ಖಲಿಸ್ತಾನಿಗಾಗಿ ಜನಭಿಪ್ರಾಯ ಸಂಗ್ರಹದ ಪ್ರಸ್ತಾವನೆಗೆ ಅನುಮೋದನೆ ನೀಡಲಾಗುವುದೆಂದು ಆಪನಿಂದ ಆಮಿಷ !

`ಸಿಕ್ ಫಾರ್ ಜಸ್ಟಿಸ್’ ಈ ನಿಷೇಧಿಸಿರುವ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಹೇಳಿಕೆ

ಚುನಾವಣೆಯಲ್ಲಿ ಬೆಂಬಲ ನೀಡುವುದಕ್ಕಾಗಿ ಹಣದ ಆಮಿಷ ನೀಡಿರುವ ಮಾಹಿತಿ

ಕೇಂದ್ರ ಸರಕಾರ ಈ ಹೇಳಿಕೆಯ ವಿಚಾರಣೆ ನಡೆಸಿ ಸತ್ಯ ಜನರಿಗೆ ತಿಳಿಸಬೇಕು ! -ಸಂಪಾದಕರು 

(ಸೌಜನ್ಯ: OpIndia)

ನವ ದೆಹಲಿ – ಆಮ್ ಆದ್ಮಿ ಪಕ್ಷವು ಫೆಬ್ರವರಿ 17, 2022 ರಂದು ನಮ್ಮ ಸಂಘಟನೆಯ ಹೆಸರಿನ ಒಂದು ಸುಳ್ಳ ಪತ್ರ ಪ್ರಸಾರ ಮಾಡಿ ಅದರಲ್ಲಿ ನಮ್ಮ ಸಂಘಟನೆಯು `ಆಪ’ಗೆ ಬೆಂಬಲಿಸುತ್ತಿದೆ ಇರುವುದು ಹೇಳಲಾಗಿತ್ತು, ಎಂಬ ನಿಷೇಧಿತ ಖಲಿಸ್ತಾನಿ ಉಗ್ರರ ಸಂಘಟನೆ `ಸಿಖ ಫಾರ್ ಜಸ್ಟಿಸ್’ ಹೇಳಿಕೆ ನೀಡಿದೆ. ಈ ಸಂಘಟನೆಯು ಬರೆದ ಪತ್ರದಲ್ಲಿ, `ಆಪ’ನ ವಕ್ತಾರರು ರಾಘವ ಚಡ್ಡಾ ಇವರು ನಮಗೆ ದೂರವಾಣಿ ಕರೆ ಮಾಡಿ ಫೆಬ್ರವರಿ 17 ರಂದು ಪತ್ರದ ಹೊಣೆಯನ್ನು ತೆಗೆದುಕೊಳ್ಳಲು ಹೇಳಿದ್ದರು. ಇಷ್ಟೇ ಅಲ್ಲದೆ, ಇದಕ್ಕಾಗಿ ನಮಗೆ ಹಣ ನೀಡುವುದರೊಂದಿಗೆ ಆಪ ಪಂಜಾಬದಲ್ಲಿ ಅಧಿಕಾರಕ್ಕೆ ಬಂದರೆ, ವಿಧಾನಸಭೆಯಲ್ಲಿ ಖಲಿಸ್ತಾನಿಗಾಗಿ ಜನಾಭಿಪ್ರಾಯ ಸಂಗ್ರಹದ ಪ್ರಸ್ತಾವವನ್ನು ಅನುಮೋದಿಸಲಾಗುವುದು’, ಎಂದು ಹೇಳಿದೆ, ಎಂದು ಈ ಸಂಘಟನೆಯ ಹೇಳಿಕೆ ನೀಡಿದೆ. `ಆಫ್ ಇಂಡಿಯಾ’ ಈ ವಾರ್ತಾಜಾಲತಾಣದಲ್ಲಿ ಈ ವಿಷಯದ ಕುರಿತು ವಾರ್ತೆ ಪ್ರಸಾರವಾಗಿದೆ.

ಪಂಜಾಬ್‍ನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಗೆಲವು ಸಿಕ್ಕ ನಂತರ ಕೆಲವೇ ಗಂಟೆಯಲ್ಲೇ ನಿಷೇಧಿತ ಖಲಿಸ್ತಾನಿ ಉಗ್ರರ ಸಂಘಟನೆ `ಸಿಖ ಫಾರ್ ಜಸ್ಟೀಸ್’ ನಿಂದ ಆಪ’ನ ನಾಯಕ ರಾಘವ ಚಡ್ಡಾ ಇವರ ಹೆಸರಲ್ಲಿ ಪತ್ರ ಕಳುಹಿಸಿದೆ. ಇದರಲ್ಲಿ ಅವರು ಆಮ್ ಆದ್ಮಿ ಪಕ್ಷಕ್ಕೆ ಈ ಚುನಾವಣೆಯಲ್ಲಿ ಗೆಲ್ಲಲು ಖಲಿಸ್ತಾನಿ ಬೆಂಬಲಿಗರಿಂದ ಆರ್ಥಿಕ ಬೆಂಬಲ ದೊರೆತಿರುವುದು ಮತ್ತು ಮತದಾನ ನಡೆದಿರುವುದು ಹೇಳಲಾಗಿದೆ. ಈ ಆರ್ಥಿಕ ಬೆಂಬಲದಲ್ಲಿ ವಿದೇಶಿ ಜನರ ಸಮಾವೇಶ ಇರುವುದೆಂದು ಹೇಳಲಾಗಿದೆ.