ಶುಕ್ರವಾರದಂದು ಮುಸಲ್ಮಾನ ಶಾಸಕರನ್ನು ನಮಾಜಗಾಗಿ ವಿಧಾನಸಭೆಯ ಕಾರ್ಯಕಲಾಪವನ್ನು ನಿಲ್ಲಿಸಲು ನೀಡಿದ ಬೇಡಿಕೆಯನ್ನು ನಿರಕಾರಿಸಿದ ವಿಧಾನಸಭೆಯ ಅಧ್ಯಕ್ಷರು !

ನಮಾಜ ಬೇಡಿಕೆಗಾಗಿ ಕಾಂಗ್ರೆಸ ಹಾಗೂ ರಾಷ್ಟ್ರೀಯ ಜನತಾ ದಳದ ಬೆಂಬಲ

ವಿರೋಧಿ ಪಕ್ಷದ ಗೊಂದಲದಿಂದ ಮಾರ್ಚ ೧೪ರವರೆಗೂ ವಿಧಾನ ಸಭೆಯ ಕಾರ್ಯಕಲಾಪ ಸ್ಥಗಿತ

ವಿಧಾನಸಭೆಯು ಜನರ ಕೆಲಸಕ್ಕಾಗಿ ಇರುತ್ತದೆ. ಈ ರೀತಿಯ ಬೇಡಿಕೆಗಾಗಿ ಗೊಂದಲ ಮಾಡಿ ಸಭೆಯ ಸಮಯವನ್ನು ವ್ಯರ್ಥ ಮಾಡುವವರಿಂದ ಸರಕಾರವು ಖರ್ಚು ವಸೂಲಿ ಮಾಡಬೇಕು !

ಈ ರೀತಿಯ ಘಟನೆಗಳು ಶಾಶ್ವತವಾಗಿ ನಿಲ್ಲಿಸಲು ದೇಶದಲ್ಲಿ ಸಮಾನ ನಾಗರಿಕ ಕಾಯಿದೆಯನ್ನು ತಕ್ಷಣ ಜಾರಿಗೊಳಿಸುವುದು ಅಗತ್ಯ !

ಪಾಟಲೀಪುತ್ರ (ಬಿಹಾರ) – ಬಿಹಾರ ವಿಧಾನಸಭೆಯಲ್ಲಿ ಶುಕ್ರವಾರ, ಮಾರ್ಚ ೧೧ರಂದು ಎಮ್.ಐ.ಎಮ್.ನ ಶಾಸಕ ಅಖ್ತರುಲ ಇಮಾನ ಹಾಗೂ ಮಾರ್ಕ್ಸವಾದಿ ಕಮ್ಯುನಿಸ್ಟ ಪಕ್ಷದ ಶಾಸಕ ಮಹಬೂಬ ಆಲಮರವರು ನಮಾಜ ಮಾಡಬೇಕಾಗಿರುವುದರಿಂದ ಸಭಾಗೃಹದ ಕಾರ್ಯಕಲಾಪವನ್ನು ಮಧ್ಯಾಹ್ನ ಹನ್ನೆರಡು ಮೂವತ್ತರವರೆಗೂ ಮಾತ್ರ ನಡೆಸಲು ಬೇಡಿಕೆ ಮಾಡಿದರು. ಆ ಬೇಡಿಕೆಗೆ ಕಾಂಗ್ರೆಸ ಹಾಗೂ ರಾಷ್ಟ್ರೀಯ ಜನತಾ ದಳದ ಶಾಸಕರು ಕೂಡ ಬೆಂಬಲ ನೀಡಿದರು. ಆ ಸಮಯದಲ್ಲಿ ವಿಧಾನಸಭೆಯ ಅಧ್ಯಕ್ಷರು ನಮಾಜಗಾಗಿ ಸಭಾಗೃಹದ ಕಾರ್ಯಕಲಾಪವನ್ನು ಮುಂದುವರಿಸಲು ದೃಢವಾಗಿದ್ದದ್ದರಿಂದ ವಿರೋಧಿ ಪಕ್ಷದವರು ಗಲಾಟೆ ಮಾಡಿದರು. ಆದ್ದರಿಂದ ಸಭಾಗೃಹದ ಕಾರ್ಯಕಲಾಪವನ್ನು ಮಾರ್ಚ ೧೪ರವರೆಗೂ ಸ್ಥಗಿತಗೊಳಿಸಲಾಯಿತು.

೧. ವಿಧಾನಸಭೆಯ ಅಧ್ಯಕ್ಷ ವಿಜಯ ಕುಮಾರ ಸಿನ್ಹಾರವರು ‘ಶುಕ್ರವಾರದಂದು ನಮಾಜಗಾಗಿ ಕಾರ್ಯಕಲಾಪ ನಿಲ್ಲಿಸಲು ಸಾಧ್ಯವಿಲ್ಲ. ಯಾರಿಗೆ ನಮಾಜಪಠಿಸಬೇಕಾಗಿದೆಯೋ, ಅವರು ಸಭಾಗೃಹದ ಹೊರಗೆ ಹೋಗಿ ಮಾಡಬಹುದು’, ಎಂದು ಹೇಳಿದರು. ಅದಕ್ಕೆ ಶಾಸಕರಾದ ಆಲಮ ಹಾಗೂ ಇಮ್ರಾನರವರು ವಿರೋಧಿಸಿದರು ಹಾಗೂ ‘ಇದು ಸಭಾಗೃಹದ ಹಳೆಯ ಪರಂಪರೆಯಾಗಿದೆ’, ಎಂದು ಹೇಳಿದರು.

೨. ಅದಕ್ಕೆ ವಿಧಾನಸಭೆಯ ಅಧ್ಯಕ್ಷರಾದ ಸಿನ್ಹಾರವರು, ಪರಂಪರೆ ಹಾಗೂ ನಿಯಮಗಳು ಕಾಲಾನುಸಾರ ಬದಲಾಗಬಹುದು. ಯಾರಿಗೆ ನಮಾಜಪಠಿಸಬೇಕಾಗಿದೆಯೋ ಅವರಿಗೆ ಈ ಮೊದಲೇ ಸಭಾಗೃಹದಲ್ಲಿ ಮಾತನಾಡಲು ಸಮಯ ನೀಡಲಾಗಿತ್ತು.’ ಎಂದು ಹೇಳಿದರು. ಅನಂತರ ವಿರೋಧಿ ಪಕ್ಷದವರು ಗಲಾಟೆ ಮಾಡಿದ್ದರಿಂದ ಕಾರ್ಯಕಲಾಪವನ್ನು ಸ್ಥಗಿತಗೊಳಿಸಲಾಯಿತು.