ಸಾರ್ವಜನಿಕ ಸ್ಥಳಗಳಲ್ಲಿ ಮಾಂಸ ಮಾರಾಟ ಮಾಡುವುದು ನಿಷೇಧಿಸಿ !

ತ್ರಿಪುರಾ ಉಚ್ಚ ನ್ಯಾಯಾಲಯದಿಂದ ಅಗರತಲಾ ಮಹಾನಗರಪಾಲಿಕೆಗೆ ಆದೇಶ

ತ್ರಿಪುರಾ ಉಚ್ಚ ನ್ಯಾಯಾಲಯ

ಅಗರತಲಾ (ತ್ರಿಪುರಾ) – ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕವಾಗಿ ಮಾಂಸ ಮಾರಾಟ ಮಾಡುವುದರ ಮೇಲೆ ನಿಷೇಧ ಹೇರಬೇಕೆಂಬ ಆದೇಶ ತ್ರಿಪುರ ಉಚ್ಚ ನ್ಯಾಯಾಲಯವು ಅಗರತಲಾ ಮಹಾನಗರಪಾಲಿಕೆಗೆ ನೀಡಿದೆ. ಕಸಾಯಿಖಾನೆಯ ಸಂದರ್ಭದ ಒಂದು ವಿಸ್ತೃತ ಯೋಜನೆಯನ್ನು ರೂಪಿಸುವಂತೆಯೂ ಆದೇಶವನ್ನು ನ್ಯಾಯಾಲಯವು ರಾಜ್ಯ ಸರಕಾರಕ್ಕೆ ನೀಡಿದೆ.

1. ನ್ಯಾಯಾಲಯದ ಆದೇಶದಲ್ಲಿ, ಪರವಾನಗಿ ನೀಡಲಾಗಿರುವ ಮಾಂಸ ಮಾರಾಟ ಸ್ಥಳಗಳಲ್ಲಿ ಸ್ವಚ್ಛತೆಯ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳಲಾಗುವುದಿಲ್ಲ. ಮಾಂಸ ಮಾರಾಟ ಮತ್ತು ಕಸಾಯಿಖಾನೆ ಇದಕ್ಕೆ ಸ್ಥಳ ನಿಶ್ಚಯ ಮಾಡಲಾಗುತ್ತಿಲ್ಲ, ಅಲ್ಲಿಯವರೆಗೆ ಮಹಾನಗರಪಾಲಿಕೆಯಲ್ಲಿ ಅವರಿಗೆ ಸ್ಥಳ ಉಪಲಬ್ಧ ಮಾಡಿಕೊಡಬೇಕು. ಈ ಆದೇಶ ಉಲ್ಲಂಘನೆ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳ ಬೇಕು.

2. ನ್ಯಾಯಾಲಯವು ಸ್ವಚ್ಛತೆಗಾಗಿ ಮಾಲಿನ್ಯ ನಿಯಂತ್ರಣ ಇಲಾಖೆಗೆ ಕೂಡ ಆದೇಶ ನೀಡಿದೆ. ದುಷಿತ ನೀರು ನದಿಗಳಲ್ಲಿ ಹೋಗದಿರುವ ಹಾಗೆ, ಅದಕ್ಕಾಗಿ ನಾಲೆಗಳಲ್ಲಿನ ನೀರನ್ನು ಶುದ್ಧೀಕರಿಸುವ ಪ್ರಕ್ರಿಯೆ ನಡೆಸುವ ಯೋಜನೆ ಶುರುಮಾಡಲು ನ್ಯಾಯಾಲಯ ತಿಳಿಸಿದೆ.

3. ಮಹಾನಗರಪಾಲಿಕೆಯ ಆಯುಕ್ತರು ಡಾ. ಶೈಲೇಂದ್ರ ಕುಮಾರ ಯಾದವ ಇವರು ನ್ಯಾಯಾಲಯಕ್ಕೆ ಹೇಳಿದ್ದಾರೆ ಏನೆಂದರೆ, ಫೆಬ್ರುವರಿ 21 ರಂದು ಕಸಾಯಿಖಾನೆಯ ನಿರ್ಮಿತಿಗಾಗಿ ಟೆಂಡರ್ ಕರೆಯಲಾಗಿದೆ. ಮುಂದಿನ 28 ತಿಂಗಳಿನಲ್ಲಿ ಕಸಾಯಿಖಾನೆ ನಿರ್ಮಿತಿ ಆಗುವುದು. 139 ಜನರಿಗೆ ಮಾಂಸ ಮಾರಾಟಕ್ಕಾಗಿ ಪರವಾನಗಿ ನೀಡಲಾಗಿದೆ.