ಧರ್ಮವನ್ನು ಮನೆಯಲ್ಲಿ ಪಾಲಿಸಿರಿ, ಶಿಕ್ಷಣದಲ್ಲಿ ತರಬೇಡಿರಿ !
‘ವಿಶ್ವವಿದ್ಯಾಲಯದಲ್ಲಿ ಹಿಜಾಬ ಧರಿಸಿ ಬರಲು ಅನುಮತಿ ಕೊಡಿರಿ’, ಎಂದು ಬೇಡಿಕೆ ಮಾಡುವ ಕಾಂಗ್ರೆಸ್ಸಿಗರಿಗೆ ಈ ವಿಷಯದಲ್ಲಿ ಏನು ಹೇಳುವುದಿದೆ ?
ಬೆಂಗಳೂರು – ಭಾರತವು ಪ್ರತಿಯೊಬ್ಬರಿಗೂ ಧರ್ಮಾಚರಣೆಯ ಅವಕಾಶವನ್ನು ಕೊಟ್ಟಿದೆ; ಆದರೆ ಧರ್ಮಾಚರಣೆಯನ್ನು ಮನೆಯಲ್ಲಿಯೇ ಮಾಡಬೇಕು. ಮನೆಯಿಂದ ಹೊರಗೆ ಬಂದಾಗ ‘ನಾನು ಒಬ್ಬ ಭಾರತೀಯನಾಗಿದ್ದೇನೆ’, ಎಂದು ನಾವು ಅರಿತುಕೊಳ್ಳಬೇಕು. ಎಂದು ಕರ್ನಾಟಕದ ಯುವ ಕಾಂಗ್ರೆಸ್ಸಿನ ವಕ್ತಾರ ಸುರಯ್ಯಾ ಅಂಜುಮ ಇವರು ಕಾಂಗ್ರೆಸ್ ಮತ್ತು ವಿಶ್ವವಿದ್ಯಾಲಯದಲ್ಲಿ ಹಿಜಾಬ ಧರಿಸಲು ಅವಕಾಶ ನೀಡಲು ಬೇಡಿಕೆ ಮಾಡಿರುವ ಮುಸಲ್ಮಾನ ವಿದ್ಯಾರ್ಥಿನಿಯರಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಅವರ ಈ ಹೇಳಿಕೆಯ ಒಂದು ವಿಡಿಯೊ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದೆ. ಕಾಂಗ್ರೆಸ್ಸಿನ ಕಾರ್ಯದರ್ಶಿ ಪ್ರಿಯಾಂಕಾ ವಾಡ್ರಾ ಇವರು ವಿಶ್ವವಿದ್ಯಾಲಯಗಳಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರಿಗೆ ಹಿಜಾಬ ಧರಿಸಿ ಬರಲು ಅನುಮತಿ ನೀಡಲು ಕೋರಿಕೆಯನ್ನು ಬೆಂಬಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಂಜುಮ ಇವರ ಹೇಳಿಕೆ ಮಹತ್ವ ಪಡೆದಿದೆ.
ಶಿಕ್ಷಣಕ್ಕಿಂತ ಹಿಜಾಬ್ ಮುಖ್ಯವಲ್ಲ..! ಧರ್ಮಕ್ಕಿಂತ ದೇಶ ಮುಖ್ಯ: ಕಾಂಗ್ರೆಸ್ ವಕ್ತಾರೆ ಸುರಯ್ಯ ಅಂಜುಮ್..! https://t.co/egCUBo15lT #Btvnewslive #Btvnews #Btventertainment #Kannada #Hijab #not #important #than #education #Country #important #than #religion #Congress #spokesperson #SuraiyaAnjum
— BtvNews (@btvnewslive) February 8, 2022
ಸುರಯ್ಯಾ ಅಂಜುಮ ಇವರು ಮಂಡಿಸಿದ ಅಂಶಗಳು
೧. ಸಂವಿಧಾನ ನೀಡಿರುವ ಸ್ವಾತಂತ್ರ್ಯದ ದುರುಪಯೋಗವಾಗುತ್ತಿದೆ !
