ಗಾಂಧಿ ಪರಿವಾರವು ಕಾಂಗ್ರೆಸ್‌ನ ನೇತೃತ್ವವನ್ನು ಬಿಡಲಿ ! – ಕಾಂಗ್ರೆಸ ಮುಖಂಡ ಕಪಿಲ ಸಿಬ್ಬಲ

ಕಾಂಗ್ರೆಸ್ಸಿನ ಮುಖಂಡದವರು ಹೇಳಿದರು ಎಂದು ಗಾಂಧಿ ಪರಿವಾರವು ಕೇಳಿದರು, ಹೀಗೆ ಎಂದಾದರೂ ಆಗುವುದೇ ? ಕಾಂಗ್ರೆಸ್‌ನಲ್ಲಿ ಕಳೆದ ೭೫ ವರ್ಷಗಳಿಂದ ವಂಶಪರಂಪರೆಯು ಬೇರೂರಿದೆ, ಅದು ಸಹಜವಾಗಿ ಹೇಗೆ ಮುಗಿಯಲು ಸಾಧ್ಯ ? ಅದು ಕಾಂಗ್ರೆಸನ ಸಮೇತ ಮುಗಿಯುವುದು ಹಾಗೂ ಅದನ್ನು ಜನರು ಶೀಘ್ರದಲ್ಲಿಯೇ ಮುಗಿಸುವುದು, ಎಂಬುದು ಮಾತ್ರ ನಿಶ್ಚಿತ !

ನವ ದೆಹಲಿ – ಗಾಂಧಿ ಕುಟುಂಬವು ಕಾಂಗ್ರೆಸ್‌ನ ನೇತೃತ್ವವನ್ನು ಬಿಡಲಿ ಹಾಗೂ ಬೇರೆಯಾರಿಗಾದರೂ ಅವಕಾಶ ನೀಡಲಿ, ಎಂದು ಕಾಂಗ್ರೆಸ್‌ನ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಕಪಿಲ ಸಿಬ್ಬಲರವರು ತೀಕ್ಷ್ನವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು. ‘ಗಾಂಧಿಯವರು ತಾವಾಗಿಯೇ ಬದಿಗೆ ಸರಿಯಲಿ; ಏಕೆಂದರೆ ಅವರು ಆರಿಸಿದ ಮಂಡಳಿಯ ಜನರು ಎಂದಿಗೂ ಅವರಿಗೆ ‘ನೀವು ನಿಮ್ಮ ನೇತೃತ್ವವನ್ನು ಬಿಡಿ’, ಎಂದು ಹೇಳುವುದಿಲ್ಲ’ ಎಂದು ಕೂಡ ಸಿಬ್ಬಲರವರು ಹೇಳಿದರು. ೫ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಾದ ಹೀನಾಯ ಸೋಲಿನ ಹಿನ್ನಲೆಯಲ್ಲಿ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಯ ಆತ್ಮಾವಲೋಕನ ಸಭೆಯು ಮಾರ್ಚ ೧೩ರಂದು ನಡೆಯಿತು. ಈ ಸಭೆಯ ಬಳಿಕ ಸಿಬ್ಬಲರವರು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.

ಕಪಿಲ ಸಿಬ್ಬಲರವರು ತಮ್ಮ ಮಾತನ್ನು ಮುಂದುವರೆಸುತ್ತಾ,

೧. ಕಾಂಗ್ರೆಸ್ ಪಕ್ಷದ ನಾಯಕತ್ವವು ಅತ್ಯಂತ ಸಂಕುಚಿತವಾಗಿ ಯೋಚಿಸುತ್ತಿದ್ದು, ಕಳೆದ ೮ ವರ್ಷಗಳಲ್ಲಿ ಪಕ್ಷವು ಕುಸಿಯಲು ಕಾರಣಗಳು ತಿಳಿದಿಲ್ಲ.

೨. ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲನುಭವಿಸಿರುವುದು ನನಗೆ ಆಶ್ಚರ್ಯವಾಗದಿರುವಂತೆ, ಈ ಸೋಲಿನ ನಂತರವೂ ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ ನಾಯಕತ್ವವನ್ನು ಹೊಂದರಬೇಕೆಂದು ನಿರ್ಧರಿಸಿದ್ದರಲ್ಲಿ ನನಗೆ ಆಶ್ಚರ್ಯವಿಲ್ಲ.

