೭೬೫ ವಿಚಾರವಂತರಿಂದ ಜಾಹಿರ ಪತ್ರ ಬರೆದು ಹಿಜಾಬ್‌ಗೆ ಬೆಂಬಲ !

ಈ ವಿಚಾರವಂತರಿಗೆ ಕಾಶ್ಮೀರದಲ್ಲಿ ಹಿಂದುಗಳ ನರಮೇಧದ ಬಗ್ಗೆ, ಅವರ ಪುನರ್ವಸತಿಗಾಗಿ ಉಗ್ರರಿಂದ ಆಗುತ್ತಿರುವ ವಿರೋಧದ ಬಗ್ಗೆ ಮತ್ತು ದೇಶದಲ್ಲಿ ವಿವಿಧ ಕಡೆಗಳಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಮತಾಂಧರ ದಾಳಿಯ ಬಗ್ಗೆ ಈ ರೀತಿಯ ಪತ್ರ ಬರೆಯಬೇಕು ಎಂದು ಏಕೆ ಅನಿಸಲಿಲ್ಲ ?, ಇದರ ಉತ್ತರ ಅವರು ನೀಡುವರೆ ? – ಸಂಪಾದಕರು

ಸಾಂದರ್ಭಿಕ ಚಿತ್ರ

ಬೆಂಗಳೂರು – ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಮೇಲಿನ ವಿವಾದ ಪ್ರಕರಣದಲ್ಲಿ ನ್ಯಾಯವಾದಿ, ಕಾನೂನಿನ ವಿದ್ಯಾರ್ಥಿ, ಶಿಕ್ಷಣ ತಜ್ಞರು, ಮತ್ತು ಸಾಮಾಜಿಕ ಕಾರ್ಯಕರ್ತರು ಹೀಗೆ ೭೬೫ ಜನರು ಜಾಹಿರ ಪತ್ರ ಬರೆದಿದ್ದಾರೆ. ಇದರಲ್ಲಿ ಅವರು ‘ಹಿಜಾಬ್ ಧರಿಸಲು ತಡೆಯುವುದು ಇದು ಮುಸಲ್ಮಾನರ ಸಾಂವಿಧಾನಿಕ ಅಧಿಕಾರದ ಉಲ್ಲಂಘನೆಯಾಗಿದೆ’, ಎಂದು ಹೇಳಿದ್ದಾರೆ. (ಮುಸಲ್ಮಾನರಿಗೆ ಸುಳ್ಳು ಸಾಂವಿಧಾನಿಕ ಅಧಿಕಾರ ವಿಷಯವಾಗಿ ಜಾಗೃತರಾಗಿರುವವರು ಎಂದಾದರೂ ಹಿಂದುಗಳ ಸಾಂವಿಧಾನಿಕ ಅಧಿಕಾರದ ಬಗ್ಗೆ ಮಾತನಾಡುವರೇ ?- ಸಂಪಾದಕರು) ಇದರಲ್ಲಿ, ‘ಸರಕಾರ ಆದೇಶ ನೀಡಿ ಮುಸಲ್ಮಾನ ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿಗಳಿಗೆ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಹಿಜಾಬ್ ಧರಿಸಲು ತಡೆದಿದ್ದರಿಂದ ಆ ಅವಮಾನದಿಂದ ನಮ್ಮ ತಲೆತಗ್ಗಿಸಬೇಕಾಯಿತು.’ (‘ಹೇಗೆ ಮಾತನಾಡಲು ಚಿಚಾರವಂತರಿಗೆ ನಾಚಿಕೆ ಹೇಗೆ ಅನಿಸುವುದಿಲ್ಲ ?’, ಇಂತಹ ಪ್ರಶ್ನೆಯನ್ನು ಮತಾಂಧರು ದೌರ್ಜನ್ಯ ನಡೆಸುವ ಪೀಡಿತ ಹಿಂದೂಗಳ ಮನಸ್ಸಿನಲ್ಲಿ ಬರಬಹುದು ! ಸಂಪಾದಕರು)