* ಹಿಂದೂಗಳ ಹಬ್ಬದ ದಿನದಂದು ಮಸೀದಿಯಿಂದ ಕಲ್ಲುತೂರಾಟ ನಡೆಸುವ ಅಥವಾ ಹಿಂದೂಗಳ ಮೇಲೆ ನಡೆಸುವ ದಾಳಿಯ ವಾರ್ತೆಗಳು ಹಿಂದೂಗಳು ಓದಿದ್ದಾರೆ. ಆದರೆ ಉತ್ತರಪ್ರದೇಶದ ಕಟ್ಟರ ಹಿಂದುತ್ವನಿಷ್ಠ ಯೋಗಿ ಆದಿತ್ಯನಾಥ ಅವರ ಸರಕಾರ ಇರುವುದರಿಂದ, ಈಗ ಇಂತಹ ವಾರ್ತೆಗಳು ಓದಲು ಸಿಗುತ್ತಿದೆ ! – ಸಂಪಾದಕರು * ಇದಕ್ಕೆ ಅಲ್ಪಸಂಖ್ಯಾತರ `ಸೌಹಾರ್ದ ವೃತ್ತಿ’ ಅಥವಾ `ಸಹಿಷ್ಣು’ ಎಂಬ ವ್ಯಾಖ್ಯೆ ನೀಡಬಾರದು. ಉತ್ತರಪ್ರದೇಶದಲ್ಲಿ ಕಟ್ಟರ ಹಿಂದುತ್ವನಿಷ್ಠ ಯೋಗಿ ಆದಿತ್ಯನಾಥ ಇವರು ಹಿಂದೂಗಳ ಬಹುಮತದಿಂದ ಆರಿಸಿ ಬಂದಿರುವುದರಿಂದ ಕೆಲವರು ಹೆದರಿದ್ದಾರೆ, ಆದ್ದರಿಂದ ಹೋಳಿ ಹಬ್ಬದ ದಿನದಂದು ಏನಾದರೂ ಅಯೋಗ್ಯ ನಡೆದರೆ ಅದು ಸಹಿಸಲಾಗುವುದಿಲ್ಲವೆಂದು ಈ ಸಮಾಜಕ್ಕೆ ಸಂಪೂರ್ಣವಾಗಿ ತಿಳಿದಿರುವುದರಿಂದ ಅನಿವಾರ್ಯವಾಗಿ ಈ ನಿರ್ಣಯ ತೆಗೆದುಕೊಂಡಿದ್ದಾರೆ, ಹೇಗೆ ಅನ್ನಬಹುದು ! -ಸಂಪಾದಕರು |
ಲಕ್ಷ್ಮಣಪುರಿ – ಉತ್ತರಪ್ರದೇಶದಲ್ಲಿ ಕನಿಷ್ಠ 22 ಮಸಿದಿಗಳು ಹೋಳಿ ಹಬ್ಬದಂದು ಅವರ ಶುಕ್ರವಾರದ ನಮಾಜ್‍ನ ಸಮಯ ಬದಲಾಯಿಸುವ ನಿರ್ಣಯ ತೆಗೆದುಕೊಂಡಿದ್ದಾರೆ. ಲಕ್ಷ್ಮಣ ಪುರಿಯಲ್ಲಿ ಹೆಚ್ಚಿನ ಮಸೀದಿಗಳಲ್ಲಿ ಶುಕ್ರವಾರದ ನಮಾಜ ಮತ್ತು `ಖುತ್ಬಾ’ (ಪ್ರವಚನ) ಇದು ಸಾಮಾನ್ಯವಾಗಿ ಮಧ್ಯಾಹ್ನ 12.30 ಗಂಟೆಗೆ ಮಾಡಲಾಗುತ್ತದೆ. ಈ ವರ್ಷ ದೇಶಾದ್ಯಂತ ಹೋಳಿ ಹಬ್ಬ ಮತ್ತು ಶಬ್-ಎ-ಬಾರಾತ್ ಈ ಹಬ್ಬ ಒಂದೇ ದಿನ ಆಚರಿಸಲಾಗುವುದರಿಂದ ನಗರದ ಈ ಮಸೀದಿಗಳು ಸಮಯ ಬದಲಾವಣೆ ಮಾಡಿ ಶುಕ್ರವಾರದ ನಮಾಜ್ ಮಧ್ಯಾಹ್ನ 1.30 ಗಂಟೆಯ ನಂತರ ಆಯೋಜಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು `ಇಸ್ಲಾಮಿಕ್ ಸೆಂಟರ್ ಆಫ್ ಇಂಡಿಯಾ’ (ಐ.