ಮಧುರೈ (ತಮಿಳುನಾಡು)ನಲ್ಲಿ ಮತದಾನದ ಸಮಯದಲ್ಲಿ ಮಹಿಳಾ ಮತದಾರರಿಗೆ ಹಿಜಾಬ್ ತೆಗೆಯಲು ಹೇಳಿದ್ದರಿಂದ ಭಾಜಪದ `ಬೂಥ ಏಜೆಂಟ್’ನ ಬಂಧನ

ತಮಿಳುನಾಡುವಿನಲ್ಲಿ ದ್ರಮುಕ ಸರಕಾರದ ಹಿಂದೂ ದ್ವೇಷದಿಂದ ಈ ಕ್ರಮ ಕೈಗೊಳ್ಳಲಾಗಿದೆ, ಇದು ಸ್ಪಷ್ಟವಾಗಿ ಕಾಣುತ್ತಿದೆ ! – ಸಂಪಾದಕರು 

ಮಧುರೈ (ತಮಿಳುನಾಡು) – ಇಲ್ಲಿಯ ಸ್ಥಳಿಯ ಸ್ವರಾಜ್ಯ ಸಂಸ್ಥೆಯ ಚುನಾವಣೆಯಲ್ಲಿ ಒಂದು ಮತದಾನ ಕೇಂದ್ರದಲ್ಲಿ ಭಾಜಪದ ಕೇಂದ್ರ (ಬೂಥ) `ಏಜೆಂಟ್’ ಗಿರಿರಾಜನ ಅವರು ಮುಸಲ್ಮಾನ ಮಹಿಳಾ ಮತದಾರರಿಗೆ ಹಿಜಾಬ್ ತೆಗೆಯಲು ಹೇಳಿದರು. ಆದ್ದರಿಂದ ಪೊಲೀಸರು ಗಿರಿರಾಜನವರನ್ನು ಬಂಧಿಸಿದ್ದಾರೆ. ಈ ಘಟನೆಯಿಂದ ದ್ರಾವಿಡ ಮುನ್ನೇತ್ರ ಕಳಗಂ(ದ್ರಾವಿಡ ಪ್ರಗತಿ ಸಂಘ) ಮತ್ತು ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಇವರು ಭಾಜಪಾದ ಮೇಲೆ ಧಾರ್ಮಿಕ ಸೌಹಾರ್ದತೆ ಕದಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದೆ.