ಮಹಾವಿದ್ಯಾಲಯಗಳಿಂದ ಹಿಜಾಬನ್ನು ಧರಿಸಿ ಬಂದಂತಹ ವಿದ್ಯಾರ್ಥಿನಿಯರಿಗೆ ಪರೀಕ್ಷೆಗೆ ಕುಳಿತುಕೊಳ್ಳಲು ಅನುಮತಿ ನಿರಾಕರಣೆ !

ಕರ್ನಾಟಕದಲ್ಲಿನ ಹಿಜಾಬ ವಿವಾದ

ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸಲು ಸ್ಪಷ್ಟ ನಕಾರ

(ಹಿಜಾಬ ಅಂದರೆ ಮುಸಲ್ಮಾನ ಮಹಿಳೆಯರು ತಲೆ ಹಾಗೂ ಕುತ್ತಿಗೆಯನ್ನು ಮುಚ್ಚಲು ಬಳಸಿರುವ ಬಟ್ಟೆ)

ಮಹಾವಿದ್ಯಾಲಯಗಳು ನ್ಯಾಯಾಲಯದ ಆದೇಶದ ಪಾಲನೆ ಮಾಡಲು ನಿರಾಕರಿಸುವ ಇಂತಹ ಮತಾಂಧ ವಿದ್ಯಾರ್ಥಿನಿಯರ ವಿಷಯದಲ್ಲಿ ಯೋಗ್ಯ ನಿರ್ಣಯ ತೆಗೆದುಕೊಂಡಿವೆ. ನ್ಯಾಯಾಲಯದ ತೀರ್ಪನ್ನು ಪಾಲಿಸಲು ಒಪ್ಪದಿರುವ ಮತಾಂಧ ವಿದ್ಯಾರ್ಥಿನಿಯರು ಭವಿಷ್ಯದಲ್ಲಿ ಕಾನೂನುಬಾಹಿರ ವರ್ತನೆಯಿಂದ ಸಮಾಜದಲ್ಲಿನ ಶಾಂತಿಯನ್ನು ಕೆಡಿಸಿದರೆ, ಅದರಲ್ಲಿ ಆಶ್ಚರ್ಯವೇನಿದೆ ?

ಬೆಂಗಳೂರು – ಕರ್ನಾಟಕದ ಉಡುಪಿಯಲ್ಲಿನ ಪ್ರೀ ಯುನಿವರ್ಸಿಟಿ ಮಹಾವಿದ್ಯಾಲಯದಲ್ಲಿ ಪ್ರಯೋಗ ಪರೀಕ್ಷೆಯ ಸಮಯದಲ್ಲಿ ೩ ಮತಾಂಧ ವಿದ್ಯಾರ್ಥಿನಿಯರು ಹಿಜಾಬ ಧರಿಸಿ ಬಂದಿದ್ದರು. ಆದುದರಿಂದ ಮಹಾವಿದ್ಯಾಲಯದ ಆಡಳಿತವು ಅವರಿಗೆ ಪರೀಕ್ಷೆಗೆ ಹಾಜರಾಗಲು ಅನುಮತಿಯನ್ನು ನಿರಾಕರಿಸಿತು. ‘ಕೊನೆಯ ಆದೇಶ ಬರುವ ವರೆಗೆ ವಿದ್ಯಾರ್ಥಿನಿಯರು ಕೇವಲ ಸಮವಸ್ತ್ರವನ್ನು ಧರಿಸಿ ಮಹಾವಿದ್ಯಾಲಯಕ್ಕೆ ಬರಬೇಕು’, ಎಂದು ಕರ್ನಾಟಕದ ಉಚ್ಚನ್ಯಾಯಾಲಯವು ಆದೇಶಿಸಿತ್ತು. ಈ ಆದೇಶದ ಪಾಲನೆಗೆ ಈ ೩ ಮತಾಂಧ ವಿದ್ಯಾರ್ಥಿನಿಯರು ನಿರಾಕರಿಸಿದರು. ಆದುದರಿಂದ ಅವರಿಗೆ ಪ್ರಯೋಗ ಪರೀಕ್ಷೆಗೆ ಕುಳಿತುಕೊಳ್ಳುವ ಅನುಮತಿಯನ್ನು ನಿರಾಕರಿಸಲಾಯಿತು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ರುದ್ರ ಗೌಡರವರು ‘ನಾನು ಈ ವಿದ್ಯಾರ್ಥಿನಿಯರಿಗೆ ಉಚ್ಚ ನ್ಯಾಯಾಲಯದ ಆದೇಶವನ್ನು ತಿಳಿಸಿ ಹೇಳಲು ಬಹಳ ಪ್ರಯತ್ನಿಸಿದೆ; ಆದರೆ ಅವರು ಆದೇಶದ ಪಾಲನೆ ಮಾಡಲು ನಿರಾಕರಿಸಿದರು’ ಎಂದು ಹೇಳಿದರು.