ಭಾವನಗರ (ಗುಜರಾತ) ಇಲ್ಲಿಯ ಮತಾಂಧರಿಂದ ಹಿಂದೂಗಳಿಗೆ ಮನೆ(ಫ್ಲಾಟ್) ಮಾರುವಂತೆ ಬೆದರಿಕೆ !

ಹಿಂದೂ ವಾಸಿಸುತ್ತಿರುವ ಕಟ್ಟಡದ ಪಕ್ಕದಲ್ಲಿ ಕಟ್ಟಡ ಕೆಲಸ ನಡೆಯುತ್ತಿರುವ ಕಟ್ಟಡದಲ್ಲಿ ಮತಾಂಧರು ಮನೆಗಳನ್ನು ತೆಗೆದುಕೊಂಡಿದ್ದರಿಂದ ಅವರು ಹಿಂದೂಗಳನ್ನು ಓಡಿಸುವ ಪ್ರಯತ್ನ !

ಗುಜರಾತ್‍ನ ಗೃಹ ಸಚಿವರು ಇಂತಹ ಘಟನೆ ನಡೆದಿರುವ ದಾವೆ ತಳ್ಳಿಹಾಕಿದ್ದಾರೆ !

ಹಿಂದೂ ಬಹುಸಂಖ್ಯಾತ ಪ್ರದೇಶಗಳಲ್ಲಿ ಮತಾಂಧರಿಗೆ ಮನೆ ನೀಡಲು ನಿರಾಕರಿಸಿದಾಗ ಕೂಗಾಟ ಮಾಡುವರು ಈಗ ಮೌನವೇಕೆ ? -ಸಂಪಾದಕರು 

‘ಸಾತ್ವಿಕ್ ಹೌಸಿಂಗ್ ಕಂಪ್ಲೇಕ್ಸ್’

ಭಾವನಗರ (ಗುಜರಾತ) – ಇಲ್ಲಿಯ ಮೋಖಡಜಿ ಸರ್ಕಲ್ ಪ್ರದೇಶದಲ್ಲಿನ `ಸಾತ್ವಿಕ್ ಹೌಸಿಂಗ್ ಕಂಪ್ಲೇಕ್ಸ್’ನಲ್ಲಿ ವಾಸಿಸುವ 15 ಫ್ಲಾಟ್‍ಗಳ ಹಿಂದೂ ಮಾಲಿಕರಿಗೆ ಅವರ ಫ್ಲಾಟ್‍ಗಳನ್ನು ಮಾರುವಂತೆ ಬೆದರಿಕೆ ನೀಡಲಾಗಿದೆ. ಕಳೆದ ವಾರದಲ್ಲಿ 100 ರಿಂದ 150 ಜನರಿಗೆ ಮತಾಂಧರ ಗುಂಪಿನಿಂದ ಕಟ್ಟಡದೊಳಗೆ ನುಗ್ಗಿ ಫ್ಲಾಟ್ ಮಾಲಿಕರಿಗೆ `ಫ್ಲಾಟ್ ಮಾರಿ ಇಲ್ಲವಾದರೆ ಪರಿಣಾಮ ಕೆಟ್ಟದ್ದಾಗುವುದು’, ಎಂಬ ಬೆದರಿಕೆ ನೀಡಿದ್ದರು. ಗುಜರಾತ್‍ನ ಗೃಹ ಸಚಿವ ಹರ್ಷ ಸಾಂಘವಿ ಇವರು ಇಂತಹ ಘಟನೆ ನಡೆದಿರುವುದು ನಿರಾಕರಿಸಿದ್ದಾರೆ. ಸಾಂಘವಿ ಇವರು, `ಹಿಂದೂಗಳನ್ನು ಫ್ಲಾಟ ಮಾರುವ ಬಗ್ಗೆ ಹೇಳಿರುವುದು ಸುಳ್ಳಾಗಿದೆ, ಇಂತಹ ಯಾವುದೇ ಘಟನೆ ನಡೆದಿಲ್ಲ.’ ಈ ವಿಷಯದ ವಾರ್ತೆ `ಆಪ್ ಇಂಡಿಯಾ’ ಈ ಜಾಲತಾಣದಲ್ಲಿ ಪ್ರಸಾರ ಮಾಡಲಾಗಿದೆ.

1. ಸ್ಥಳಿಯ ಜನರ ಹೇಳಿಕೆಯ ಪ್ರಕಾರ ಇಲ್ಲಿಯ ಕಟ್ಟಡದ ಪಕ್ಕದಲ್ಲಿ ಬೇರೆ ಕೆಲವು ಕಟ್ಟಡ ಕೆಲಸ ನಡೆಯುತ್ತಿದೆ ಮತ್ತು ಅಲ್ಲಿ ಕೇವಲ ಮತಾಂಧರ ಫ್ಲಾಟ್‍ಗಳು ಕಾಯ್ದಿರಿಸಲಾಗಿದೆ. ಅವರಿಗೆ ಈ ಪ್ರದೇಶದಲ್ಲಿ ಅವರ ಪ್ರಾಬಲ್ಯ ಬೇಕಿರುವುದರಿಂದ ಅವರು ಬೇರೆ ಧರ್ಮದವರನ್ನು ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

2. ಕೆಲವು ಫ್ಲಾಟ್ ಮಾಲಿಕರು ಸ್ಥಳೀಯ ಭಾಜಪ ನಾಯಕರ ಸಹಾಯದಿಂದ ಫ್ಲಾಟ್ ಮಾರುವ ಪ್ರಯತ್ನ ಮಾಡುತ್ತಿದ್ದಾರೆ. ಈ ನಾಯಕರು ಈ ಮಾಲೀಕರಿಗೆ, ಈಗ ನಿಮ್ಮ ಫ್ಲಾಟ್‍ಗಳಿಗೆ ಬೆಲೆ ಸಿಗುತ್ತದೆ, ಅದು ಜಾಸ್ತಿ ಇದೆ. ಪಕ್ಕದ ಕಟ್ಟಡ ಕೆಲಸ ನಡೆಯುತ್ತಿದೆ. ಅಲ್ಲಿ ಮತಾಂಧರು ವಾಸಿಸಲು ಬಂದರೆ ನಿಮಗೆ ಅವರ ತೊಂದರೆಯಾಗಬಹುದು ಎಂದು ಹೇಳಿದ್ದಾರೆ.

3. ಕೆಲವು ಸಂಘಟನೆಗಳು ಸರಕಾರಕ್ಕೆ ಇಲ್ಲಿ ಧಾರ್ಮಿಕ ಸದ್ಭಾವನೆ ನಿರ್ಮಾಣ ಮಾಡುವ ಪ್ರಯತ್ನ ಮಾಡಲು ವಿನಂತಿಸಿದ್ದಾರೆ.