ಮುಸಲ್ಮಾನರಿಗೆ ೧೯೪೭ ರಲ್ಲಿಯೇ ಬೇರೆ ಇಸ್ಲಾಮಿ ದೇಶ ನೀಡಿದ್ದರಿಂದ ಅವರು ಅಲ್ಲಿ ಹೋಗಲಿ !

  • ಬಿಹಾರದಲ್ಲಿ ಭಾಜಪದ ಶಾಸಕ ಹರಿ ಭೂಷಣ ಠಾಕೂರ ಅವರ ಹೇಳಿಕೆ

  • ಭಾರತದಲ್ಲಿ ವಾಸಿಸುವ ಮುಸಲ್ಮಾನರಿಂದ ಮತದಾನದ ಹಕ್ಕನ್ನು ರದ್ದು ಪಡಿಸಲು ಒತ್ತಾಯ

  • ಭಾಜಪದಿಂದ ಠಾಕೂರ ಇವರಿಗೆ ‘ಕಾರಣ ನೀಡಿ’ ನೋಟಿಸ್

ಮಧುಬನಿ (ಬಿಹಾರ) – ಮುಸಲ್ಮಾನರು ಒಂದು ಧೋರಣೆಯನುಗುಣವಾಗಿ ಕೆಲಸ ಮಾಡುತ್ತಾರೆ. ಈ ಧೋರಣೆಯನುಗುಣವಾಗಿ ಭಾರತವನ್ನು ‘ಇಸ್ಲಾಮಿ ರಾಷ್ಟ್ರ’ ಮಾಡುವುದು ಅವರ ಯೋಚನೆ ಆಗಿದೆ. ೧೯೪೭ ರಲ್ಲಿ ಭಾರತದ ವಿಭಜನೆಯ ಸಮಯದಲ್ಲಿ ನಾವು ಮುಸಲ್ಮಾನರಿಗೆ ಬೇರೆ ದೇಶ ನೀಡಿದೆವು. ಆದ್ದರಿಂದ ಅವರು ಪಾಕಿಸ್ತಾನಕ್ಕೆ ಹೋಗಬೇಕು. ಅವರಿಗೆ ಭಾರತದಲ್ಲಿ ವಾಸಿಸುವುದಿದ್ದರೆ, ಅವರು ಎರಡನೇ ದರ್ಜೆಯ ನಾಗರಿಕರಂತೆ ಇರಬೇಕು. ಮುಸಲ್ಮಾನರ ಮತದಾನದ ಹಕ್ಕನ್ನು ರದ್ದುಪಡಿಸಬೇಕು. ಎಂದು ನಾವು ಸರಕಾರಕ್ಕೆ ವಿನಂತಿಸುತ್ತಿದ್ದೇವೆ, ಎಂದು ಇಲ್ಲಿಯ ಬಿಸಫಿ ಚುನಾವಣಾ ಕ್ಷೇತ್ರದ ಭಾಜಪದ ಶಾಸಕ ಹರಿ ಭೂಷಣ ಠಾಕೂರ ಹೇಳಿಕೆ ನೀಡಿದರು. ಈ ಹೇಳಿಕೆಯ ನಂತರ ಭಾಜಪವು ಠಾಕೂರ್ ಇವರಿಗೆ ‘ಕಾರಣ ನೀಡಿ’ ನೋಟಿಸ್ ಜಾರಿ ಮಾಡಿದೆ. ‘ಈ ಹೇಳಿಕೆಯ ನಿಜವಾದ ಅರ್ಥವೇನು ?’, ಇದರ ಸ್ಪಷ್ಟೀಕರಣ ನೀಡಲು ತಿಳಿಸಲಾಗಿದೆ.

ಬಿಹಾರದಲ್ಲಿ ಭಾಜಪ ಜೊತೆಗೆ ಅಧಿಕಾರದಲ್ಲಿರುವ ಸಂಯುಕ್ತ ಜನತಾದಳ ಈ ಹೇಳಿಕೆಯನ್ನು ಖಂಡಿಸಿದೆ. ಪಕ್ಷದ ವಕ್ತಾರ ನೀರಜ ಕುಮಾರ ಇವರು ಠಾಕೂರ ಅವರ ಹೇಳಿಕೆಯನ್ನು ನಿಂದನೀಯ ಎಂದು ಹೇಳಿದ್ದಾರೆ.