ ಎಂದು ಹೇಳಿದ್ದಾರೆ.”