ಉತ್ತರಾಖಂಡದಲ್ಲಿ ಭಾಜಪ ಸರಕಾರ ಸ್ಥಾಪನೆ ಆದನಂತರ ಸಮಾನ ನಾಗರಿಕ ಕಾಯಿದೆಗಾಗಿ ಸಮಿತಿ ಸ್ಥಾಪನೆ ಮಾಡುವೆವು ! – ಅಸ್ತಂಗತ ಮುಖ್ಯಮಂತ್ರಿ ಪುಷ್ಕರಸಿಂಹ ಧಾಮಿ

ಮುಖ್ಯಮಂತ್ರಿ ಪುಷ್ಕರಸಿಂಹ ಧಾಮಿ

ಡೆಹರಾಡೂನ (ಉತ್ತರಾಖಂಡ) – ಉತ್ತರಾಖಂಡದಲ್ಲಿ ಭಾಜಪದ ನೂತನ ಸರಕಾರ ಸ್ಥಾಪನೆಯಾದ ನಂತರ ಸಮಾನ ನಾಗರಿಕ ಕಾಯಿದೆಗೆ ನಾವು ಒಂದು ಉನ್ನತ ಮಟ್ಟದ ಸಮಿತಿ ಸ್ಥಾಪನೆ ಮಾಡುವೆವು. ಈ ಸಮಿತಿ ನಮಗೆ ಕಾನೂನಿನ ಸಂಹಿತೆ ತಯಾರಿಸಿ ಕೊಡುವುದು ಮತ್ತು ನಂತರ ಈ ಕಾಯಿದೆ ರಾಜ್ಯದಲ್ಲಿ ಜಾರಿ ಗೊಳಿಸಲಾಗುವುದು, ಎಂದು ಉತ್ತರಾಖಂಡದಲ್ಲಿನ ಭಾಜಪದ ಅಸ್ತಂಗತ ಮುಖ್ಯಮಂತ್ರಿ ಪುಷ್ಕರ ಸಿಂಹ ಧಾಮಿ ಇವರು ಪ್ರತಿಪಾಧಿಸಿದರು. ಭಾಜಪ ರಾಜ್ಯದಲ್ಲಿ ಸಮಾನ ನಾಗರಿಕ ಕಾಯಿದೆ ನಿರ್ಮಿಸುವ ಆಶ್ವಾಸನೆಯನ್ನು ಚುನಾವಣೆಯಲ್ಲಿ ನೀಡಿತ್ತು. ಈ ಚುನಾವಣೆಯಲ್ಲಿ ಧಾಮಿ ಸೋತ್ತಿದ್ದರೆ.

ಮುಖ್ಯಮಂತ್ರಿ ಧಾಮಿ ತಮ್ಮ ಮಾತನ್ನು ಮುಂದುವರೆಸುತ್ತಾ, ಉನ್ನತ ಮಟ್ಟದ ಸಮಿತಿಯಲ್ಲಿ ಕಾನೂನು ತಜ್ಞರು, ನಿವೃತ್ತ ಅಧಿಕಾರಿಗಳು ಮತ್ತು ವಿಚಾರವಂತರ ಸಮಾವೇಶ ಇರುವುದು. ಸಮಾನ ನಾಗರಿಕ ಕಾನೂನು ಬಂದ ನಂತರ ಯಾರ ಮೇಲೆಯೂ ಅನ್ಯಾಯವಾಗುವುದಿಲ್ಲ. ಎಲ್ಲರಿಗೂ ಸಮಾನತೆಯ ಅಧಿಕಾರ ಸಿಗುವುದು ಎಂದು ಹೇಳಿದರು.