ವಾಪಿ (ಗುಜರಾತ)ಯಲ್ಲಿನ ಕ್ರೈಸ್ತ ಮಿಶನರಿಗಳ ಶಾಲೆಯಲ್ಲಿ ‘ಜಯ ಶ್ರೀರಾಮ’ ಎಂದು ಘೋಷಣೆ ಕೂಗಿದ ಇಬ್ಬರು ಹಿಂದೂ ವಿದ್ಯಾರ್ಥಿಗಳನ್ನು ಶಾಲೆಯಿಂದ ತೆಗೆದುಹಾಕುವುದಾಗಿ ಬೆದರಿಕೆ !

ಹಿಂದುತ್ವನಿಷ್ಠರ ವಿರೋಧದ ನಂತರ ಶಾಲೆಯ ಆಡಳಿತ ಮಂಡಳಿಯಿಂದ ಕ್ಷಮಾಯಾಚನೆ

* ಗುಜರಾತಿನಲ್ಲಿ ಭಾಜಪದ ಸರಕಾರವಿರುವಾಗ ಕ್ರೈಸ್ತ ಮಿಶನರಿಗಳು ಇಂತಹ ಕೃತಿ ಮಾಡಲು ಹೇಗೆ ಧೈರ್ಯ ತೋರಿಸುತ್ತಾರೆ ? ಎಂಬ ಪ್ರಶ್ನೆಯು ಮನಸ್ಸಿನಲ್ಲಿ ನಿರ್ಮಾಣವಾಗುತ್ತದೆ ! -ಸಂಪಾದಕರು 

* ಇಂತಹ ಕ್ರೈಸ್ತ ಶಾಲೆಗಳ ಮೇಲೆ ಸರಕಾರವು ಕಠೋರ ಕಾರ್ಯಾಚರಣೆಯನ್ನು ಮಾಡುವುದು ಆವಶ್ಯಕವಾಗಿದೆ, ಆಗಲೇ ಅವರು ಸರಿಯಾದ ಪಾಠ ಕಲಿಯುವರು ! -ಸಂಪಾದಕರು 

ವಾಪಿ (ಗುಜರಾತ) – ಇಲ್ಲಿನ ಸೆಂಟ್‌ ಮೇರಿ ಎಂಬ ಕ್ರೈಸ್ತ ಮಿಶನರಿಗಳ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ‘ಜಯ ಶ್ರೀರಾಮ’ ಎಂಬ ಘೋಷಣೆಯನ್ನು ನೀಡಿದ್ದರಿಂದ ಶಾಲೆಯ ಆಡಳಿತ ಮಂಡಳಿಯು ಅವರನ್ನು ಶಾಲೆಯಿಂದ ತೆಗೆದುಹಾಕುವುದಾಗಿ ಬೆದರಿಸಿತ್ತು. ಇದರಿಂದ ಸಿಟ್ಟುಗೊಂಡ ಮಕ್ಕಳ ಪಾಲಕರು ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಶಾಲೆಗೆ ಹೋಗಿ ವಿರೋಧಿಸಿದರು. ಆಗ ಅವರೂ ‘ಜಯ ಶ್ರೀರಾಮ’ ಎಂದು ಘೋಷಣೆ ನೀಡಿದರು. ಅನಂತರ ಶಾಲೆಯ ಆಡಳಿತ ಮಂಡಳಿಯು ಪಾಲಕರು ಮತ್ತು ಹಿಂದೂ ಕಾಯರ್ಕರ್ತರಲ್ಲಿ ಕ್ಷಮಾಯಾಚನೆ ಮಾಡಿತು.

೧. ೯ನೇ ತರಗತಿಯಲ್ಲಿ ಓದುವ ಇಬ್ಬರು ಮಕ್ಕಳು ಪರಸ್ಪರ ಅಭಿನಂದನೆಯನ್ನು ಸಲ್ಲಿಸಲು ‘ಜಯ ಶ್ರೀರಾಮ’ ಎಂದು ಘೋಷಣೆ ನೀಡಿದರು. ಇದಕ್ಕೆ ಶಾಲೆಯ ಆಡಳಿತ ಮಂಡಳಿಯು ನಿಯಮಗಳ ಉಲ್ಲಂಘನೆ ಮಾಡಿರುವುದಾಗಿ ಹೇಳಿ ಈ ಇಬ್ಬರನ್ನು ಮೊಣಕಾಲಿನ ಮೇಲೆ ಕೂರಿಸಿ ಕ್ಷಮೆ ಕೇಳುವಂತೆ ಮಾಡಿತು, ಹಾಗೆಯೇ ಅವರಿಂದ ಲಿಖಿತ ಸ್ವರೂಪದಲ್ಲಿ ಕ್ಷಮಾಯಾಚನೆಯನ್ನು ಪಡೆಯಿತು.

೨. ಈ ಘಟನೆಯ ಬಗ್ಗೆ ಇಲ್ಲಿನ ಹಿಂದುತ್ವನಿಷ್ಠರಾದ ಸುಶೀಲ ಯಾದವರವರು ‘ಇಂತಹ ಘಟನೆಗಳು ಈ ಹಿಂದೆಯೂ ನಡೆದಿವೆ. ಶ್ರಾವಣ ಮಾಸದಲ್ಲಿ ಹಿಂದೂ ವಿದ್ಯಾರ್ಥಿಗಳು ಮಣಿಕಟ್ಟಿಗೆ ಕೆಂಪು ದಾರವನ್ನು ಕಟ್ಟಿ ಶಾಲೆಗೆ ಬಂದರೆ ಅವರ ಮೇಲೆ ಕಾರ್ಯಾಚರಣೆಯನ್ನು ಮಾಡಲಾಗುತ್ತದೆ’ ಎಂದು ಹೇಳಿದರು.