ಜನರ ತಿರ್ಮಾನವನ್ನು ನಮ್ರತೆಯಿಂದ ಸ್ವೀಕರಿಸಿ! – ರಾಹುಲ ಗಾಂಧಿ

ನವ ದೆಹಲಿ – ೫ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಅನುಭವಿಸಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕಾರ್ಯಕರ್ತರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ. ಅವರು ‘ಜನತೆಯ ನಿರ್ಣಯವನ್ನು ನಮ್ರತೆಯಿಂದ ಸ್ವೀಕರಿಸಿ, ಜನಮತವನ್ನು ಗಳಿಸಿದವರಿಗೆ ಹಾರ್ದಿಕ ಶುಭಾಶಯಗಳು. ಕಾಂಗ್ರೆಸ್ಸಿನ ಎಲ್ಲಾ ಕಾರ್ಯಕರ್ತರ ಮತ್ತು ಸ್ವಯಂಸೇವಕರ ಕಠೋರ ಪರಿಶ್ರಮ ಮತ್ತು ಸಮರ್ಪಣೆಗಾಗಿ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾವು ಇದರಿಂದ ಪಾಠ ಕಲಿತು ಭಾರತದ ಜನರ ಹಿತಕ್ಕಾಗಿ ಕೆಲಸ ಮಾಡುತ್ತಲಿರೋಣ’ ಎಂದು ಹೇಳಿದರು.