೩. ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಯ ಹೊರಗಿನ ಅನೇಕ ನಾಯಕರ ಅಭಿಪ್ರಾಯಗಳು ಕಾರ್ಯಕಾರಿ ಸಮಿತಿಯ ಅಭಿಪ್ರಾಯಗಳಿಗಿಂತ ಭಿನ್ನವಾಗಿವೆ. ಕಾಂಗ್ರೆಸ್ ಪಕ್ಷ ಕಾರ್ಯಕಾರಿ ಸಮಿತಿಯ ಹೊರಗಿದೆ. ಅವರ ಅಭಿಪ್ರಾಯಗಳನ್ನೂ ಕೇಳಬೇಕು. ಕಾರ್ಯಕಾರಿ ಸಮಿತಿಯಲ್ಲಿ ಇಲ್ಲದ ನಮ್ಮಂತಹ ಅನೇಕ ನಾಯಕರು ಇದ್ದಾರೆ; ಆದರೆ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದು ಅವರ ಅಭಿಪ್ರಾಯವೇ ಬೇರೆಯಾಗಿದೆ. ‘ಕಾರ್ಯಕಾರಿ ಸಮಿತಿಯು ಭಾರತದಾದ್ಯಂತ ಕಾಂಗ್ರೆಸ್ ಅನ್ನು ಪ್ರತಿನಿಧಿಸುತ್ತದೆ’, ಎಂದು ಅವರಿಗೆ ಅನಿಸುತ್ತದೆ. ಇದು ಅನುಚಿತವಾಗಿದೆ.

೪. ನಾನು ಎಲ್ಲರ ಪರವಾಗಿ ಮಾತನಾಡಲಾರೆ; ಆದರೆ ನಾನು ನನ್ನ ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸಲು ಬಯಸಿದರೆ, ಕನಿಷ್ಠ ನನಗೆ ‘ಸಬ್ ಕಿ ಕಾಂಗ್ರೆಸ್’ ನಂತಹ ಪಕ್ಷ ಬೇಕು, ಆದರೆ ಕೆಲವರಿಗೆ ’ಘರ್ ಕಿ ಕಾಂಗ್ರೆಸ್’ ಬೇಕಾಗಿದೆ. ನನ್ನ ಕೊನೆಯ ಉಸಿರು ಇರುವವರೆಗೂ ‘ಸಬ್ ಕಿ ಕಾಂಗ್ರೆಸ್’ ಪರ ಹೋರಾಡುತ್ತೇನೆ. ಈ ’ಸಬ್ ಕಿ ಕಾಂಗ್ರೆಸ್’ ಎಂದರೆ ಒಗ್ಗೂಡುವುದು ಮಾತ್ರವಲ್ಲ, ದೇಶದಲ್ಲಿ ಬಿಜೆಪಿ ಬೇಡದವರಿಗೆ ಒಗ್ಗೂಡಿಸುವುದು ಕೂಡುವುದು.

ರಾಹುಲ್ ಗಾಂಧಿ ಅಧ್ಯಕ್ಷರಲ್ಲದಿದ್ದರೂ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುತ್ತಾರೆ ?

ರಾಹುಲ್ ಗಾಂಧಿಗೆ ಬಗ್ಗೆ ಮಾತನಾಡಿದ ಸಿಬ್ಬಲ್ ಅವರು, ಈಗ ರಾಹು ಗಾಂಧಿ ಕಾಂಗ್ರೆಸ್ ಅಧ್ಯಕ್ಷರಲ್ಲ. ಆ ಸ್ಥಾನದಲ್ಲಿ ಸೋನಿಯಾ ಗಾಂಧಿ ಇದ್ದಾರೆ. ಚುನಾವಣೆಗೂ ಮುನ್ನ ರಾಹುಲ್ ಗಾಂಧಿ ಪಂಜಾಬ್‌ಗೆ ಭೇಟಿ ನೀಡಿ ‘ಚನ್ನಿ ಮುಖ್ಯಮಂತ್ರಿಯಾಗುತ್ತಾರೆ’ ಎಂದು ಘೋಷಿಸಿದ್ದರು; ಆದರೆ ಯಾವ ಅಧಿಕಾರದಿಂದ ಅವರು ಈ ನಿರ್ಧಾರವನ್ನು ತೆಗೆದುಕೊಂಡರು ? ಅವರು ಪಕ್ಷದ ಅಧ್ಯಕ್ಷರಲ್ಲದಿದ್ದರೂ, ಅವರು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರು ಈಗಾಗಲೇ ವಿಫಲ ಅಧ್ಯಕ್ಷರಾಗಿದ್ದಾರೆ. ಹೀಗಿರುವಾಗ ಕಾಂಗ್ರೆಸ್‌ನಲ್ಲಿರುವ ಜನರು ಮತ್ತೆ ರಾಹುಲ್‌ನನ್ನೇ ಮುಂದಾಳತ್ವವಹಿಸುವಂತೆ ಏಕೆ ಹೇಳುತ್ತಿದ್ದಾರೆ ?