ಹಿಜಾಬ ನನ್ನ ಹಕ್ಕಾಗಿದೆ. ಹಿಜಾಬ ನನ್ನ ಧರ್ಮದ ಪ್ರತೀಕವಾಗಿದೆ. ದೇಶವು ನನ್ನ ಹಕ್ಕನ್ನು ಉಪಯೋಗಿಸಲು ಅವಕಾಶ ನೀಡಿದೆ; ಆದರೆ ನಮ್ಮ ಸಂವಿಧಾನದಲ್ಲಿ ನೀಡಿರುವ ಸ್ವಾತಂತ್ರ್ಯವನ್ನು ನಾವು ದುರುಪಯೋಗ ಪಡಿಸಿಕೊಳ್ಳುತ್ತಿದ್ದೇವೆ.
೨. ಧರ್ಮಕ್ಕಿಂತ ನನ್ನ ದೇಶ ದೊಡ್ಡದು !
ವಿದ್ಯಾರ್ಥಿಗಳಲ್ಲಿ ದೇಶದ ವಿಷಯದಲ್ಲಿ ಅಭಿಮಾನ ಕಡಿಮೆ ಆಗುವುದೇ, ಶಿಕ್ಷಣ ಸಂಸ್ಥೆಯಲ್ಲಿ ಧರ್ಮದ ವಿಚಾರದ ಬಗ್ಗೆ ಆಂದೋಲನಗಳು ನಡೆಯುವುದರ ಮುಖ್ಯ ಕಾರಣವಾಗಿದೆ. ಶಿಕ್ಷಣಕ್ಕಿಂತ ಬೇರೆ ಯಾವ ಧರ್ಮವೂ ದೊಡ್ಡದಲ್ಲ. ಧರ್ಮಕ್ಕಿಂತ ನನ್ನ ದೇಶ ದೊಡ್ಡದ್ದಾಗಿದೆ.
೩. ವಿದ್ಯಾರ್ಥಿಗಳು ಸಮವಸ್ತ್ರ ಧರಿಸಬೇಕು !
ವಿದ್ಯಾರ್ಥಿನಿಯರು ಸಧ್ಯ ‘ಹಿಜಾಬ ಧರಿಸಿಯೇ ಹೋಗುತ್ತೇವೆ’, ಎಂದು ಹಠ ಮಾಡುತ್ತಿದ್ದಾರೆ. ಶಾಲೆಯ ಕಾರ್ಯಕಾರಿ ಮಂಡಳಿಯು ‘ಬುರಖಾ ಅಥವಾ ಹಿಜಾಬ ಹಾಕಿಕೊಂಡು ಬರಬಾರದು’, ಎಂದು ಯಾವತ್ತೂ ಹೇಳಿಲ್ಲ; ಆದರೆ ‘ತರಗತಿಯಲ್ಲಿ ನೀವು ಹಿಜಾಬ ಧರಿಸಬಾರದು’, ಎಂದು ಹೇಳಿದೆ. ಇದರ ಕಾರಣವೆಂದರೆ ಅನೇಕ ವರ್ಷಗಳ ಹಿಂದಿನ ಭಾರತೀಯ ಶಿಕ್ಷಣ ಸಂಸ್ಥೆಯಲ್ಲಿ ಸಮವಸ್ತ್ರಗಳನ್ನು ಜಾರಿಗಳಿಸಲಾಗಿದೆ. ‘ಸಮವಸ್ತ್ರ’ ಈ ಶಬ್ದದಲ್ಲಿಯೇ ‘ನಾವು ಎಲ್ಲರೂ ಸಮಾನರಾಗಿದ್ದೇವೆ’, ಎಂದು ಅರ್ಥವಿದೆ; ಆದ್ದರಿಂದಲೇ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಬೇಕು.
೪. ಶಿಕ್ಷಣಸಂಸ್ಥೆಯಲ್ಲಿ ಧರ್ಮವನ್ನು ತರುವುದು ಬಹುದೊಡ್ಡ ತಪ್ಪು !
