ಅಲೀಗಡ(ಉತ್ತರಪ್ರದೇಶ)ದಲ್ಲಿ ಮತಾಂಧ ಯುವಕನಿಂದ ತಾನು ‘ಹಿಂದೂ’ವಾಗಿರುವುದಾಗಿ ಹೇಳಿ ವಿವಾಹಿತ ಮಹಿಳೆಯ ಲೈಂಗಿಕ ಶೋಷಣೆ !

ಇಸ್ಲಾಮನ್ನು ಸ್ವೀಕರಿಸದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ

* ಉತ್ತರಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಮತಾಂಧರಿಗೆ ಇಂತಹ ಕೃತ್ಯಗಳನ್ನು ಮಾಡುವ ಧೈರ್ಯ ಬರಬಾರದು, ಎಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು 

ಇಂತಹ ವಾಸನಾಂಧರಿಗೆ ಕಠೋರ ಶಿಕ್ಷೆಯಾಗಲು ಸರಕಾರವು ಪ್ರಯತ್ನಿಸಬೇಕು !- ಸಂಪಾದಕರು 

ಪ್ರತಿನಿಧಿಕ ಛಾಯಾಚಿತ್ರ

ಅಲೀಗಡ (ಉತ್ತರಪ್ರದೇಶ) – ಇಲ್ಲಿ ಫೈಜಾನ ಎಂಬ ಹೆಸರಿನ ಮತಾಂಧನು ತಾನು ಹಿಂದೂ ಧರ್ಮದವನಾಗಿದ್ದು ತನ್ನ ಹೆಸರು ಮೋನು ಎಂದು ಹೇಳಿ ಓರ್ವ ವಿವಾಹಿತ ಹಿಂದೂ ಮಹಿಳೆಯನ್ನು ಪ್ರೇಮಜಾಲದಲ್ಲಿ ಸೆಳೆದನು. ೬ ತಿಂಗಳ ವರೆಗೆ ವಿವಾಹದ ಆಮಿಷ ತೋರಿಸಿ ಆಕೆಯ ಮೇಲೆ ಲೈಂಗಿಕ ಶೋಷಣೆ ನಡೆಸಿದನು. ಈ ಸಮಯದಲ್ಲಿ ಆತನು ಮಹಿಳೆಯ ಅಶ್ಲೀಲ ಚಿತ್ರೀಕರಣ ಮಾಡಿ ವಿಡಿಯೋ ತಯಾರಿಸಿದನು. ಮಹಿಳೆಯು ವಿವಾಹವಾಗಲು ಕೇಳಿದಾಗ ಅವನು ಒಪ್ಪಲಿಲ್ಲ. ಹಾಗೆಯೇ ವಿಡಿಯೋ ಪ್ರಸಾರ ಮಾಡುವುದಾಗಿ ಬೆದರಿಸಿ ಮಹಿಳೆಗೆ ಹೊಡೆದಿದ್ದಾನೆ. ಅವನು ಈ ಮಹಿಳೆಯ ಮೇಲೆ ಇಸ್ಲಾಮನ್ನು ಸ್ವೀಕರಿಸುವಂತೆ ಒತ್ತಡ ಹೇರಲು ಆರಂಭಿಸಿದನು. ಅವನು ಹಾಗೂ ಅವನ ಸಹೋದರ ಅಲಿಯು ಮತಾಂತರವಾಗದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರಲ್ಲಿ ದೂರನ್ನು ನೊಂದಾಯಿಸಲಾಗಿದೆ.