ಮಣಿಪುರದ ವಿಧಾನಸಭೆ ಚುನಾವಣೆಯಲ್ಲಿ ನಡೆದ ಹಿಂಸಾಚಾರದಲ್ಲಿ ಇಬ್ಬರ ಸಾವು

ಇಂಫಾಲ (ಮಣಿಪುರ) – ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ನಡೆದ ಹಿಂಸಾಚಾರದಲ್ಲಿ ಇವರಿಗೆ ಇಬ್ಬರು ಸಾವನ್ನಪ್ಪಿದ್ದಾರೆ. ಹಿಂಸಾಚಾರದ ಮೊದಲ ಘಟನೆ ಥೌಬಲ ಜಿಲ್ಲೆಯಲ್ಲಿ ಹಾಗೂ ಎರಡನೆಯ ಘಟನೆ ಸೇನಾಪತಿ ಜಿಲ್ಲೆಯಲ್ಲಿ ನಡೆದಿದೆ. ಸೇನಾಪತಿಯಲ್ಲಿ ಮತದಾರರಿಗೆ ಮತದಾನ ಕೇಂದ್ರದಲ್ಲಿ ಕರೆದುಕೊಂಡು ಹೋಗುವ ಒಂದು ಬಸ್ಸಿನ ಮೇಲೆ ಕೆಲವರು ದಾಳಿ ನಡೆಸಿದರು. ಇದರಲ್ಲಿ ಒಬ್ಬನು ಮೃತಪಟ್ಟನು.

ಮಣಿಪುರ ಸಹಿತ ಉತ್ತರಾಖಂಡ, ಪಂಜಾಬ ಮತ್ತು ಗೋವಾ ಈ ರಾಜ್ಯಗಳಲ್ಲಿನ ವಿಧಾನಸಭೆ ಚುನಾವಣೆ ನಡೆದಿದ್ದು ಉತ್ತರಪ್ರದೇಶ ರಾಜ್ಯದ ಕೊನೆಯ ಹಂತ ಉಳಿದಿದೆ. ಈ ಐದೂ ರಾಜ್ಯಗಳು ತೀರ್ಪು ಮಾರ್ಚ್ 10 ರಂದು ಘೋಷಿಸಲಾಗುವುದು.