ಗೋವಾದಲ್ಲಿ ಅಧಿಕಾರವನ್ನು ಸ್ಥಾಪಿಸಲು ಮಗೋಪ ಮತ್ತು ಪಕ್ಷೇತರರೊಂದಿಗೆ ಮೈತ್ರಿ ಮಾಡಲಿದ್ದೇವೆ ! – ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ

ಗೋವಾದ ಮುಖ್ಯಮಂತ್ರಿಗಳಾದ ಡಾ. ಪ್ರಮೋದ ಸಾವಂತ

ಪಣಜಿ – ಭಾಜಪದ ವಿಜಯದ ನಂತರ ಗೋವಾದ ಮುಖ್ಯಮಂತ್ರಿಗಳಾದ ಡಾ. ಪ್ರಮೋದ ಸಾವಂತರವರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತ, ನನ್ನ ಮತಕ್ಷೇತ್ರದಲ್ಲಿ ನಾನು ಇಲ್ಲದಿರುವಾಗಲೂ ಕೆಲಸಗಳು ನಡೆದಿವೆ. ಸ್ವಲ್ಪವೇ ಮತಗಳಿಂದ ಗೆದ್ದಿದ್ದರೂ ನನ್ನ ಗೆಲುವಿನ ಸಂಪೂರ್ಣ ಶ್ರೇಯಸ್ಸು ನನ್ನ ಕಾರ್ಯಕರ್ತರಿಗೆ, ಹಾಗೆಯೇ ನನ್ನ ಪಕ್ಷಕ್ಕೆ ಹೋಗುತ್ತದೆ. ‘ಡಬಲ ಎಂಜಿನ’ನ ಸರಕಾರ (ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಭಾಜಪದ ಸರಕಾರವಿರುವುದು) ಪುನಃ ಬರಲಿದೆ. ನಾವು ಅಧಿಕಾರವನ್ನು ಸ್ಥಾಪಿಸಲು ಮಗೋಪ ಮತ್ತು ವಿಜಯಗಳಿಸಿರುವ ಪಕ್ಷೇತರ ಅಭ್ಯರ್ಥಿಗಳೊಂದಿಗೆ ಮೈತ್ರಿ ಮಾಡಲಿದ್ದೇವೆ’ ಎಂದು ಹೇಳಿದರು.

ಉತ್ಪಲ ಪರ್ರಿ‍ಕರರವರ ಸೋಲು

ಗೋವಾದ ರಾಜಧಾನಿಯಾದ ಪಣಜಿಯಲ್ಲಿ ಎಲ್ಲರಿಗಿಂತ ಗಮನ ಸೆಳೆಯುವಂತೆ ಹೋರಾಡುವುದಾಗಿ ಎಲ್ಲರ ಗಮನ ಸೆಳೆದ ಪಣಜಿ ಮತಕ್ಷೇತ್ರದಲ್ಲಿ ರಾಜ್ಯದ ದಿವಂಗತ ಮಾಜಿ ಮುಖ್ಯಮಂತ್ರಿ ಮನೋಹರ ಪರ್‍ರಿಕರರವರ ಮಗ ಉತ್ಪಲ ಪರ‍್ರಿಕರರವರು ೮೦೦ ಮತಗಳಿಂದ ಸೋತರು. ಇಲ್ಲಿ ಭಾಜಪದ ಅಭ್ಯರ್ಥಿ ಹಾಗೂ ರಾಜ್ಯದ ಮಂತ್ರಿಯಾಗಿರುವ ಬಾಬುಶರವರು ಮೊನ್ಸೇರಾತರವರು ವಿಜಯಿಯಾದರು. ಉತ್ಪಲ ಪರ‍್ರಿಕರರವರಿಗೆ ಭಾಜಪವು ಪಣಜಿಯಲ್ಲಿ ಟಿಕೇಟು ನೀಡದಿರುವುದರಿಂದ ಅವರು ಪಕ್ಷಕ್ಕೆ ಸೋಡಾಚಿಟಿ/ತೀಲಾಂಜಲಿ ನೀಡುತ್ತ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಕಣಕ್ಕಿಳಿದಿದ್ದರು.