ರಾಹುವಿನ ಸಂಕ್ರಮಣದಿಂದ ರಾಜಕಾರಣ, ಆರ್ಥಿಕವ್ಯವಸ್ಥೆ ಹಾಗೂ ಸಾಮಾನ್ಯ ಜೀವನದ ಮೇಲೆ ಪರಿಣಾಮವಾಗಲಿದೆ !

ಮೇಷ ರಾಶಿಯಲ್ಲಿ ರಾಹುವಿನ ಪ್ರವೇಶದಿಂದ ಜಗತ್ತಿನಾದ್ಯಂತ ನಿರ್ಮಾಣವಾಗುವಂತಹ ಪ್ರತಿಕೂಲ ಸ್ಥಿತಿ !

ನವ ದೆಹಲಿ – ರಾಹು ಗ್ರಹವು ಮಾರ್ಚ್ ೧೭, ೨೦೨೨ರಂದು ಮೇಷ ರಾಶಿಯಲ್ಲಿ ಪ್ರವೇಶಿಸಲಿದೆ. ರಾಹು ರಾಶಿಯ ಈ ಬದಲಾವಣೆ ೧೮ ತಿಂಗಳ ಬಳಿಕ ನಡೆಯುತ್ತಿದ್ದು ಇದರಿಂದ ಜಗತ್ತಿನಾದ್ಯಂತ ದೊಡ್ಡ ಬದಲಾವಣೆಗಳು ನಡೆಯಲಿದೆ, ಎಂದು ಭವಿಷ್ಯ ನುಡಿಯುವವರು ತಮ್ಮ ಊಹೆಯನ್ನು ವ್ಯಕ್ತಪಡಿಸಿದ್ದಾರೆ. ಈ ಬದಲಾವಣೆಯ ಪರಿಣಾಮವು ಭಾರತದಲ್ಲಿಯೂ ಕೂಡ ಕಂಡು ಬರಲಿದೆ. ಮಾರ್ಚ ೨೦೨೨ರಲ್ಲಾಗುವ ಈ ರಾಹು ಸಂಕ್ರಮಣದಿಂದ ದೇಶದ ರಾಜಕಾರಣ, ಆರ್ಥವ್ಯವಸ್ಥೆ ಹಾಗೂ ಸಾಮಾನ್ಯ ಜೀವನದ ಮೇಲೆ ಪರಿಣಾಮವಾಗಲಿದೆ.

೧. ಜ್ಯೋತಿಷ್ಯಶಾಸ್ತ್ರದ ಅನುಸಾರವಾಗಿ ರಾಹು ಹಾಗೂ ಕೇತು ಇವೆರಡೂ ಗ್ರಹಗಳು ಯಾವಾಗಲೂ ವಿರುದ್ಧ ದಿಕ್ಕಿನಲ್ಲಿ ತಿರುಗುತ್ತದೆ. ಅದು ೧೮ ತಿಂಗಳಿಗೊಮ್ಮೆ ರಾಶಿಯನ್ನು ಬದಲಾಯಿಸುತ್ತದೆ. ಮಾರ್ಚ ೧೭ರಂದು ರಾಹು ವೃಷಭ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸುವುದು. ಈ ರಾಶಿಯಲ್ಲಿ ಅದು ಮುಂದೆ ಒಂದುವರೆ ವರ್ಷ ಇರಲಿದೆ. ರಾಹುವು ಮೇಷ ರಾಶಿಗೆ ಪ್ರವೇಶಿಸುವ ಸಮಯದಲ್ಲಿ ಜಾತಕದ ವಿಶ್ಲೇಷಣೆ ಮಾಡಿದಾಗ, ಶನಿ, ಮಂಗಳ ಹಾಗೂ ಶುಕ್ರ ಈ ೩ ಗ್ರಹಗಳ ಸಂಧಿಯಾಗುತ್ತಿದೆ. ಈ ಗ್ರಹಕೂಟದಿಂದ ಸಂಪೂರ್ಣ ಜಗತ್ತಿನಲ್ಲಿ ದೊಡ್ಡ ಏರುಪೇರು ಆಗುವ ಸಾಧ್ಯತೆ ನಿರ್ಮಣವಾಗಿದೆ. ಇದರ ಪರಿಣಾಮವು ಭಾರತದ ಮೇಲೆ ಕೂಡ ಆಗಲಿದೆ.

೨. ಜ್ಯೋತಿಷ್ಯಶಾಸ್ತ್ರಾನುಸಾರವಾಗಿ ಈ ಗ್ರಹಕೂಟದಿಂದ ತಿನ್ನಲು-ಕುಡಿಯಲು ಸಂಕಟ ನಿರ್ಮಾಣವಾಗುವುದು. ಪೆಟ್ರೋಲ ಹಾಗೂ ಡಿಝೆಲನ ಬೆಲೆಯಲ್ಲಿ ಹೆಚ್ಚಳವಾಗುವುದರಿಂದ ದೈನಂದಿನ ವಸ್ತುಗಳ ಬೆಲೆ ಹೆಚ್ಚಲಿದೆ. ಈ ಪರಿಸ್ಥಿತಿಯಿಂದ ಧಾನ್ಯಗಳ ಬೆಲೆ ಕೂಡ ಹೆಚ್ಚುವುದು.

೩. ಈ ಕಾಲಾವಧಿಯಲ್ಲಿ ಭಾರತದಲ್ಲಿ ಅಕಾಲಿಕ ಮಳೆಯಾಗುವುದು ಹಾಗೂ ಇದರಿಂದ ಹೊಲದಲ್ಲಿ ಬಂದ ಬೆಳೆಗಳಿಗೆ ಸಾಕಷ್ಟು ಹಾನಿಯಾಗಬಹುದು.

೪. ರಾಹುವಿನ ಸಂಕ್ರಮಣದಿಂದ ಭಾರತದ ರಾಜಕಾರಣದಲ್ಲಿ ಗೊಂದಲ ನಿರ್ಮಾಣವಾಗಬಹುದು. ಏಪ್ರಿಲನಿಂದ ಸೆಪ್ಟೆಂಬರ ಸಮಯದಲ್ಲಿ ರಾಜಕೀಯದಲ್ಲಿ ದೊಡ್ಡ ಏರು ಪೇರು ಆಗಬಹುದು. ದೊಡ್ಡ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸಂಬಂಧಪಟ್ಟಂತೆ ಅಪ್ರಿಯ ಘಟನೆಗಳು ನಡೆಯಬಹುದು. ಜೊತೆಗೆ ಪ್ರವಾಹ ಹಾಗೂ ಭೂಕುಸಿತದಂತಹ ನೈಸರ್ಗಿಕ ವಿಪತ್ತುಗಳಾಗುವ ಸಾಧ್ಯತೆಗಳಿವೆ.