ಸಿ.ಇ.ಯು)ಯಿಂದ ಮಾಹಿತಿ ನೀಡಲಾಗಿದೆ. ಹೋಳಿ ಹಬ್ಬದ ದಿನದಂದು ಮುಸಲ್ಮಾನರ ಶಬ-ಎ-ಬಾರಾತ ಈ ಹಬ್ಬವು ಇರುವುದರಿಂದ ಈ ದಿನ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿ ಮಸೀದಿಗೆ ಹೋಗಿ ನಮಾಜ್ ಮಾಡುತ್ತಾರೆ. `ಈ ದಿನದಂದು ನಡೆಯುವ ಪಾಪದ ಬಗ್ಗೆ ಮನಃಪೂರ್ವಕವಾಗಿ ಕ್ಷಮೆಯಾಚಿಸಿದರೆ ಅಲ್ಲಾಹ ಎಲ್ಲರಿಗೂ ಕ್ಷಮಿಸುತ್ತಾನೆ’, ಎಂದು ಮುಸಲ್ಮಾನರಲ್ಲಿ ಶ್ರದ್ಧೆ ಇದೆ.
Uttar Pradesh: Mosques alter Friday prayer time for Holi in Lucknow https://t.co/QSnhtXumtm
— TOI Lucknow News (@TOILucknow) March 16, 2022
1. ನಮಾಜನ ಸಮಯ ಬದಲಾವಣೆ ಮಾಡುವುದರಲ್ಲಿ ಐಶಬಾಗ ಇದಗಾಹದಲ್ಲಿಯ ಜಾಮಾ ಮಸೀದಿ, ಆಕಬರಿ ಗೇಟನ ಎಕ್ ಮಿನರ್ ಮಸಿದಿ, ಶಾಹಮಿನಾ ಶಾಹ ಮಸಿದಿ, ಇವುಗಳ ಸಮಾವೇಶಗೊಂಡಿದೆ.
2. ಐಸಿಐ ನ ನಾಯಕ ಮತ್ತು ಐಶಬಾಗ ಈದಗಾಹದ ಇಮಾಮ್ ಮೌಲಾನಾ ರಶೀದ್ ಇವರು, `ಹೋಳಿ ಹಬ್ಬದ ದಿನದಂದು ಅಯೋಗ್ಯ ಘಟನೆ ತಡೆಯಲು ಮಸೀದಿಯಲ್ಲಿನ ಅವರ ನಮಾಜದ ಸಮಯ ಬದಲಾವಣೆ ಮಾಡಬೇಕು’, ಎಂದು ಸೂಚನೆ ನೀಡಿದ್ದರು.
3. ಶಬ-ಎ-ಬಾರಾತವು ಹೋಳಿ ಹಬ್ಬದ ದಿನದಂದು ಬಂದಿರುವುದರಿಂದ ಮೌಲವಿಯು ಮುಸಲ್ಮಾನರಿಗೆ ಕಾರ್ಯಕ್ರಮ ಮುಗಿದ ನಂತರ ಮಸೀದಿ ಮತ್ತು ಅವರ ಪ್ರಿಯ ಜನರ ಕಬ್ರಕ್ಕೆ ಭೇಟಿ ನೀಡುವ ಸಲಹೆ ನೀಡಿದೆ. ಮುಸಲ್ಮಾನರಿಗೆ ಮನೆಯಿಂದ ದೂರ ಇರುವ ಮಸೀದಿಗೆ ಹೋಗುವ ಬದಲು ಅವರ ಸ್ಥಳಿಯ ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ಸಲಹೆ ನೀಡಿದ್ದಾರೆ.