ಶಿಕ್ಷಣವನ್ನು ಪಡೆಯಲು ಬಂದಿರುವ ನಾವು ರಾಜಕಾರಣದಿಂದ ಪ್ರಭಾವಿತರಾಗಿ ಧರ್ಮವನ್ನು ಎತ್ತಿ ಹಿಡಿಯುತ್ತಿದ್ದೇವೆ. ಇದು ಮುಂದಿನ ೧೦ ವರ್ಷಗಳಲ್ಲಿ ದೇಶಕ್ಕೆ ಮಾರಕವಾಗಲಿದೆ. ಇಂದಿನ ವಿದ್ಯಾರ್ಥಿಗಳು ದೇಶದ ಭವಿಷ್ಯವಾಗಿದ್ದಾರೆ. ದೇಶದ ಭವಿಷ್ಯ ಧರ್ಮದ ಹೆಸರಿನಲ್ಲಿ ಕೆಡಿಸುತ್ತಿದ್ದೇವೆ. ಹಿಜಾಬ ಹಾಕಿ ಧರ್ಮಾಚರಣೆ ಮಾಡಿರಿ; ಆದರೆ ಶಿಕ್ಷಣ ಸಂಸ್ಥೆಗಳಲ್ಲಿ ಧರ್ಮವನ್ನು ತರುವುದು, ಬಹುದೊಡ್ಡ ತಪ್ಪಾಗಿದೆ.
೫. ಹಿಜಾಬ ಬೇಕಿದ್ದರೆ, ಇಸ್ಲಾಮಿ ವಿಶ್ವವಿದ್ಯಾಲಯಗಳಿಗೆ ಹೋಗಿರಿ !
ಈಗ ಶಿಕ್ಷಣ ಅನಿವಾರ್ಯವಾಗಿದೆ. ಇಲ್ಲಿ ಅನುಮತಿಯಿಲ್ಲದಿದ್ದರೆ ಹಿಜಾಬ ತೆಗೆದು ಕುಳಿತುಕೊಳ್ಳಿರಿ. ನಿಮಗೆ ಧರ್ಮವೇ ಮಹತ್ವದ್ದು ಎನಿಸುತ್ತಿದ್ದರೆ, ನಮ್ಮಲ್ಲಿ ಬಹಳಷ್ಟು ಇಸ್ಲಾಮಿ ವಿಶ್ವವಿದ್ಯಾಲಯಗಳಿವೆ. ಅಲ್ಲಿ ಹಿಜಾಬಗೆ ಅನುಮತಿ ಕೊಡುತ್ತಾರೆ. ಅಲ್ಲಿಗೆ ನೀವು ಹೋಗಬೇಕು.
೬. ಬಳೆ ಮತ್ತು ಕುಂಕುಮ ಇದು ಅಲಂಕಾರವಿದ್ದು ಅದು ಧರ್ಮದೊಂದಿಗೆ ಸಂಬಂಧವಿಲ್ಲ !
‘ಹಿಂದೂ ವಿದ್ಯಾರ್ಥಿನಿಯರು ಬಳೆ ಮತ್ತು ಕುಂಕುಮವನ್ನು ಹಾಕಿ ಬರುತ್ತಾರೆ’, ಎಂದು ಆರೋಪಿಸುತ್ತೀರಿ; ಆದರೆ ಅದು ಧರ್ಮಕ್ಕೆ ಸಂಬಂಧಿಸಿಲ್ಲ. ಅವುಗಳು ಅಲಂಕಾರದ ವಸ್ತುಗಳಾಗಿವೆ.
೭. ನಾಳೆ ೫ ಸಲ ನಮಾಜಕ್ಕಾಗಿಯೂ ಬೇಡಿಕೆ ಬರಬಹುದು !
ಇಂದು ಹಿಜಾಬ ಮತ್ತು ಕೇಸರಿ ಶಾಲಿಗಾಗಿ ಪ್ರತಿಭಟನೆಗಳು ನಡೆಯುತ್ತಿವೆ. ನಾಳೆ ‘೫ ಸಲ ನಮಾಜ ಮಾಡಲು ಅನುಮತಿ ನೀಡಬೇಕು’; ಎಂದು ಪ್ರತಿಭಟನೆಗಳನ್ನು ಮಾಡಬಹುದು. ಈ ರೀತಿಯಲ್ಲಿ ಬೇಡಿಕೆಗಳು ಬೆಳೆಯುತ್ತಲೇ ಹೋಗಬಹುದು, ಕಡಿಮೆಯಾಗುವುದಿಲ್ಲ. ದಯವಿಟ್ಟು ನೀವು ತರಗತಿಗಳಲ್ಲಿ ಸಮಾನತೆಯನ್ನು ಗೌರವಿಸಿರಿ ಎಂದು ಹೇಳಿದ್ದಾರೆ.